ಕಾಂಗ್ರೆಸ್ ಯುವರಾಜನ ಕೋಟೆಗೆ ಮಾಯಾ ಲಗ್ಗೆ

ದಲಿತರನ್ನು ಓಲೈಸಲು ಮುಂದಾಗಿರುವ ಬಿಎಸ್ಪಿ ಸರಕಾರ ರಾಜ್ಯದ ಪ್ರಮುಖ ಕೈಗಾರಿಕಾ ನಗರವಾದ ಕಾನ್ಪುರವನ್ನು 'ರಾಂಭಾಯಿ ನಗರ' ಎಂದು ಮರುನಾಮಕರಣ ಮಾಡಲು ನಿರ್ಧರಿಸಿದೆ.
ಗಾಂಧಿ ಕುಟುಂಬದ ಕರ್ಮಭೂಮಿ ಮತ್ತು ಪ್ರಭಾವ ಇರುವ ಅಮೇಥಿ, ರಾಯ್ ಬರೇಲಿ, ಸುಲ್ತಾನ್ ಪುರ ಗಳನ್ನೂ ಒಡೆದು ಹೊಸ ಜಿಲ್ಲೆಯೊಂದನ್ನು ಸೃಷ್ಟಿಸಿ ಮಾಯಾವತಿ ಸರ್ಕಾರ ಆದೇಶ ಹೊರಡಿಸಿದೆ.
ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳ ತೀವ್ರ ವಿರೋಧದ ನಡುವೆಯೂ ಈ ಹೊಸ ಜಿಲ್ಲೆಗೆ ದಲಿತ ದೊರೆ ಛತ್ರಪತಿ ಸಾಹುಜಿ ಮಹಾರಾಜ್ ಎಂದು ಹೆಸರಿಟ್ಟಿದ್ದಾರೆ. ರಾಯ್ ಬರೇಲಿ ಮತ್ತು ಸುಲ್ತಾನ್ ಪುರ ನಗರಗಳನ್ನು ಈ ಜಿಲ್ಲೆಯ ವ್ಯಾಪ್ತಿಯಿಂದ ಹೊರಗಿಡಲಾಗಿದೆ.
ಆದರೆ ವಿಶೇಷವೇನಂದರೆ, ಹೊಸ ಜಿಲ್ಲೆ ಸೃಷ್ಟಿಯಾಗಿದ್ದರೂ ರಾಹುಲ್ ಗಾಂಧಿ ಪ್ರತಿನಿಧಿಸುವ ಅಮೇಥಿ ಮತ್ತು ಸೋನಿಯಾ ಗಾಂಧೀ ಪ್ರತಿನಿಧಿಸುವ ರಾಯ್ ಬರೇಲಿ ಲೋಕಸಭಾ ಕ್ಷೇತ್ರದ ಹೆಸರಿಗೆ ಸದ್ಯಕ್ಕೆಯಾವುದೇ ಸಮಸ್ಯೆ ಇರುವುದಿಲ್ಲ.












Click it and Unblock the Notifications