ದೇಶದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳು

Delhi Map
ನವದೆಹಲಿ, ಜು. 2 : ಇತ್ತೀಚೆಗೆ ದೇಶದ ಪ್ರಮುಖ ನಗರಗಳು ಸೇರಿದಂತೆ ಜಿಲ್ಲಾ ಕೇಂದ್ರಗಳಲ್ಲಿಯೂ ಅತ್ಯಾಚಾರ ಪ್ರಕರಣಗಳು ಅವ್ಯಾಹತವಾಗತೊಡಗಿವೆ. ಕಾಲೇಜಿನ ಪ್ರಿನ್ಸಿಪಾಲ್ ನೊಬ್ಬ ತನ್ನ ವಿದ್ಯಾರ್ಥಿಯನ್ನೇ ಕಾಮತೃಷೆಗೆ ಬಳಸಿಕೊಳ್ಳುವಂತೆ ಕ್ರೂರ ಘಟನೆಯ ಜೊತೆಗೆ ಆಧ್ಯಾತ್ಮಿಕ ಕೇಂದ್ರದಲ್ಲಿ ಶಿಬಿರಕ್ಕೆ ಬಂದಿರುವ ಯುವತಿಯರನ್ನು ಲೈಂಗಿಕ ಚಟುಚಟಿಕೆಗಳಿಗೆ ಎಳೆಯುತ್ತಿರುವ ಸಂಗತಿಗಳು ಬೆಳಕಿಗೆ ಬಂದಿವೆ.

ತಮಿಳುನಾಡಿನ ಕೊಡೈಕೆನಾಲ್ ನಲ್ಲಿ

ತಮಿಳುನಾಡಿನ ಕೊಡೈಕೆನಾಲ್ ಪಬ್ಲಿಕ್ ಶಾಲೆಯ ಪ್ರಿನ್ಸಿಪಾಲ್ ಶಿಫಾ ಪಾಲ್ ಹಾಗೂ ಶಾಲೆಯ ಆಡಳಿತಾಧಿಕಾರಿ ಎಂ ಎಲ್ ಬ್ರೈಟ್ ಸೇರಿ ತಮ್ಮದೇ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿರುವ ಭೂತಾನಿನ ವಿದ್ಯಾರ್ಥಿನಿಯ ಲೈಂಗಿಕ ಕಿರುಕುಳ ನಡೆಸಿ ಪೊಲೀಸರ ಅತಿಥಿಯಾಗಿದ್ದಾರೆ. ಪ್ರಿನ್ಸಿಪಾಲ್ ಮತ್ತು ಆಡಳಿತಾಧಿಕಾರಿ ವಿರುದ್ಧ ಲೈಂಗಿಕ ಕಿರುಕುಳ ಆರೋಪವನ್ನು ವಿದ್ಯಾರ್ಥಿನಿ ದಾಖಲಿಸಿದ್ದು, ಸದ್ಯ ಈ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನದಲ್ಲಿರಿಸಿದ್ದಾರೆ.

ದೆಹಲಿಯಲ್ಲಿ

ಕಾಮಕ್ಕೆ ಕಣ್ಣಿಲ್ಲ ಎನ್ನುವುದು ನಾಣ್ನುಡಿ, ಕಾಮಕ್ಕೆ ವಯಸ್ಸಿನ ಹಂಗು ಇಲ್ಲ ಎನ್ನುವುದನ್ನು 12 ವರ್ಷದ ಬಾಲಕನೊಬ್ಬ ಸಾಬೀತು ಮಾಡಿದ್ದಾನೆ. ರಾಜಧಾನಿ ದೆಹಲಿಯ ಮಧ್ಯಬಾಗದಲ್ಲಿರುವ ತಿಲಕ್ ಮಾರ್ಗದ ಭಗವಾನ್ ದಾಸ್ ರಸ್ತೆಯಲ್ಲಿ ಸರಕಾರಿ ವಸತಿ ನಿಲಯದಲ್ಲಿ 12 ವರ್ಷ ಬಾಲಕನೊಬ್ಬ 14 ವರ್ಷ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಸದ್ಯ ಬಾಲಕನ್ನು ಬಂಧಿಸಿರುವ ಪೊಲೀಸರು, ಬಾಲ್ಯಪರಾಧಿ ಜೈಲಿನಲ್ಲಿ ಇರಿಸಿದ್ದಾರೆ.

ಕೊಲ್ಕತ್ತಾದಲ್ಲಿ

ಇಂತಹದೆ ಘಟನೆ ಕೊಲ್ಕತ್ತಾದಲ್ಲಿಯೂ ನಡೆದಿದ್ದು, 12 ಮತ್ತು 14 ವರ್ಷದ ಇಬ್ಬರು ಬಾಲಕರು ಕೇವಲ 5 ವರ್ಷ ಮಗುವಿನ ಮೇಲೆ ಅತ್ಯಾಚಾರ ನಡೆಸಿ ನಂತರ ಬರ್ಬರವಾಗಿ ಹತ್ಯೆ ಮಾಡಿ ನೇಣು ಹಾಕಿರುವ ಘಟನೆ ಕೊಲ್ಕತ್ತಾದಲ್ಲಿ ನಡೆದಿದೆ. ಜುಂಜುಮ್ ದಾಸ್(5) ಬರ್ಬರವಾಗಿ ಕೊಲೆಗೀಡಾದ ನತೃದೃಷ್ಟ ಬಾಲಕಿ. 10 ಅಂತಸ್ತಿನ ಮಹಡಿ ಮೇಲೆ ಕರೆದು ಹೋದ ಆರೋಪಿ ಬಾಲಕರು ಪುಟ್ಟ ಮಗುವಿನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯಿಂದ ಪಶ್ಚಿಮ ಬಂಗಾಲ ಬೆಚ್ಚಿ ಬೀಳುವಂತಾಗಿದ್ದು, ಮಕ್ಕಳ ಈ ಕೃತ್ಯ ಪೋಷಕರಲ್ಲಿ ಆತಂಕ ತಂದಿರುವಂತೂ ಸತ್ಯ.

ಕೇರಳದ ಪಾಲಾಕ್ಕಾಡ್ ಜಿಲ್ಲೆಯಲ್ಲಿ

ಕೇರಳದ ಪಾಲಾಕ್ಕಾಡ್ ಜಿಲ್ಲೆಯಲ್ಲಿ ಆಧ್ಯಾತ್ಮಿಕ ಕೇಂದ್ರ ತೆರದ ಕ್ಯಾಥೋಲಿಕ್ ಚಾರಿಟಿ ಆಫ್ ಆರ್ಗನೈಜೇಷನ್, ಆಧ್ಯಾತ್ಮ ಮತ್ತು ಯೋಗ ಶಿಬಿರಗಳನ್ನು ನಡೆಸುವುದಾಗಿ ಹೇಳಿ ಮಹಿಳಾ ಶಿಬಿರಾರ್ಥಿಗಳನ್ನು ಲೈಂಗಿಕ ಶೋಷಣೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಆಧ್ಯಾತ್ಮಿಕ ಕೇಂದ್ರದ ಟ್ರಸ್ಟಿಗಳನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಒಟ್ಟಿನಲ್ಲಿ ಶುಕ್ರವಾರ ದೇಶದ ವಿವಿಧ ಬಾಗಗಳಲ್ಲಿ ನಾಲ್ಕು ಲೈಂಗಿಕ ಕಿರುಕುಳ ಪ್ರಕರಣಗಳು ವರದಿಯಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+