ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವದ ಅತಿ ಎತ್ತರದ ರೇಲ್ವೇ ಸೇತುವೆಗೆ ಗ್ರೀನ್ ಸಿಗ್ನಲ್

By Mahesh
|
Google Oneindia Kannada News

World's Tallest Railway Bridge gets safety test clearance
ನವದೆಹಲಿ, ಜೂ.9: ಜಮ್ಮು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಚೀಬಾಬ್ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ವಿಶ್ವದ ಅತ್ಯಂತ ಎತ್ತರವಾದ ರೇಲ್ವೇ ಸೇತುವೆ ನಿರ್ಮಾಣ ಸ್ಥಳವನ್ನು ಪರಿಶೀಲಿಸಿದ ದೆಹಲಿ ಐಐಟಿ ತಜ್ಞರ ತಂಡ ನಿರ್ಮಾಣ ಮಾಡುವಂತೆ ಶಿಫಾರಸು ಮಾಡಿದೆ.

ಚೀನಾಬ್ ರೇಲ್ವೇ ಸೇತುವೆ ಪ್ಯಾರಿಸ್ ನ 324 ಮೀಟರ್ ಎತ್ತರದ ಐಫೆಲ್ ಟವರ್ ಗಿಂತ 35 ಮೀಟರ್ ಅಧಿಕ ಎತ್ತರವಿದ್ದು, ಇದು 125 ಕಿಲೋಮೀಟರ್ ಉದ್ದದ ಕತ್ರಾ -ಬನಿಹಾಲ್ ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುತ್ತದೆ.

ಐಐಟಿ ದೆಹಲಿಯ ಕೆಎಸ್ ರಾವ್ ನೇತೃತ್ವದ ತಜ್ಞರ ತಂಡ ಉದ್ದೇಶಿತ 359 ಮೀಟರ್ ಎತ್ತರದ ಸೇತುವೆಯ ಸುರಕ್ಷತಾ ಪರೀಕ್ಷೆಗಳನ್ನು ನಡೆಸಿದ್ದು ಮುಂದುವರಿಯಲು ಸೂಚನೆ ನೀಡಿದೆ. ಜುಲೈ 2008 ರಂದು ಸುರಕ್ಷತಾ ಕಾರಣಗಳ ಕಾರಣದಿಂದ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಲಾಗಿದ್ದು, ರೇಲ್ವೇ ಮಂಡಳಿಯ ಮಾಜಿ ಅಧ್ಯಕ್ಷ ಎಮ್ ರವೀಂದ್ರನ್ ನೇತೃತ್ವದ ತಂಡವನ್ನು ಪರಿಶೀಲನೆಗಾಗಿ ಇಲಾಖೆ ನೇಮಿಸಿತ್ತು .

ರಾವ್ ನೇತೃತ್ವದ ತಂಡ ಬಾಂಬೆ ಐಐಟಿಯ ಪ್ರೊಫೆಸರ್ ಗಳು, ಪಂಜಾಬ್ ವಿಶ್ವವಿದ್ಯಾಲಯದ ತಜ್ಞರು ಮತ್ತು ಆಸ್ಟ್ರಿಯಾದ ಸಲಹಾ ತಂಡದ ಅಧಿಕಾರಿಯೊಬ್ಬರನ್ನು ಒಳಗೊಂಡಿತ್ತು. ತಜ್ಞರ ಸಮಿತಿ ಸೇತುವೆ ನಿರ್ಮಾಣ ಸಂಪೂರ್ಣ ಸುರಕ್ಷಿತ ಎಂದು ಅಭಿಪ್ರಾಯಪಟ್ಟಿದ್ದರೂ, ಪ್ರದೇಶದ ಭೌಗೋಳಿಕ ವೈವಿಧ್ಯತೆಯ ಹಿನ್ನೆಲೆಯಲ್ಲಿ ಸ್ವತಂತ್ರ ಏಜೆನ್ಸಿಯೊಂದರಿಂದ ತಂಡದ ಅಭಿಪ್ರಾಯವನ್ನು ಖಚಿತಪಡಿಸಿಕೊಳ್ಳುವಂತೆ ಸೂಚಿಸಿತ್ತು.

ಜಾಗತಿಕ ವಿನ್ಯಾಸ ಸಂಸ್ಥೆ ಡಬ್ಲು ಎಸ್ ಪಿಯ ಅಮೇರಿಕ ಮತ್ತು ಫಿನ್ಲೆಂಡ್ ನ ತಜ್ಞರು ಈ ಸೇತುವೆಯ ವಿನ್ಯಾಸವನ್ನು ಮಾಡಿದ್ದರು. ಈ ಸೇತುವೆಯ ನಿರ್ಮಾಣಕ್ಕೆ 550 ಕೋಟಿ ರೂಪಾಯಿ ವೆಚ್ಚ ತಗುಲಲಿದ್ದು, 2016ಕ್ಕೆ ನಿರ್ಮಾಣ ಪೂರ್ಣಗೊಳ್ಳಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X