ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೇಪಾಳದಲ್ಲಿ ನಾಗಾಲ್ಯಾಂಡ್ ಗೃಹಸಚಿವ ಸೆರೆ

By Mahesh
|
Google Oneindia Kannada News

‎Nagaland Home Minister nabbed with illegal cash at Kathmandu Airport
ಕಠ್ಮಂಡು, ಜೂ. 30:ನೇಪಾಳ ಸರ್ಕಾರ ನಿಷೇಧ ಹೇರಿರುವ ಭಾರತದ ಕರೆನ್ಸಿ ನೋಟುಗಳನ್ನು ಸಾಗಿಸುತ್ತಿದ್ದ ನಾಗಾಲ್ಯಾಂಡ್ ಗೃಹ ಸಚಿವ ಇಮ್ಕಾಂಗ್ ಇಚೆನ್ ಅವರನ್ನು ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಬಂಧಿಸಲಾಗಿದೆ.

500 ಹಾಗೂ 1000 ಮುಖಬೆಲೆಯ ಭಾರತೀಯ ನೋಟುಗಳಿಗೆ ನೇಪಾಳ ಸರ್ಕಾರ ನಿಷೇಧ ಹೇರಿದೆ. ನಿಷೇಧಿತ ನೋಟುಗಳನ್ನು ಬ್ಯಾಗಿನಲ್ಲಿ ಸಾಗಿಸುವುದು ಅಪರಾಧವಾಗುತ್ತದೆ ಆದ್ದರಿಂದ ಭಾರತದ ಸಚಿವರನ್ನು ಬಂಧಿಸಿ ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಅವರಿಗೆ ಮಾಹಿತಿ ನೀಡಲಾಗಿದೆ ಎಂದು ಕಠ್ಮಂಡು ಪೊಲೀಸರು ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ನಾಗಾಲ್ಯಾಂಡ್ ಮುಖ್ಯಮಂತ್ರಿಯವರ ಮಾಧ್ಯಮ ಕಾರ್ಯದರ್ಶಿ ಅಬೂ ಮೆಹ್ತಾ,ನೇಪಾಳಕ್ಕೆ ತೆರಳುವ ಹೆಚ್ಚಿನ ಭಾರತೀಯರು ಈ ನಿಷೇಧದ ಕುರಿತು ಯಾವುದೇ ಮಾಹಿತಿ ಇರುವುದಿಲ್ಲ ಆದರಿಂದ, ಸಾಕಷ್ಟು ಜನ ಈ ರೀತಿ ತೊಂದರೆ ಅನುಭವಿಸಬೇಕಾಗುತ್ತದೆ ಎಂದಿದ್ದಾರೆ.

ಸಕುಟುಂಬ ಸಪರಿವಾರ ಸಮೇತ ನಾಗಾಲ್ಯಾಂಡ್ ಗೃಹಸಚಿವರು ಸುಮಾರು ಒಂಬತ್ತು ಲಕ್ಷ ರೂಪಾಯಿ ಹಣವನ್ನು ಬ್ಯಾಗಿನಲ್ಲಿ ತುಂಬಿಕೊಂಡು ನೇಪಾಳ ಪ್ರವಾಸ ಮಾಡಲು ತೆರಳಿದ್ದರು ಎಂದು ನಾಗಾಲ್ಯಾಂಡ್ ನ ಗೃಹ ಸಚಿವಾಲಯದಿಂದ ಮಾಹಿತಿ ಹೊರಬಿದ್ದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X