ಎಸ್ಸೆಂಎಸ್ ನಲ್ಲಿ ಪೊಲೀಸ್ ತನಿಖೆಯ ವಿವರಗಳು

ಆಶ್ಚರ್ಯವಾಗುತ್ತಿದೆಯೇ? ಹೌದು ಇದು ನಿಜ. ಆದರೆ ದೂರಿನೊಂದಿಗೆ ನಿಮ್ಮ ಮೊಬೈಲ್ ಸಂಖ್ಯೆಯನ್ನೂ ನೀಡಬೇಕು. ನಯಾಪೈಸೆ ಖರ್ಚಿಲ್ಲದಂತೆ ನಿಮ್ಮ ದೂರಿನ ತನಿಖೆ ಯಾವ ಹಂತದಲ್ಲಿದೆ ಎಂಬುದನ್ನು ಪೊಲೀಸ್ ಇಲಾಖೆ ಎಸ್ಸೆಂಎಸ್ ರೂಪದಲ್ಲಿ ತಿಳಿಸುತ್ತದೆ. ಇದಕ್ಕಾಗಿ ಬಿಡಿಗಾಸು ಖರ್ಚಾಗುವುದಿಲ್ಲ ಎಲ್ಲಾ ಟೋಲ್ ಫ್ರೀ. ಉಚಿತ ದೂರವಾಣಿ ಸಂಖ್ಯೆ 58181.
ನಿಮ್ಮ ಮೊಬೈನ್ ನಲ್ಲಿ ಎಫ್ ಐಆರ್ ನೋಂದಣಿ ದಾಖಲೆ ಮಾಡಿ 58181ಸಂಖ್ಯೆಗೆ ಎಸ್ಸೆಂಎಸ್ ಕಳುಹಿಸಿದರೆ ಸಾಕು. ನಿಮ್ಮ ದೂರಿನ ತನಿಖೆ ಯಾವ ಹಂತದಲ್ಲಿದೆ ಎಂಬುದು ನಿಮ್ಮ ಮೊಬೈಲ್ ಇನ್ ಬಾಕ್ಸ್ ಗೆ ಬಂದು ಬೀಳುತ್ತದೆ. ಈ ಸೌಲಭ್ಯ ದೊರೆಯಬೇಕಾದರೆ ನೀವು ಜುಲೈ 1ರವರೆಗೂ ಕಾಯಬೇಕು. ಪೊಲೀಸ್ ಇಲಾಖೆಯ ಈ ವಿಶೇಷ ಸೌಲಭ್ಯ ಬೆಂಗಳೂರು ನಗರದಲ್ಲಿ ಜಾರಿಗೆ ಬರಲಿದೆ ಎಂದು ನಗರ ಪೊಲೀಸ್ ಆಯುಕ್ತ ಶಂಕರ ಬಿದರಿ ತಿಳಿಸಿದ್ದಾರೆ.
ಸ್ವಂತ ಮೊಬೈಲ್ ಇಲ್ಲದಿದ್ದರೆ ಸಂಬಂಧಿಕರ, ಸ್ನೇಹಿತರ ಮೊಬೈಲ್ ಸಂಖ್ಯೆ ಕೊಟ್ಟರು ಸಾಕು. ಜುಲೈ 1ರಿಂದ ಈ ನಿಯಮ ಕಡ್ಡಾಯವಾಗಲಿದೆ. ನಗರ ಪೊಲೀಸರ ಈ ಹೈಟೆಕ್ ತಂತ್ರಗಾರಿಗೆ ದೂರುದಾರರಿಗೆ ವರದಾನವಾಗಿದೆ. ಪ್ರಕರಣಗಳ ತ್ವರಿತ ತನಿಖೆಗೆ ಇದು ಸಹಕಾರಿಯಾಗಲಿದೆ.












Click it and Unblock the Notifications