ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫ್ರಾನ್ಸ್ ವಿಶ್ವಕಪ್ ಕನಸು ನುಚ್ಚುನೂರು?

By Mahesh
|
Google Oneindia Kannada News

FIFA 2010
ಜೋಹಾನ್ಸ್ ಬರ್ಗ್ ,ಜೂ.19:ವಿಶ್ವಕಪ್ 2010 ರ ಉತ್ತಮ ತಂಡಗಳಲ್ಲಿ ಒಂದು ಎನಿಸಿದ್ದ ಫ್ರಾನ್ ಮೊದಲ ಸುತ್ತಿನ ನಂತರ ಟೂರ್ನಿಯಿಂದಲೇ ಹೊರಗೆ ನಡೆಯುವಂತೆ ಮೆಕ್ಸಿಕೋ ತಂಡ ಮಾಡಿದೆ. ಮೆಕ್ಸಿಕೋಗೆ 2-0 ಗೋಲುಗಳಿಂದ ಸೋಲುಂಡ ಫ್ರಾನ್ಸ್ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದೆ.

1998ರಲ್ಲಿ ಬ್ರೆಜಿಲ್ ಅನ್ನು 3-0ಅಂತರದಿಂದ ಸೋಲಿಸಿ ಫ್ರಾನ್ಸ್ ವಿಶ್ವಕಪ್ ಚಾಂಪಿಯನ್ ಆಗಿದ್ದಲ್ಲದೆ, ಕಳೆದ ಬಾರಿ ವಿಶ್ವಕಪ್ ನ ಅಂತಿಮ ಹಣಾಹಣಿಯಲ್ಲಿ ಪೆನಾಲ್ಟಿ ಶೂಟೌಟ್ ನಲ್ಲಿ ಇಟಲಿಗೆ ಶರಣಾಗಿತ್ತು.

ಜೂನ್ 22 ರಂದು ನಡೆಯುವ ಮೆಕ್ಸಿಕೋ ಹಾಗೂ ಉರುಗ್ವೆ ಪಂದ್ಯ ಫ್ರಾನ್ಸ್ ಹಾಗೂ ದಕ್ಷಿಣ ಆಫ್ರಿಕಾ ಪಾಲಿಗೆ ಮಹತ್ವದ್ದಾಗಿದೆ. ಅಂದು ಎ ಗುಂಪಿನ ಅಗ್ರಸ್ಥಾನ ಪಡೆವ ತಂಡ ಯಾವುದು ಎಂದು ನಿರ್ಧಾರವಾಗಲಿದೆ. ಮೆಕ್ಸಿಕೋ ಹಾಗೂ ಉರುಗ್ವೆ ತಂಡಗಳಿಗೆ ಅಂದಿನ ಪಂದ್ಯ ಡ್ರಾ ಆದರೂ ಮುಂದಿನ ಸುತ್ತಿನ ಪ್ರವೇಶ ಸಾಧ್ಯ. ಆ ಪಂದ್ಯದ ನಂತರ ನಡೆಯುವ ಫ್ರಾನ್ ಹಾಗೂ ದಕ್ಷಿಣ ಆಫ್ರಿಕಾ ಪಂದ್ಯದಲ್ಲಿ ಯಾರೇ ಗೆದ್ದರೂ ಪ್ರಯೋಜನವಾಗುವುದಿಲ್ಲ..

ಫ್ರಾನ್ ಹಾಗೂ ದ ಕ್ಷಿಣ ಆಫ್ರಿಕಾ ಮುಂದಿನ ಸುತ್ತಿನ ಪ್ರವೇಶಕ್ಕೆ ಹಾದಿ ಕಠಿಣವಾಗಿದೆ. ಮೆಕ್ಸಿಕೋ ಹಾಗೂ ಉರುಗ್ವೆ ಪಂದ್ಯದಲ್ಲಿ ಮೆಕ್ಸಿಕೋ ಅಥವಾ ಉರುಗ್ವೆ ಗೆಲುವು ಸಾಧಿಸಬೇಕು.ಫ್ರಾನ್ಸ್ ಹಾಗೂ ದಕ್ಷಿಣ ಆಫ್ರಿಕಾ ಕೂಡಾ ಅಂದು ಜಯ ಗಳಿಸಲೇಬೇಕು. ಆಗ ಅಗ್ರಸ್ಥಾನ ಪಡೆದ ತಂಡದ ಜೊತೆಗೆ ಗೋಲು ಅಂತರಗಳ ಲೆಕ್ಕದ ಆಧಾರದ ಮೇಲೆ 16ರ ಸುತ್ತು ಪ್ರವೇಶ ಸಾಧ್ಯ. ಸದ್ಯ ಮೆಕ್ಸಿಕೋ ಹಾಗೂ ಉರುಗ್ವೆ ತಲಾ 4 ಅಂಕಗಳು ಫ್ರಾನ್ಸ್ ಹಾಗೂ ದಕ್ಷಿಣ ಆಫ್ರಿಕಾ ತಲಾ 1 ಅಂಕಗಳನ್ನ್ನು ಪಡೆದಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X