ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್ , ಡೀಸೆಲ್, ಎಲ್ ಪಿಜಿ ದರ ಏರಿಕೆ

By Mahesh
|
Google Oneindia Kannada News

Petrol, Diesel, LPg Price hike
ನವದೆಹಲಿ, ಜೂ.25: ಪ್ರಣಬ್ ಮುಖರ್ಜಿ ನೇತೃತ್ವದ ಸಚಿವ ಸಮೂಹ(eGOM)ದ ಸಲಹೆಯಂತೆ, ಇಂಧನ ದರ ಪರಿಷ್ಕರಣೆ ಮಾಡಲಾಗಿದ್ದು, ಪೆಟ್ರೋಲ್ , ಡೀಸೆಲ್, ಎಲ್ ಪಿಜಿ ಹಾಗೂ ಸೀಮೆಎಣ್ಣೆ ದರಗಳನ್ನು ಏರಿಸಲಾಗಿದೆ. ನೂತನ ದರಗಳು ಜೂ. 25ರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ ಎಂದು ಇಂಧನ ಇಲಾಖೆ ಕಾರ್ಯದರ್ಶಿ ಎಸ್. ಸುಂದರೇಶನ್ ಹೇಳಿದರು.

ಪೆಟ್ರೋಲ್ ಪ್ರತಿ ಲೀಟರ್ ಗೆ 3.73 ರುಪಾಯಿ, ಡೀಸೆಲ್ ಪ್ರತಿ ಲೀಟರ್ ಗೆ 2 ರುಪಾಯಿ, ಸೀಮೆಎಣ್ಣೆ ಪ್ರತಿ ಲೀಟರ್ ಗೆ 3 ರು ಹೆಚ್ಚಳ ಕಂಡಿದೆ. ಅಡುಗೆ ಅನಿಲ ಕೂಡಾ ಹೆಚ್ಚಳವಾಗಿದು, ಪ್ರತಿ ಸಿಲೆಂಡರ್ ಗೆ 35 ರು ಹೆಚ್ಚಳವಾಗಿದೆ.

ಪೆಟ್ರೋಲ್ ಮೇಲಿನ ಮಾರಾಟ ತೆರಿಗೆಯನ್ನು ಕಡಿತಗೊಳಿಸಲು ರಾಜ್ಯ ಸರ್ಕಾರಗಳಿಗೆ ಕೇಂದ್ರ ಸಚಿವ ಮುರಳಿ ದಿವೋರಾ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದ್ದರು. ಇದರ ಜೊತೆಗೆ ವಿವಿಧ ರಾಜ್ಯಗಳು ವಿಧಿಸಿರುವ ಮೌಲ್ಯವರ್ಧಿತ ತೆರಿಗೆ ಕೂಡ ಕಡಿತಗೊಳಿಸಿ, ಗ್ರಾಹಕರ ಮೇಲಿನ ಹೊರೆ ಕಮ್ಮಿ ಮಾಡುವಂತೆ ಎಂದು ಕೇಂದ್ರ ಸಚಿವರು ಇತ್ತೀಚೆಗೆ ಸೂಚಿಸಿದ್ದರು.

ಇಂಧನ ಕಂಪೆನಿಗಳಿಗೆ ನಷ್ಟ:ಬೆಲೆ ಪರಿಷ್ಕರಣೆ ಮಾಡದಿದ್ದಲ್ಲಿ ಈ ಹಣಕಾಸು ವರ್ಷದಲ್ಲಿ ತೈಲ ಕಂಪೆನಿಗಳು ಒಟ್ಟು 72,300 ಕೋಟಿ ರೂಪಾಯಿಗಳ ನಷ್ಟ ಅನುಭವಿಸಬೇಕಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿತ್ತು.

ಸಬ್ಸಿಡಿ ದರದಲ್ಲಿ ಇಂಧನ ಮಾರಾಟ ಮಾಡುತ್ತಿರುವ ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ ಹಾಗೂ ಭಾರತ್ ಪೆಟ್ರೋಲಿಯಂಗಳಿಗೆ ಪ್ರತಿದಿನ 203 ಕೋಟಿ ರು ನಷ್ಟು ನಷ್ಟವಾಗುತ್ತಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X