ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿರುದ್ಯೋಗದ ಗರಗಸದಲ್ಲಿ ಎಚ್ 1ಬಿ ವೀಸಾ

By Prasad
|
Google Oneindia Kannada News

USA restricts H1B Visa
ನವದೆಹಲಿ, ಜೂ. 4 : ಭಾರತೀಯ ತಂತ್ರಜ್ಞರಿಗೆ ಅಮೆರಿಕಾದಲ್ಲಿ ನೆಲೆಸುವ ರಹದಾರಿಯಾದ ಎಚ್ -1ಬಿ ವೀಸಾಗೆ ಕಳೆದ ಮೂರು ವರ್ಷಗಳಿಂದ ಬೇಡಿಕೆ ಕುಸಿಯುತ್ತಲೇಯಿದೆ. ಅಮೇರಿಕಾದ ಸಿಟಿಜನ್ ಶಿಪ್ ಮತ್ತು ವಲಸೆ ಸೇವೆಗಳ ಇಲಾಖೆಗೆ ಕಳೆದ ಮೇವರೆಗೆ ಕೇವಲ 18 ಸಾವಿರ ಎಚ್ -1ಬಿ ವೀಸಾ ಅರ್ಜಿಗಳು ಸಲ್ಲಿಕೆಯಾಗಿರುವುದು ಕುಗ್ಗಿದ ಬೇಡಿಕೆಗಳಿಗೆ ಉದಾಹರಣೆಯಾಗಿದೆ.

ಅಮೆರಿಕಾದ ಹಿಂದಿನ ಹಣಕಾಸು ವರ್ಷದಲ್ಲಿ (ಅಕ್ಟೋಬರ್ - ಸೆಪ್ಟೆಂಬರ್) ಒಟ್ಟು 65 ಸಾವಿರ ವೀಸಾ ಅರ್ಜಿಗಳು ಸಲ್ಲಿಕೆಯಾಗಿದ್ದವು. ಮೂರು ವರ್ಷಗಳ ಹಿಂದೆ ಸುಮಾರು 1.5 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದು ವೀಸಾ ನೀಡಲು ಲಾಟರಿ ಮೂಲಕ ಆಯ್ಕೆ ಮಾಡಲಾಗಿತ್ತು. ಅಮೆರಿಕನ್ನರಿಗೆ ಹೆಚ್ಚಿನ ಉದ್ಯೋಗಾವಕಾಶ ಒದಗಿಸಿಕೊಡಲು ಅಲ್ಲಿನ ಸರ್ಕಾರ ಜಾರಿಗೆ ತಂದಿರುವ ನೂತನ ಕಾಯ್ದೆ, ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ ಹಾಗೂ ಸಂಬಳದ ಕಡಿತದಿಂದಾಗಿ ಅಮೆರಿಕಾಗೆ ಉದ್ಯೋಗ ನಿಮಿತ್ತ ತೆರಳುವ ಭಾರತೀಯರ ಸಂಖ್ಯೆ ಕುಸಿದಿದೆ ಎಂದು ತಜ್ಞರು ಹೇಳುತ್ತಾರೆ.

ಅಮೆರಿಕಾದಲ್ಲಿ ಎಚ್ 1ಬಿ ವೀಸಾ ಹೊಂದಿರುವವರ ತಂತ್ರಜ್ಞರರನ್ನು ಮರಳಿ ಸ್ವದೇಶಕ್ಕೆ ಕಳಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಬಹಳಷ್ಟು ಭಾರತೀಯ ಮಾಹಿತಿ ತಂತ್ರಜ್ಞಾನ ಕಂಪನಿಗಳು ಎಚ್ 1ಬಿ ವೀಸಾಗೆ ಅರ್ಜಿ ಸಲ್ಲಿಸುತ್ತಿಲ್ಲ. ಅಮೆರಿಕಾದಲ್ಲಿ ಕೆಲಸ ಮಾಡಬಯಸುವ ಕೌಶಲ್ಯವುಳ್ಳ ವಿದೇಶೀ ಕೆಲಸಗಾರರಿಗೆ ಮೊದಲು ಬಂದವರಿಗೆ ಮೊದಲ ಆದ್ಯತೆ ಮೇರೆಗೆ ವೀಸಾ ನೀಡಲಾಗುತ್ತದೆ. ವಿಶ್ವದ ಅತ್ಯಂತ ದೊಡ್ಡ ಅರ್ಥ ವ್ಯವಸ್ಥೆ ಹೊಂದಿರುವ ಅಮೆರಿಕಾದಲ್ಲಿ ಕೆಲಸ ಮಾಡಲು ವಿದೇಶಿಯ ತಂತ್ರಜ್ಞರು ಪೈಪೋಟಿ ನಡೆಸುತ್ತಿದ್ದುದು ನಮಗೆ ಗೊತ್ತಿದೆ, ಆದರೆ ಈಗ ಪರಿಸ್ಥಿತಿ ಉಲ್ಟಾ ಪಲ್ಟಾ.

ಕಳೆದ ವರ್ಷ ಇನ್ಫೋಸಿಸ್, ವಿಪ್ರೋ ಮತ್ತು ಟಿಸಿಎಸ್ ಕಂಪೆನಿಗಳು ಕೇವಲ 4762 ವೀಸಾಗಳನ್ನು ಪಡೆದಿವೆ. 2006ರಲ್ಲಿ ಈ ಅಂಕಿಅಂಶ 20,530 ಇತ್ತು. ದೇಶದ ಅತೀ ದೊಡ್ಡ ಸಾಫ್ಟ್ ವೇರ್ ರಫ್ತುದಾರ ಟಿಸಿಎಸ್ 2006ರಲ್ಲಿ 3046 ಎಚ್ 1ಬಿ ವೀಸಾಗಳನ್ನು ಪಡೆದಿತ್ತು. ಆದರೆ 2009ರಲ್ಲಿ ಒಂದನ್ನೂ ಪಡೆದಿಲ್ಲ.

ವಿದೇಶೀ ತಂತ್ರಜ್ಞರನ್ನು ನೇಮಕ ಮಾಡಿಕೊಂಡಿರುವ ಅಮೆರಿಕಾದ ಕಂಪನಿಗಳು ತಮ್ಮ ನೌಕರರ ಗುತ್ತಿಗೆಯನ್ನು ನವೀಕರಿಸುತ್ತಿಲ್ಲ ಎನ್ನಲಾಗಿದೆ. ಅಮೆರಿಕಾದ ಉದ್ಯೋಗದಾತರು ವಿದೇಶೀ ತಂತ್ರಜ್ಞರೊಬ್ಬರನ್ನು ನೇಮಕ ಮಾಡಿಕೊಳ್ಳಬಯಸಿದರೆ ಪ್ರತೀ ವರ್ಷದ ಏಪ್ರಿಲ್ ನಲ್ಲಿ ಸರ್ಕಾರ ವೀಸಾ ಅರ್ಜಿಗಳನ್ನು ನೀಡುತ್ತದೆ. ವೀಸಾ ನೀಡಿಕೆ ಅಕ್ಟೋಬರ್ ಒಂದರ ಒಳಗೆ ಮುಗಿಯುತ್ತದೆ. ಅಮೆರಿಕಾದ ಪ್ರತೀ 10 ನೌಕರರಲ್ಲಿ ಒಬ್ಬ ಕೆಲಸ ಕಳೆದುಕೊಂಡಿದ್ದು ಸಿಲಿಕಾನ್ ಸಿಟಿ ಕ್ಯಾಲಿಫೋರ್ನಿಯಾದಲ್ಲಿ ನಿರುದ್ಯೋಗ ಸಮಸ್ಯೆ ಶೇ. 12.5ಕ್ಕೇರಿದ್ದು ರಾಷ್ಟ್ರೀಯ ಸರಾಸರಿ ಶೇ. 9.9ರಷ್ಟಿದೆ. ಅಲ್ಲಿನ ಕೆಲಸಗಾರರಲ್ಲಿ ವಿದೇಶೀ ತಂತ್ರಜ್ಞರ ಸಂಖ್ಯೆ ಈಗ ಶೇ. 0.6.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X