ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಕಿರುತೆರೆಯ ಭಾರತಕ್ಕೆ ತಂದ ರಿಲಯನ್ಸ್

By Mahesh
|
Google Oneindia Kannada News

Anil Ambani
ಮುಂಬೈ, ಜೂ.20: ಎಡಿಎ ಸಮೂಹದ ರಿಲಯನ್ಸ್ ಬ್ರಾಡ್ ಕಾಸ್ಟ್ ನೆಟ್ ವರ್ಕ್ ಲಿಮಿಟೆಡ್ (ಈ ಹಿಂದಿನ ರಿಲಯನ್ಸ್ ಮೀಡಿಯಾ ವರ್ಲ್ಡ್ ಲಿಮಿಟೆಡ್ ) ಟಿವಿ ಮಾಧ್ಯಮಕ್ಕೆ ಅಧಿಕೃತವಾಗಿ ಪ್ರವೇಶಿಸಲು ಸಿದ್ಧತೆ ನಡೆಸಿದೆ.

ಅಮೆರಿಕ ಮೂಲದ ಸಿಬಿಎಸ್ ಕಾರ್ಪೊರೇಷನ್ ನ ಅಂಗ ಕಂಪೆನಿ ಸಿಬಿಎಸ್ ಸ್ಟುಡಿಯೋಸ್ ಜತೆ ಶೇ.50೦:50ರ ಅನುಪಾತದ ಪಾಲಿನೊಂದಿಗೆ ನೂತನ ಕಂಪೆನಿ ಸ್ಥಾಪನೆಗೆ ಅನಿಲ್ ಒಡೆತನದ ರಿಲಯನ್ಸ್ ಮುಂದಾಗಿದೆ.

ಪ್ರಸ್ತುತ ಸಿಬಿಎಸ್ ಇಂಗ್ಲಿಷ್ ಚಾನೆಲ್ ಗಳ ನಿರ್ವಹಣೆ ಹಾಗೂ ಪ್ರಸಾರದಲ್ಲಿ ತೊಡಗಿದ್ದು ಮುಂದೆ ಸಹಯೋಗದೊಂದಿಗೆ ಹಿಂದಿ ಹಾಗೂ ಪ್ರಾದೇಶಿಕ ಭಾಷೆಗಳ ಟಿವಿ ಚಾನೆಲ್ ನಿರ್ವಹಣೆ ಹಾಗೂ ಮಾಲೀಕತ್ವ ಹೊಂದಲು ಯೋಜನೆ ಹಾಕಿಕೊಂಡಿದೆ.

ಈ ಸಹಯೋಗದೊಂದಿಗೆ ಭಾರತ, ನೇಪಾಳ, ಭೂತಾನ್, ಶ್ರೀಲಂಕಾ, ಬಾಂಗ್ಲಾದೇಶ, ಮಾಲ್ಡೀವ್ಸ್ ಮತ್ತು ಪಾಕಿಸ್ಥಾನದಲ್ಲಿ ಪ್ರಸಾರ ಹಕ್ಕನ್ನುಪಡೆಯಲು ಉದ್ದೇಶಿಸಿದೆ. ಎರಡೂ ಕಂಪೆನಿಗಳು ಈ ಕುರಿತ ಒಪ್ಪಂದಕ್ಕೆ ಭಾನಿವಾರ ಸಹಿ ಹಾಕಿವೆ. ರಿಲಯನ್ಸ್ ಪ್ರಸ್ತುತ ಬಿಗ್ ಎಫ್ ಎಮ್ ರೇಡಿಯೋ ಚಾನೆಲ್ ಮಾಲೀಕತ್ವ ಹೊಂದಿದೆ.

ದಿ ಓಪ್ರಾ ವಿನ್ ಫ್ರೆ ಷೋ, ಯಂಗ್ ಅಂಡ್ ರೆಸ್ಟ್ ಲೆಸ್, ಅಮೆರಿಕಾಸ್ ನೆಕ್ಸ್ಟ್ ಟಾಪ್ ಮಾಡೆಲ್, ಎಂಟರ್ ಟೈನ್ ಮೆಂಟ್ ಟುನೈಟ್ ಮುಂತಾದ ಅತ್ಯಂತ ಜನಪ್ರಿಯ ಕಾರ್ಯಕ್ರಮಗಳನ್ನು ಪ್ರೇಕ್ಷಕರಿಗೆ ನೀಡಿದ ಕೀರ್ತಿಯನ್ನು ಸಿಬಿಎಸ್ ಕಾರ್ಪೊರೇಷನ್ ಹೊಂದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X