ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರ್ಜೆಂಟಿನಾದ ಹಿಗ್ವೇನ್ ರಿಂದ ಮೊದಲ ಹ್ಯಾಟ್ರಿಕ್

By Prasad
|
Google Oneindia Kannada News

Gonzalo Higuain of Argentina
ಜೋಹಾನ್ಸ್ ಬರ್ಗ್, ಜೂ. 18 : ಎರಡು ಬಾರಿ ವಿಶ್ವಕಪ್ ಗೆದ್ದಿರುವ ಅರ್ಜೆಂಟಿನಾ ದಕ್ಷಿಣ ಕೊರಿಯಾ ತಂಡವನ್ನು ಬಿ ಗ್ರೂಪ್ ನ ಎರಡನೇ ಸುತ್ತಿನ ಪಂದ್ಯದಲ್ಲಿ 4-1 ಗೋಲುಗಳಿಂದ ಸದೆಬಡಿದಿದೆ.

ದಕ್ಷಿಣ ಕೊರಿಯಾದ ಪಾರ್ಕ್ ಚು-ಯಂಗ್ ಗಳಿಸಿದ ಸ್ವಯಂ ಗೋಲಿನಿಂದ ಆರಂಭದಲ್ಲಿಯೇ ಅರ್ಜೆಂಟಿನಾ ತಂಡ ಮುನ್ನಡೆ ಪಡೆಯಿತು. ಅತ್ಯಂತ ಆಕ್ರಮಣಕಾರಿ ಆಟವಾಡಿದ ಅರ್ಜೆಂಟಿನಾ ಕೆಲವೇ ಹೊತ್ತಿನಲ್ಲಿ ಇನ್ನೊಂದು ಗೋಲು ಗಳಿಸಿ ಮುನ್ನಡೆ ಸಾಧಿಸಿತು. ಗೊಂಜಾಲೋ ಹಿಗ್ವೇನ್ ಎರಡನೇ ಗೋಲು ಗಳಿಸಿದರು.

ಡಿಯಾಗೋ ಮರಡೋನಾರ ಹುಡುಗರನ್ನು ಹಿಡಿದಿಡುವಲ್ಲಿ ಸಾಕಷ್ಟು ತಿಣುಕಾಡಿದ ದಕ್ಷಿಣ ಕೊರಿಯಾ ಕೆಲ ಹೊತ್ತಿನಲ್ಲಿ ತನ್ನ ಮೊದಲ ಗೋಲು ಹೊಡೆಯಿತು. ಕೊರಿಯಾದ ಲಿ ಚುಂಗ್-ಯಾಂಗ್ ಗೋಲು ಬಾರಿಸಿ ಕೊರಿಯನ್ನರ ಮೊಗದಲ್ಲಿ ಸಂತಸದ ಅಲೆ ಎಬ್ಬಿಸಿದ್ದರು. ಆದರೆ ಇದು ಬಹಳ ಹೊತ್ತು ನಿಲ್ಲಲಿಲ್ಲ.

ಅದ್ಭುತ ಆಟವನ್ನು ಮುಂದುವರಿಸಿದ ಗೊಂಜಾಲೋ 76ನೇ ನಿಮಿಷದಲ್ಲಿ ಒಂದರ ಹಿಂದೊಂದು ಎರಡು ಗೋಲು ಗಳಿಸಿ ತಂಡವನ್ನು ಗೆಲುವಿನ ಹಾದಿಯಲ್ಲಿ ನಿಲ್ಲಿಸಿದರು. 19ನೇ ಫೀಫಾ ವಿಶ್ವಕಪ್ 2010ರಲ್ಲಿ ಮೊದಲ ಹ್ಯಾಟ್ರಿಕ್ ಗಳಿಸಿದ ಹೆಗ್ಗಳಿಕೆಗೆ ಗೊಂಜಾಲೋ ಹಿಗ್ವೇನ್ ಪಾತ್ರರಾದರು.

ತಂಡದ ಪ್ರಮುಖ ಆಟಗಾರರಾದ ಲಿಯೋನೆಲ್ ಮೆಸ್ಸಿ ಮತ್ತು ಕಾರ್ಲೋಸ್ ಟ್ರಾವೆಜ್ ಯಾವುದೋ ಗೋಲು ಗಳಿಸದಿದ್ದರೂ ಗೆಲುವಿನಲ್ಲಿ ಅವರ ಪಾತ್ರ ಕಡೆಗಣಿಸುವಂತಿರಲಿಲ್ಲ. ಎದುರಾಳಿ ಆಟಗಾರರು ಇಬ್ಬರೂ ಮುನ್ನಡೆಯದಂತೆ ಕಟ್ಟಿಹಾಕುವಲ್ಲಿ ಯಶ ಕಂಡರು.

ನೈಜೀರಿಯಾ ವಿರುದ್ಧ ಹಿಂದಿನ ಪಂದ್ಯವನ್ನು ಗೆದ್ದಿರುವ ಅರ್ಜೆಂಟಿನಾ ಹೆಚ್ಚೂ ಕಡಿಮೆ ಬಿ ಗ್ರೂಪಿನಲ್ಲಿ ಹದಿನಾರರ ಹಂತ ತಲುಪುವುದು ಖಚಿತವಾಗಿದೆ. ಎರಡು ಗೆಲುವುಗಳಿಂದ ಬೀಗುತ್ತಿರುವ ಡಿಯಾಗೋ ಮರಡೋನಾ, ನಮ್ಮ ಗೆಲುವಿನ ಓಟವನ್ನು ಇದೇ ರೀತಿ ಮುಂದುವರಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X