ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲ್ಕುರ್ಚಿಊರಿಗೆ ಬಂದಿದ್ದ ಕಾಳಿಂಗ ಸರ್ಪ

By Mahesh
|
Google Oneindia Kannada News

King Cobra captured in Shimoga
ಶಿವಮೊಗ್ಗ, ಜು.1: ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿಯಲ್ಲಿ ಹಣಗೆರೆ ವನ್ಯ ಜೀವಿ ವಲಯ ಸಿರಿಗೆರೆ ಈ ವ್ಯಾಪ್ತಿಯ ಕಲ್ಕುರ್ಚಿ ಊರಿನಲ್ಲಿ ಬೆಳ್ಳಂಬೆಳಗೆ ಕಾಳಿಂಗ ಸರ್ಪ[ಚಿತ್ರ ವೀಕ್ಷಿಸಿ] ಕಾಣಿಸಿಕೊಂಡು, ಗ್ರಾಮಸ್ಥರಿಗೆ ಆತಂಕ ಉಂಟು ಮಾಡಿತ್ತು.

ಆದರೆ, ಸರಿಯಾದ ಸಮಯಕ್ಕೆ ನೂರಾರು ಹಾವುಗಳ ಹಿಡಿದ ಸಾಧನೆ ಮಾಡಿರುವ ನಿಷ್ಣಾತ ಸ್ನೇಕ್ ಕಿರಣ್ ಅವರ ತಂಡ ಬಂದು ಹಾವು ಹಿಡಿದಿದ್ದಾರೆ.

ಕಲ್ಕುರ್ಚಿ ಊರಿನ ಕಮಲಮ್ಮರವರು ಎಂದಿನಂತೆ ಬೆಳಗ್ಗೆ ಒಲೆಯ ಗೂಡಿನ ಬಳಿ ಹೋದಾಗ , ಒಲೆಯಲ್ಲಿ ಬೆಚ್ಚಗೆ ಕೂತಿದ್ದ ಕಾಳಿಂಗ ಸರ್ಪ ಕಣ್ಣಿಗೆ ಬಿದ್ದಿದೆ. ಸುದ್ದಿಯನ್ನು ವಲಯದ ಅರಣ್ಯಾಧಿಕಾರಿಗಳಿಗೆ ತಕ್ಷಣ ತಿಳಿಸಿದ್ದಾರೆ.

ಅರಣ್ಯಸಿಬ್ಬಂದಿಗಳಾದ ಎಸ್.ವಿ. ಮಧುಕರ ವನಪಾಕ, ಎಂ.ಎಸ್. ಹುಲ್ಲತ್ತಿ ವನಪಾಲಕ, ಬಿ. ಹುಚ್ಚಪ್ಪ ಅರಣ್ಯ ವೀಕ್ಷಕರು, ಹಾಗು ತಂಡದವರ ಜೊತೆ ಸೇರಿ ಸ್ನೇಕ್ ಕಿರಣ ಅವರು 8 ಅಡಿ ಉದ್ದದ ಕಾಳಿಂಗ ಸರ್ಪವನ್ನು ಹಿಡಿದಿದ್ದಾರೆ. ವಲಯ ವ್ಯಾಪ್ತಿಯಲ್ಲೇ ಇರುವ ದಟ್ಟ ಅರಣ್ಯ ಪ್ರದೇಶವಾದ ಹಣಗೆರೆ ಬಳಿಯ ನಾಯಿ ಮುಟ್ಟಹಳ್ಳ ಬಳಿಯ ಗುಡ್ಡದಲ್ಲಿ ಬಿಟ್ಟು ಬಂದಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X