ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನದ ಬೆಲೆ ಶೇ.20 ಇಳಿಕೆ ಸಾಧ್ಯತೆ?

By Mahesh
|
Google Oneindia Kannada News

Gold rates to ease by 20pc
ನವದೆಹಲಿ,ಜೂ.10: ಚಿನ್ನದ ಬೆಲೆ ಗಗನಕ್ಕೇರಿ ಮದ್ಯಮ ವರ್ಗದ ಜನರ ಚಿನ್ನ ಕೊಳ್ಳುವ ಆಸೆಗೆ ತಣ್ಣೀರೆರಚಿದೆ. ದೆಹಲಿಯಲ್ಲಿ ಚಿನ್ನದ ಬೆಲೆ 10 ಗ್ರಾಮ್ ಗೆ ಸರ್ವಕಾಲಿಕ ದಾಖಲೆಯ ರು.19,220ಕ್ಕೇರಿದ್ದೆ.

ಯುರೋಪಿಯನ್ ಆರ್ಥಿಕ ಬಿಕ್ಕಟ್ಟು ಕಡಿಮೆಯಾದಲ್ಲಿ ಈ ದರಕ್ಕಿಂತ ಶೇ.20 ರಷ್ಟು ಕಡಿಮೆಯಾಗಲಿದೆ ಎಂದು ಮೆಟಲ್ಸ್ ಅಂಡ್ ಮಿನರಲ್ ಟ್ರೇಡಿಂಗ್ ಕಾರ್ಪೊರೇಷನ್ (ಎಮ್‌ಎಮ್‌ಟಿಸಿ)ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಂಜೀವ್ ಬಾತ್ರ ಹೇಳಿದ್ದಾರೆ.

ಯೂರೋಪ್ ನ ಮಾರುಕಟ್ಟೆ ಉತ್ತಮಗೊಂಡರೆ ಚಿನ್ನದ ಬೆಲೆಯಲ್ಲಿ ಶೇ.10 ರಿಂದ 20 ರಷ್ಟು ಕಡಿತವಾಗಲಿದೆ. ಎಮ್ ಎಮ್ ಟಿ ಸಿ ದೇಶದ ಅತೀ ದೊಡ್ಡ ಚಿನ್ನ ಆಮದುದಾರನಾಗಿದ್ದು ಚಿನ್ನದ ಬೆಲೆ ಹೀಗೇ ಮುಂದುವರಿದರೆ ಆಮದು ಕಡಿಮೆಯಾಗಲಿದೆ ಎಂದು ಸಂಜೀವ್ ಹೇಳಿದರು.

2009-10 ರ ಆರ್ಥಿಕ ವರ್ಷದಲ್ಲಿ ಎಮ್ ಎಮ್ ಟಿಸಿ 186.83 ಟನ್ ಚಿನ್ನವನ್ನು ಆಮದು ಮಾಡಿಕೊಂಡಿದ್ದು, ದೇಶ ಒಟ್ಟು 738.81ಟನ್ ಗಳಷ್ಟು ಚಿನ್ನವನ್ನು ಆಮದು ಮಾಡಿಕೊಂಡಿದೆ. ಮಂಗಳವಾರ ಲಂಡನ್ ನಲ್ಲೂ ಚಿನ್ನದ ಬೆಲೆ ದಾಖಲೆಯ ಪ್ರತೀ ಔನ್ಸ್ ಗೆ 1252.90 ಡಾಲರ್ ತಲುಪಿತ್ತು. ದೇಶದ ಸರಕು ವಾಯಿದಾ ಪೇಟೆಯಲ್ಲೂ ಚಿನ್ನದ ಬೆಲೆ ಮಂಗಳವಾರ ಪ್ರತೀ ಹತ್ತು ಗ್ರಾಂ ಗೆ 19,198 ರುಪಾಯಿ ತಲುಪಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X