ಗುಜರಾತ್ ಇ-ಮತದಾನಕ್ಕೆ ಅಸ್ತು; ಭಲೇ ಮೋದಿ
ಅಹಮದಾಬಾದ್,
ಜೂ.22 : ಇತರ ರಾಜ್ಯಗಳಿಗೆ ಹೋಲಿಸಿದರೆ ಅಭಿವೃದ್ದಿಯಲ್ಲಿ ಮಂಚೂಣಿಯಲ್ಲಿರುವ ನರೇಂದ್ರ ಮೋದಿ ನೇತೃತ್ವದ ಗುಜರಾತ್ ಸರಕಾರ ಇ-ಮತದಾನದತ್ತ ಹೆಜ್ಜೆ ಇಟ್ಟಿದೆ. ಇದೇ ಸೆಪ್ಟೆಂಬರ್ ನಲ್ಲಿ ನಡೆಯಲಿರುವ ಸ್ಥಳೀಯಸಂಸ್ಥೆ ಚುನಾವಣೆಯಲ್ಲಿ ಗುಜರಾತ್ ಸರಕಾರ ಇ-ವೋಟಿಂಗ್ ಆರಂಭಿಸಲಿದೆ. ಈ ಮೂಲಕ ಈ ವ್ಯವಸ್ಥೆ ಆರಂಭಿಸುತ್ತಿರುವ ದೇಶದ ಮೊದಲ ರಾಜ್ಯ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದೆ. id="toptextpromo">ಇ-ಮತದಾನ
ಇರುವ ಯುರೋಪ್ ನ ಹಲವು ರಾಷ್ಟ್ರಗಳ ಬಗ್ಗೆ ಅಧ್ಯಯನ ನಡೆಸಿ ವಿಸ್ತೃತ ಯೋಜನೆ ಹಾಕಿಕೊಂಡಿದೆ. ಈ ಪ್ರಕ್ರಿಯೆಗೆ ಭರದ ಸಿದ್ಧತೆ ಆರಂಭಿಸಿರುವ ಗುಜರಾತ್ ಸರಕಾರ, ಹ್ಯಾಕಿಂಗ್, ವೈರಸ್ ದಾಳಿ ಮತ್ತು ಮತದಾರರ ಹಾದಿ ತಪ್ಪಿಸುವ ಸಮಾನಾಂತರ ವೆಬ್ ಸೈಟ್ ಬಳಕೆ ಮುಂತಾದವನ್ನು ತಡೆಗಟ್ಟಲು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಯಾವುದೇ ಸಮಸ್ಯೆ ಎದುರಾಗದು ಎಂದು ರಾಜ್ಯ ಚುನಾವಣಾ ಆಯೋಗ ವಿಶ್ವಾಸ ವ್ಯಕ್ತ ಪಡಿಸಿದೆ. id='are-slot-1' class='oiad oi-axt oiadv'> id='top-searched-articles'>ನೋಂದಣಿ
ಸಮಯದಲ್ಲಿ ಮತದಾರ ತನ್ನ ಕಂಪ್ಯೂಟರ್ ಐಪಿ ವಿಳಾಸವನ್ನು ಕಡ್ಡಾಯವಾಗಿ ನೀಡಬೇಕು. ಮತದಾರ ತನ್ನ ಕ್ಷೇತ್ರ ಬಿಟ್ಟು ಬೇರೆ ಕಡೆ ಮತ ಚಲಾಯಿಸುವಂತಿಲ್ಲ. ಮತದಾರರಿಗೆ ಎರಡು ಪಾಸ್ ವರ್ಡ್ ನೀಡಲಾಗುವುದು, ಗುರುತು ಸಾಬೀತಾದ ನಂತರ ಎರಡನೇ ಪಾಸ್ ವರ್ಡ್ ಮೂಲಕ ಮತದಾನ ಮಾಡಬಹುದೆಂದು ರಾಜ್ಯ ಚುನಾವಣಾ ಆಯುಕ್ತರು ತಿಳಿಸಿದ್ದಾರೆ.











Click it and Unblock the Notifications