ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲ್ಕಿ ಆಶ್ರಮ ಮಾದಕ ವ್ಯಸನಿಗಳ ಆಡ್ಡಾ ಅಲ್ಲ

By Mahesh
|
Google Oneindia Kannada News

Kalki Bhagavan
ಬೆಂಗಳೂರು, ಜೂ.20: ಕಲ್ಕಿ ಭಗವಾನ್ ಆಶ್ರಮದಲ್ಲಿ ಅನೈತಿಕ ಚಟುವಟಿಕೆ ಹಾಗೂ ಅವ್ಯವಹಾರಗಳು ನಡೆಯುತ್ತಿವೆ. ಮಾದಕ ವ್ಯಸನಿಗಳ ಆಡ್ಡಾ ಆಗಿದೆ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಮಾಜಿ ಶಾಸಕ ಮಹಿಮಾ ಪಟೇಲ್ ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಶ್ರಮದ ಮಾಜಿ ನೌಕರ ವಿಶ್ವನಾಥ ಸ್ವಾಮಿ ಮಾಡಿರುವ ಆರೋಪಗಳಲ್ಲಿ ಸತ್ಯಾಂಶವಿಲ್ಲ. ಆಶ್ರಮಕ್ಕೆ ಕೆಟ್ಟ ಹೆಸರು ತರುವ ದುರುದ್ದೇಶ ಹಾಗೂ ಜನ ಸಮುದಾಯವನ್ನು ದಾರಿ ತಪ್ಪಿಸಲು ಸುಳ್ಳು ಆಪಾದನೆ ಮಾಡಲಾಗಿದೆ ಎಂದರು.

ಕಲ್ಕಿ ಭಗವಾನರ ಜೀವಾಶ್ರಮ ಸ್ಕೂಲಿನಲ್ಲಿ ಸಾಮಾನ್ಯ ಉದ್ಯೋಗಿಯಾಗಿದ್ದ ವಿಶ್ವನಾಥ ಸ್ವಾಮಿಯನ್ನು ಕೆಟ್ಟ ನಡವಳಿಕೆಯ ಕಾರಣದಿಂದ ಹೊರಹಾಕಲಾಗಿತ್ತು. ಹೀಗಾಗಿ ಅಶ್ರಮದ ವಿರುದ್ಧ ಆತ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಮಹಿಮಾ ತಿರುಗೇಟು ನೀಡಿದರು.

ಕಲ್ಕಿ ಆಶ್ರಮ ವಿವಿಧ ಟ್ರಸ್ಟ್ ಗಳ ಮೂಲಕ 165 ರಾಷ್ಟ್ರಗಳಲ್ಲಿ 300 ಮಿಲಿಯನ್‌ಗೂ ಹೆಚ್ಚು ಭಕ್ತರನ್ನು ಹೊಂದಿದೆ. ಜನರ ಶಾಂತಿ ಹಾಗೂ ನೆಮ್ಮದಿಗಾಗಿ ಆಧ್ಯಾತ್ಮಿಕ ಕಾರ್ಯಗಳಲ್ಲಿ ತೊಡಗಿದೆ. ಬಡ ಜನರ ಅಭಿವೃದ್ಧಿಗಾಗಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹಳ್ಳಿಗಳ ಸರ್ವತೊಮುಖ ಬೆಳವಣಿಗೆಗೆ ಶ್ರಮಿಸುತ್ತಿದೆ ಎಂದರು.

ಮಾಧ್ಯಮಗಳ ಬಗ್ಗೆ ಟೀಕೆ: ನಗರದ ಮಲ್ಯ ಆಸ್ಪತ್ರೆಯ ಹಿರಿಯ ವೈದ್ಯ ಡಾ. ಚೌಟ ಮಾತನಾಡಿ. ಆಶ್ರಮದಲ್ಲಿ ಯಾವುದೇ ರೀತಿಯ ಮಾದಕ ದ್ರವ್ಯಬಳಸುತ್ತಿಲ್ಲ . ಟಿವಿ ಮಾಧ್ಯಮದವರು ಮಠ, ಆಶ್ರಮಗಳ ಸುದ್ದಿ ಎಂದರೆ ರೋಚಕವಾಗಿ ತೋರಿಸುವುದೇ ಕಾಯಕ ಎಂದು ಕೊಂಡಿದ್ದಾರೆ. ಸತ್ಯಾಸತ್ಯತೆಯ ಅರಿವಿರಬೇಕು ಎಂದು ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X