ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಕ್ಸಲರ ವಾರ್ಷಿಕ ಸುಲಿಗೆ 2 ಸಾವಿರ ಕೋಟಿ ರು!

By Prasad
|
Google Oneindia Kannada News

What is the annual income of Naxalites?
ನವದೆಹಲಿ, ಜೂ. 7 : ದೇಶದ ದೊಡ್ಡ ಪಿಡುಗಾಗಿ ಪರಿಣಮಿಸಿರುವ ಸಿಪಿಐ ಮಾವೋವಾದಿಗಳ ದೇಶಾದ್ಯಂತ ಸುಲಿಗೆ ವಾರ್ಷಿಕ 1400 ಕೋಟಿ ರುಪಾಯಿ ದಾಟಿದೆ ಎಂಬ ಆಘಾತಕಾರಿ ಸುದ್ದಿ ಕೇಂದ್ರ ಗೃಹ ಇಲಾಖೆ ಬಹಿರಂಗಪಡಿಸಿದೆ.

ಚತ್ತೀಸ್ ಘಡ ಮುಖ್ಯಮಂತ್ರಿ ರಮಣ್ ಸಿಂಗ್ ಇತ್ತೀಚೆಗೆ ನೀಡಿದ ಹೇಳಿಕೆ ಪ್ರಕಾರ ನಕ್ಸಲರ ವಾರ್ಷಿಕ ಆದಾಯ 1000ದಿಂದ 1200 ಕೋಟಿ ರು. ಆದರೆ ಚತ್ತೀಸ್ ಘಡ ಪೊಲೀಸ್ ಪ್ರಧಾನ ನಿರ್ದೇಶಕರ ಪ್ರಕಾರ ಆದಾಯ ವಾರ್ಷಿಕ 2000 ಕೋಟಿ ರುಪಾಯಿಗಳಿಗೂ ಅಧಿಕ.

ಇತ್ತೀಚೆಗೆ ಬಂದಿತರಾದ ನಕ್ಸಲ್ ಮುಖಂಡರ ಹೇಳಿಕೆ ಆಧರಿಸಿ ಈ ಅಂದಾಜು ಮಾಡಲಾಗಿದೆ. ಜಾರ್ಖಂಡ್ ನಕ್ಸಲರಿಗೆ ಅತೀ ಹೆಚ್ಚು ಆದಾಯ ನೀಡಲಾಗುತ್ತಿದ್ದು ಚತ್ತೀಸ್ ಘಡದಿಂದ 150 ಕೋಟಿ ರುಪಾಯಿ ಆದಾಯವಿದೆ. ಜಾರ್ಖಂಡ್ ನಲ್ಲಿ ನಡೆಯುತ್ತಿರುವ ಪರವಾನಗಿ ಹಾಗೂ ಅಕ್ರಮ ಗಣಿಗಾರಿಕೆಯಿಂದ ನಕ್ಸಲರ ಆದಾಯ ಹೆಚ್ಚಳವಾಗಿದೆ.

ನೆರೆಯ ಓರಿಸ್ಸಾ ಮತ್ತು ಬಿಹಾರ ಕೂಡ ನಕ್ಸಲರಿಗೆ ಉತ್ತಮ ಆದಾಯ ನೀಡುತಿದ್ದು ಇಲ್ಲಿನ ಅರಣ್ಯ ಉತ್ಪನ್ನ ಗುತ್ತಿಗೆ, ಗಣಿ ಕಂಪನಿಗಳು, ರಸ್ತೆ ಗುತ್ತಿಗೆದಾರರು, ಸಾರಿಗೆ ಗುತ್ತಿಗೆದಾರರು, ದೊಡ್ಡ ಮತ್ತು ಸಣ್ಣ ಕೈಗಾರಿಕೆಗಳು ಇವರ ಆದಾಯದ ಮೂಲ ಆಗಿವೆ. ಜನರಿಂದ ವೈಯಕ್ತಿಕವಾಗಿ ನಡೆಸುವ ಸುಲಿಗೆ ಮೊತ್ತ ಅತ್ಯಲ್ಪವಾಗಿದ್ದು ಸುಲಿಗೆಯ ದೊಡ್ಡ ಪಾಲನ್ನು ನಕ್ಸಲರು ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ನಿಂದ ಅಕ್ರಮ ಶಸ್ತಾಸ್ತ್ರ ಖರೀದಿಸಲು ಬಳಸುತ್ತಿದ್ದಾರೆ.

ಕಳೆದ ಸೆಪ್ಟೆಂಬರ್ 2007ರಲ್ಲಿ ಬಂಧಿಸಲಾದ ಸಿಪಿಐ ಮಾವೊವಾದಿ ಪಾಲಿಟ್ ಬ್ಯೂರೋ ಸದಸ್ಯ ಮಿಸಿರ್ ಬೆಸ್ರಾ ನೀಡಿದ ತಪ್ಪೊಪ್ಪಿಗೆಯಲ್ಲಿ ಸುಲಿಗೆ ಮಾಡಲಾದ 60 ಕೋಟಿ ರು.ಗಳಲ್ಲಿ 42 ಕೋಟಿ ರು.ಗಳನ್ನು ಶಸ್ತ್ರಾಸ್ರ್ತಮತ್ತು ಸ್ಪೋಟಕ ಖರೀದಿಸಲು, 2 ಕೋಟಿ ರು.ಗಳನ್ನು ಗುಪ್ತಚರ ಮಾಹಿತಿ ಪಡೆಯಲು ಮತ್ತು ಉಳಿದ 16 ಕೋಟಿ ರು.ಗಳನ್ನು ಸಾರಿಗೆ, ಕಂಪ್ಯೂಟರ್ ತರಬೇತಿ, ಪ್ರಚಾರ ಪಡೆಯಲು ವೆಚ್ಚ ಮಾಡಲಾಗಿದೆ.

ಹಿರಿಯ ಪೀಲೀಸ್ ಅಧಿಕಾರಿಗಳ ಪ್ರಕಾರ ಸುಲಿಗೆ ಮಾಡಲಾದ ಹಣದಲ್ಲಿ ನಕ್ಸಲ್ ಮುಖಂಡರು ಐಷಾರಾಮಿ ಜೀವನ ನಡೆಸುತಿದ್ದು ತಮ್ಮ ಮಕ್ಕಳನ್ನು ಮೆಟ್ರೋ ನಗರಗಳಲ್ಲಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಶಿಕ್ಷಣ ಕೊಡಿಸುತಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X