ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಡಗು-ಕೇರಳ ಸಂಪರ್ಕ ರಸ್ತೆ ಸಂಚಾರ ಮುಕ್ತ

By * ಬಿ.ಎಂ.ಲವಕುಮಾರ್, ಮೈಸೂರು
|
Google Oneindia Kannada News

Kodagu-Kerala connecting road now open
ವಿರಾಜಪೇಟೆ, ಜೂ. 4 : ಕೊಡಗು-ಕೇರಳ ಸಂಪರ್ಕ ಕಲ್ಪಿಸುವ ಮಾಕುಟ್ಟ ರಸ್ತೆಯ ಅಭಿವೃದ್ಧಿ ಕಾಮಗಾರಿ ಭರದಿಂದ ಸಾಗಿದ್ದು, ಸದ್ಯದಲ್ಲಿಯೇ ವಾಹನ ಸಂಚಾರಕ್ಕೆ ತೆರೆದುಕೊಳ್ಳಲಿದೆ.

ಕಳೆದ ಒಂದೂವರೆ ವರ್ಷದಿಂದ ಕಾಮಗಾರಿ ನಡೆಯುತ್ತಿದ್ದರಿಂದ ಈ ರಸ್ತೆಯಲ್ಲಿ ವಾಹನ ಸಂಚಾರನ್ನು ನಿಷೇಧಿಸಲಾಗಿತ್ತು. ಹೀಗಾಗಿ ಕೇರಳಕ್ಕೆ ತೆರಳುವ ಜನರಿಗೆ ತೊಂದರೆಯಾಗಿತ್ತು. ಕೊಡಗಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೇರಳಿಗರು ನೆಲೆಸಿದ್ದು, ವ್ಯಾಪಾರ ವಹಿವಾಟಿಗೆ ಈ ರಸ್ತೆ ರಾಜಮಾರ್ಗವಾಗಿತ್ತು. ರಸ್ತೆ ಮುಚ್ಚಿದ್ದರಿಂದ ಗಡಿಭಾಗದಲ್ಲಿ ನೆಲೆಸಿದವರ ಗೋಳು ಹೇಳತೀರದ್ದಾಗಿತ್ತು. ಅಲ್ಲದೆ ಕೇರಳಕ್ಕೆ ತೆರಳಬೇಕಾದವರು ಹತ್ತಿಪ್ಪತ್ತು ಕಿ.ಮೀ ದೂರದ ಊರನ್ನು ತಲುಪಲು ನೂರಾರು ಕಿ.ಮೀ. ಬಳಸಿ ಸಾಗಬೇಕಾಗಿತ್ತು.

ಕಳೆದ ಕೆಲವು ವರ್ಷಗಳಿಂದ ಈ ರಸ್ತೆ ಸಂಪೂರ್ಣ ಹದಗೆಟ್ಟು ವಾಹನ ಚಲಿಸಲಾಗದ ಸ್ಥಿತಿ ನಿರ್ಮಾಣವಾಗಿತ್ತು. ರಸ್ತೆ ದುರಸ್ತಿಗಾಗಿ ಪ್ರತಿಭಟನೆಗಳೂ ನಡೆದಿದ್ದವು. ಕೊನೆಗೂ ಸರ್ಕಾರದ ಕಣ್ಣು ತೆರೆದಿದ್ದರಿಂದ ಸುಮಾರು 25 ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾರ್ಯ ಆರಂಭವಾಗಿತ್ತು. ಹತ್ತು ಹಲವು ವಿಘ್ನಗಳ ನಡುವೆ ಹೇಗೋ ಕಳೆದ ಒಂದೂವರೆ ವರ್ಷದಿಂದ ಕಾಮಗಾರಿ ನಡೆಯುತ್ತಾ ಬಂದಿದ್ದು ಇದೀಗ ಸಂಚಾರಕ್ಕೆ ಮುಕ್ತವಾಗುವ ಹಂತಕ್ಕೆ ತಲುಪಿದೆ.

ರಸ್ತೆಯ ಇಕ್ಕೆಲಗಳು ಮೀಸಲು ಅರಣ್ಯವನ್ನು ಹೊಂದಿರುವುದರಿಂದ ರಸ್ತೆಯನ್ನು ಅಗಲಗೊಳಿಸುವುದಾಗಲೀ, ಮರಕಡಿಯವುದಾಗಲೀ ಸಾಧ್ಯವಾಗದೆ ಕೆಲವು ನಿಬಂಧನೆಗಳಂತೆ ರಸ್ತೆಯನ್ನು ನಿರ್ಮಿಸಲಾಗಿದೆ. ಸುಮಾರು 14 ಕಿ.ಮೀ ಕಾಮಗಾರಿ ಮುಗಿದಿದ್ದು, ಇನ್ನು 2 ಕಿ.ಮೀ. ಮಳೆಗಾಲದ ಬಳಿಕ ನಡೆಯಲಿದೆ ಎನ್ನಲಾಗಿದೆ. ಸದ್ಯದಲ್ಲಿಯೇ ರಸ್ತೆ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದೆಂಬ ಸುದ್ದಿ ಸಂತಸ ತಂದಿದೆಯಲ್ಲದೆ, ಯಾವಾಗ ಪ್ರಾರಂಭವಾಗುತ್ತದೆಯೋ ಎನ್ನುವ ಕಾತರ ಈ ಭಾಗದ ಜನತೆಯದ್ದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X