ಸಗೋತ್ರ ವಿವಾಹ ತಡೆಗೆ ಸು.ಕೋರ್ಟ್ ನಕಾರ

ವಿಚಾರಣೆ ನಡೆಸಲು ನಿರಾಕರಿಸಿದ ಸುಪ್ರೀಂಕೋರ್ಟ್, ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್ ಗಳಲ್ಲಿ ಮನವಿ ಸಲ್ಲಿಸಲು ಅರ್ಜಿದಾರರಿಗೆ ಸೂಚಿಸಿದೆ.
ಸಗೋತ್ರ ವಿವಾಹಗಳನ್ನು ತಡೆಗಟ್ಟಲು ಹಿಂದೂ ವಿವಾಹ ಅಧಿನಿಯಮಕ್ಕೆ ತಿದ್ದುಪಡೆ ತರಬೇಕೆಂದು ಖಾಪ್ ಪಂಚಾಯತ್ ಗಳ ನಿಯೋಗ ಆಗ್ರಹಿಸಿದ್ದವು.ಈ ನಿಟ್ಟಿನಲ್ಲಿ ಜೂ.10 ರಂದು ಚಂಡೀಗಢದಲ್ಲಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ್ದರು.
ಸಗೋತ್ರ ವಿವಾಹಕ್ಕೆ ಸಿಎಂ ಭೂಪಿಂದರ್ ವಿರೋಧ ವ್ಯಕ್ತಪಡಿಸಿದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ವ ಪಕ್ಷಗಳ ಸಭೆ ಕರೆದು ಚರ್ಚಿಸುವ ಅಗತ್ಯವಿದೆ. ನಾವೂ ಸಹ ಅಗಸ್ಟ್1ರಂದು ಮೆಹಂನಲ್ಲಿ ದೇಶದ ಎಲ್ಲಾ ಖಾಪ್ ಪಂಚಾಯತ್ ಗಳ ಮಹಾಪಂಚಾಯತ್ ಕರೆದಿದ್ದೇವೆ ಎಂದು ಖಾಪ್ ಪಂಚಾಯತ್ ಮುಖ್ಯಸ್ಥ ಮೇವಾ ಸಿಂಗ್ ಪ್ರತಿಕ್ರಿಯಿಸಿದ್ದಾರೆ.











Click it and Unblock the Notifications