ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಗಸನಿಗೆ ಒಂದು ನ್ಯಾಯ,ಅರಸನಿಗೆ ಒಂದು ನ್ಯಾಯ

By Mahesh
|
Google Oneindia Kannada News

Chandravathi and Venkatesh Murthy
ಶಿವಮೊಗ್ಗ, ಜೂ.24: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹರತಾಳು ಹಾಲಪ್ಪ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದ್ದು ಜಾಮೀನು ಸಿಕ್ಕಿರುವ ಬಗ್ಗೆ ವೆಂಕಟೇಶ್ ಮೂರ್ತಿ ಬೇಸರ ವ್ಯಕ್ತಪಡಿಸಿದ್ದಾರೆ. ಇದು ಅಗಸನಿಗೆ ಒಂದು ನ್ಯಾಯ ಅರಸನಿಗೆ ಒಂದು ನ್ಯಾಯ ಎಂಬ ನಾಣ್ಣುಡಿಯನ್ನು ನೆನಪಿಸುತ್ತದೆ ಎಂದಿದ್ದಾರೆ.

ಹಾಲಪ್ಪ ವಿರುದ್ಧ ರಾಜ್ಯ ಪೊಲೀಸ್ ಮಹಾನಿರ್ದೇಶಕ ಮತ್ತು ಶಿವಮೊಗ್ಗ ವಿನೋಬಾ ನಗರದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ನಂತರ, ಮಾಧ್ಯಮದವರಿಂದ ದೂರವಿದ್ದ ವೆಂಕಟೇಶ್ , 2010 ರಲ್ಲಿ ಜನ ಸಾಮಾನ್ಯರಿಗೆ ಒಂದು ಕಾನೂನು, ರಾಜಕಾರಣಿಗಳಿಗೆ ಒಂದು ಕಾನೂನು ಎಂಬುದು ಗೊತ್ತ್ತಾಗುತ್ತದೆ. ಆದರೂ ಸಿಐಡಿ ಅಧಿಕಾರಿಗಳ ಮೇಲೆ ನಂಬಿಕೆಯಿದೆ. ತನಿಖೆ ಪೂರ್ಣಗೊಂಡಿಲ್ಲ. ನ್ಯಾಯಾಂಗ ವ್ಯವಸ್ಥೆ ಹದಗೆಟ್ಟಿಲ್ಲ ಎಂದರು.

ಗ್ಯಾಲರಿ:
ಹಾಲಪ್ಪಗೆ ಸುಸ್ತೋ ಸುಸ್ತು
ವಿಡಿಯೋ : ಮಾಧ್ಯಮದ ಮುಂದೆ ಚಂದ್ರಾವತಿ || ಹಾಲಪ್ಪ ಕಾಮಕಾಂಡದ ಚಿತ್ರಣ ||

ವಿಡಿಯೋ ಸಾಕ್ಷಿ ಪ್ರಕಾರ ಅತ್ಯಾಚಾರ ನಡೆದಿರುವುದು ರಾತ್ರಿ 10.30ರ ಸಮಯದಲ್ಲಿ. ಆದರೆ ದೂರಿನಲ್ಲಿ ಮುಂಜಾನೆ 3.30 ಎಂದು ದಾಖಲಿಸಲಾಗಿದೆ. ಈ ಗೊಂದಲಕ್ಕೆ ಕಾರಣ ಏನು ಎಂದು ಪ್ರಶ್ನಿಸಿದಾಗ, ಸಿಐಡಿ ಅಧಿಕಾರಿ ಚರಣ್ ರೆಡ್ಡಿ ಅವರು ಕೇಳಿದ ಎಲ್ಲಾ ದಾಖಲೆಯನ್ನು ನೀಡಿದ್ದೇವೆ. ದೂರವಾಣಿ ಸಂಭಾಷಣೆ, ವಿಡಿಯೋ ದೃಶ್ಯಗಳನ್ನು ಹೈಕೋರ್ಟ್ ಗೆ ಸಲ್ಲಿಸಲಾಗಿದೆ. ವ್ಯತ್ಯಾಸಗಳ ಬಗ್ಗೆ ತಿಳಿಯದು ಎಂದರು.

ಹಾಲಪ್ಪನ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 376, 342, 506, 341 ಮತ್ತು 34 ಅಡಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದ್ದು, ಸಿಐಡಿ ತನಿಖೆ ಜಾರಿಯಲ್ಲಿದೆ. ಹಾಲಪ್ಪನ ಬೆಂಬಲಿಗರು ನಮ್ಮ ಮೇಲೆ ದಾಳಿ ಮಾಡದಿದ್ದರೇ ಸಾಕು ಎಂದು ವೆಂಕಟೇಶ್ ಮೂರ್ತಿ ಹೇಳಿದರು. ಅಭಾಗಿನಿ ಚಂದ್ರಾವತಿ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಲು ಉಪಸ್ಥಿತರಿರಲಿಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X