ಫುಟ್ಬಾಲ್ ಕ್ರೇಜ್ ಗೆ ಮಕ್ಕಳೇ ಜೀವಂತ ಸಾಕ್ಷಿ
ಹುಟ್ಟಿದ ಮಗುವಿಗೆ ಇಟ್ಟ ಹೆಸರು "FIFA". ಹೌದು ಜಾಗತಿಕ ಫುಟ್ಬಾಲ್ ನಿಯಂತ್ರಣ ಮಂಡಳಿಯ ಹೆಸರನ್ನು ಹೆಣ್ಣು ಕೂಸೊಂದು ಪಡೆದಿದೆ. ಅಫ್ರಿಕನ್ನರ ಫುಟ್ಬಾಲ್ ಕ್ರೇಜ್ ಗೆ ಇದೊಂದು ಸಜೀವ ಉದಾಹರಣೆ.
ಇನ್ನೊಂದು ಮಗುವಿಗೆ 'ಕೆ ನಕೊ'(ke nako) ಎಂದು ಹೆಸರಿಸಲಾಗಿದೆ. ಕೆ ನಕೊ ಎಂಬುದು ಈ ವಿಶ್ವಕಪ್ ನ ಆಶಯ ವಾಕ್ಯವಾಗಿದೆ. 'ಕೆ ನಕೊ' ಎಂದರೆ ಇದೇ ಸಮಯ(ಸುಸಮಯ?) ಎಂದರ್ಥ.
ಈಗ ಫೀಫಾ ಹೆಣ್ಮಗುವಿನ ವಿಚಾರಕ್ಕೆ ಬರೋಣ. ಫೀಫಾ ನಷಿಂಗ ಆಕೆಯ ಪೂರ್ಣ ಹೆಸರು. ಜೋಹಾನ್ಸ್ ಬರ್ಗ್ ನ ರಹಿಮಾ ಮೂಸ ಆಸ್ಪತ್ರೆಯಲ್ಲಿ ಜನಸಿದಳು. ಬ್ಲೊಮ್ ಫೌಂಟನ್ ನ ಯುವ ದಂಪತಿ ಬುಸ್ಸಿವ ಲಂಡಿಸೊ ಹಾಗೂ ಸ್ಯಾಮುಯಲ್ ನಷಿವಗೆ ಹುಟ್ಟಿದ ಕೂಸಿನ ಹೆಸರೇ ಕೆ ನಕೊ.
ಸಾಕರ್ ಸಿಟಿಯಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಮೆಕ್ಸಿಕೋ ಪ್ರಥಮ ಪಂದ್ಯದ ಸಮಯದಲ್ಲಿ ಹುಟ್ಟಿದ ಅವಳಿ ಮಕ್ಕಳಿಗೆ ಎರಡು ತಂಡಗಳ ಹೆಸರನ್ನೇ ಮಕ್ಕಳಿಗೆ ಇಡಲಾಗಿದೆ. 'ಬಫನಾ'(ದಕ್ಷಿಣ ಆಫ್ರಿಕಾದ ಅಡ್ಡ ಹೆಸರು ಬಫನಾ-ಬಫನಾ) ಹಾಗೂ ಮೆಕ್ಸಿಕೋ ವೆಂಟರ್ ಕೂಸಿಗಳಿಗೆ ಸಿಕ್ಕ ಹೆಸರು.
ನನಗೆ ನನ್ನ ಪತ್ನಿ ರಿಯಾನಗೆ ವಿಶ್ವಕಪ್ ಸಮಯದಲ್ಲಿ ಅವಳಿಗಳು ಹುಟ್ಟುವುದರ ಬಗ್ಗೆ ತಿಳಿದಿತ್ತು. ಆದರೆ, ಉದ್ಘಾಟನಾ ಪಂದ್ಯದಂದೇ ಮಕ್ಕಳು ಜನಸಿದ್ದು, ಅಚ್ಚರಿ ಹಾಗೂ ಸಂತೋಷದಾಯಕ ವಿಷಯ ಎನ್ನುತ್ತಾರೆ ಚಾರ್ಲ್.
ಅಫ್ರಿಕಾದಲ್ಲಿ ಮಕ್ಕಳಿಗೆ ಹೆಸರಿಡುವಾಗ ಎದುರಿಗೆ ಏನು ಕಾಣಿಸುತ್ತದೆಯೋ ಅದರ ಹೆಸರೇ ಇಡುವುದು ರೂಢಿ ಎನ್ನುತ್ತಾರೆ. ವಿಶ್ವಕಪ್ ಹಬ್ಬದ ಸಂದರ್ಭದಲ್ಲಿ ಹುಟ್ಟೋ ಮಕ್ಕಳಿಗೆ ಹೆಸರಿಡುವುದು ಅಫ್ರಿಕನ್ನರಿಗೆ ಅತ್ಯಂತ ಸುಲಭದ ಕೆಲ್ಸವಾಗಿದೆ. 32 ತಂಡ, 32 X 23 + ರಿಸರ್ವ್ ಆಟಗಾರರು, ಕೋಚ್ ಗಳು ಮುಂತಾದವರ ಹೆಸರುಗಳು ಮನೆ ಮನೆಗೂ ತಲುಪಿದೆ.












Click it and Unblock the Notifications