ಕ್ಯಾಥೋಲಿಕ್ ಆಧ್ಯಾತ್ಮ ಕೇಂದ್ರದಲ್ಲಿ ಲೈಂಗಿಕ ಕಿರುಕುಳ

ಪಾಲಾಕ್ಕಾಡ್ ಜಿಲ್ಲೆಯಲ್ಲಿರುವ ಕ್ಯಾಥೋಲಿಕ್ ಚಾರಿಟಿ ಆರ್ಗನೈಜೇಷನ್ ನಡೆಸುವ ಈ ಆಧ್ಯಾತ್ಮಿಕ ಕೇಂದ್ರದಲ್ಲಿ ಆಧ್ಯಾತ್ಮಿಕ ಶಿಬಿರ ಹಾಗೂ ಯೋಗ ಶಿಬಿರಗಳನ್ನು ನಡೆಸಲಾಗುತ್ತದೆ ಎಂದು ಹೇಳಲಾಗಿದೆ. ಆದರೆ, ಆ ಸಂಸ್ಥೆಯ ಟ್ರಸ್ಟಿಗಳು ಆಧ್ಯಾತ್ಮಿಕ ಶಿಬಿರದಲ್ಲಿ ಪಾಲ್ಗೊಂಡಿದ್ದ ಐವರು ಯುವತಿಯರಿಗೆ ಲೈಂಗಿಕ ಕಿರುಕುಳವನ್ನು ನೀಡುತ್ತಿರುವುದನ್ನು ತಾಳಲಾರದೆ ಆ ಯುವತಿಯರು ಪೊಲೀಸರಿಗೆ ದೂರು ನೀಡಿದ್ದಾರೆ.
ಸಂಸ್ಥೆಯ ಟ್ರಸ್ಟಿಗಳ ಮೇಲೆ ಕೇಸ್ ಗಳನ್ನು ದಾಖಲಿಸಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆ ವೇಳೆಯಲ್ಲಿ ಕ್ಯಾಥೋಲಿಕ್ ಚಾರಿಟಿ ನಡೆಸುತ್ತಿರುವ ಈ ಆಧ್ಯಾತ್ಮಿಕ ಕೇಂದ್ರಕ್ಕೆ ಸರಕಾರದ ಅಧಿಕೃತ ಅನುಮತಿ ಇಲ್ಲದಿರುವುದು ಸಾಕಷ್ಟು ಗೊಂದಲ ಸೃಷ್ಟಿಸಿದೆ. ಕೇರಳ ಮಹಿಳಾ ಆಯೋಗವು ಸರಕಾರದ ವಿರುದ್ಧ ಪ್ರತಿಭಟನೆ ಆರಂಭಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದೆ.
ಸರಕಾರದ ಅನುಮತಿ ಇಲ್ಲದೆ ಆಧ್ಯಾತ್ಮಿಕ ಕೇಂದ್ರ ನಡೆಸಲು ಅನುಮತಿ ನೀಡಿದವರು ಯಾರು ಎಂದು ಪ್ರಶ್ನಿಸಿರುವ ಆಯೋಗದ ಅಧ್ಯಕ್ಷೆ ಡಿ ಶ್ರೀದೇವಿ, ರಾಜ್ಯದಲ್ಲಿ ಮಹಿಳೆಯರ ದೌರ್ಜನ್ಯ ಹೆಚ್ಚಾಗುತ್ತಿದ್ದು, ಸರಕಾರ ಕಣ್ಣು ಮುಚ್ಚಿ ಕುಳಿತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications