ಇಂಗ್ಲೆಂಡ್ ಗೆಲ್ಲದಿರಲು ಮಾಟದ ಪಾರಿವಾಳ ಕಾರಣ?

Wich doctor curse for England football team?
ಲಂಡನ್, ಜೂ. 21 : ಸಂಜೆ ಕತ್ತಲು ಕವಿಯುತ್ತಿದ್ದಂತೆ ಚಿಲಿಪಿಲಿಗುಟ್ಟುತ್ತಾ ಬಾನಾಡಿಗಳು ತಮ್ತಮ್ಮ ಗೂಡುಗಳನ್ನು ಸೇರಿಕೊಳ್ಳುವುದು ವಾಡಿಕೆ. ಕೆಲ ನಿಶಾಚರಿ ಹಕ್ಕಿಗಳನ್ನು ಬಿಟ್ಟರೆ ಉಳಿದವು ಸೈನ್ ಆಫ್ ಮಾಡಿ ಗೂಡುಗಳನ್ನು ಸೇರಿಕೊಳ್ಳುತ್ತವೆ.

ಆದರೆ, ಆ ದಿನದಂದು ಆ ಹಕ್ಕಿ ತನ್ನ ಗೂಡು ಸೇರಿಕೊಂಡಿರಲಿಲ್ಲ. ಎಲ್ಲಿಂದಲೋ ಹಾರಾಡಿಕೊಂಡು ಬಂದು ಕತ್ತಲಾವರಿಸಿದ್ದರೂ ಸ್ಟೇಡಿಯಂನಲ್ಲಿ ಅತ್ತಿಂದಿತ್ತ ಹಾರಾಡಿಕೊಂಡು ಅಲ್ಲಿಯೇ ತಿರುಗಾಡುತ್ತಿತ್ತು.

ಮತ್ತು ಆ ಹಕ್ಕಿಯೇ ಇಂಗ್ಲೆಂಡ್ ತಂಡ ಅಲ್ಜೀರಿಯಾ ವಿರುದ್ಧ ಗೆಲ್ಲದಿರುವುದಕ್ಕೆ ಮೂಲ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ ಎಂದು ಸನ್ ಪತ್ರಿಕೆ ವರದಿ ಮಾಡಿದೆ. ಯಾರು ನಂಬುತ್ತಾರೋ ಬಿಡುತ್ತಾರೆ ಮೂಢನಂಬಿಕೆ ನಂಬುವವರಿಗೆ ಇದು ಮಾತ್ರ ಸಖತ್ ಸುದ್ದಿ.

30ನೇ ಶ್ರೇಯಾಂಕದಲ್ಲಿರುವ ಅಲ್ಜೀರಿಯಾದ ವಿರುದ್ಧ ಇಂಗ್ಲೆಂಡ್ ಡ್ರಾ ಮಾಡಿಕೊಂಡಿದ್ದರಿಂದ ಅಭಿಮಾನಿಗಳು ಭಾರೀ ದಾಂಧಲೆ ನಡೆಸಿದ್ದರು. ವೇಯ್ನ್ ರೂನಿ ತವರೂರಿನ ಅಭಿಮಾನಿಗಳನ್ನು ಕೆಣಕಿದ್ದರಿಂದ ಅಭಿಮಾನಿಗಳು ಮತ್ತಷ್ಟು ರೊಚ್ಚಿಗೆದ್ದು ಡೆವಿಡ್ ಬೆಕೆಮ್ ವಿರುದ್ಧ ಕೂಡ ಘೋಷಣೆಗಳನ್ನು ಕೂಗಿದ್ದರು. ಈಗ ಇಂಗ್ಲೆಂಡ್ ಗೆಲ್ಲಲಾಗದಿದ್ದಕ್ಕೆ ಸ್ಟೇಡಿಯಂಗೆ ಬಂದ ಆ ಪಾರಿವಾಳವೇ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಆಫ್ರಿಕಾದಲ್ಲಿ ಮಾಟ ಮಂತ್ರ, ಮೂಢನಂಬಿಕೆಗಳಿಗೇನೂ ಕೊರತೆಯಿಲ್ಲ. ಅಲ್ಜೀರಿಯಾದ ಭದ್ರಗೋಡೆಯನ್ನು ಇಂಗ್ಲೆಂಡ್ ಭೇದಿಸಲು ಸಾಧ್ಯವಾಗಬಾರದೆಂದು ಮಂತ್ರಿಸಿದ ಪಾರಿವಾಳವನ್ನು ಅಲ್ಜೀರಿಯಾ ಬೆಂಬಲಿಗ ಮಾಂತ್ರಿಕ ವೈದ್ಯ ಕಳಿಸಿರಬಹುದು. ಇಂಗ್ಲೆಂಡ್ ಆ ಅಪಶಕುನದಿಂದ ಹೊರಬರಲು ಒಂದು ಬಗೆಯ ಮರದ ಪುಡಿಯಿಂದ ಸ್ನಾನ ಮಾಡಬೇಕೆಂದು ಪಾಪನಿವಾರಣೆಯ ಸಲಹೆ ನೀಡಲಾಗಿದೆ. ನಂಬಿದ್ರೆ ನಂಬಿ ಬಿಟ್ರೆ ಬಿಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+