ಕಚ್ಚಾ ತೈಲದ ಬೆಲೆ ಇಳಿಕೆ, ಪೆಟ್ರೋಲ್ ಬೆಲೆ ಏರಿಕೆ!

ಕೇಂದ್ರ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಅದ್ಯಕ್ಷತೆಯ ಉನ್ನತ ಮಟ್ಟದ ಸಚಿವರ ಸಮಿತಿ ಸಭೆ ಜೂನ್ 7ರಂದು ನಡೆಯಲಿದ್ದು, ಕಿರೀಟ್ ಪಾರೀಖ್ ಸಮಿತಿಯ ಶಿಫಾರಸಿನಂತೆ ತೈಲ ಬೆಲೆಗಳ ಮೇಲಿನ ಸರ್ಕಾರಿ ನಿಯಂತ್ರಣವನ್ನು ತೆಗೆದು ಹಾಕುವ ಕರಿತು ಚರ್ಚಿಸಲಿದೆ.
ಪ್ರತೀ ಲೀಟರ್ ಸೀಮೆಣ್ಣೆಗೆ ರೂ 6 ಹಾಗೂ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ರೂ 100ರಷ್ಟು ಹೆಚ್ಚಿಸುವಂತೆಯೂ ಕಿರೀಟ್ ಪಾರೀಖ್ ಸಮಿತಿ ಶಿಫಾರಸು ಮಾಡಿದೆ. ಬೆಲೆ ಪರಿಷ್ಕರಣೆ ಮಾಡದಿದ್ದಲ್ಲಿ ಈ ಹಣಕಾಸು ವರ್ಷದಲ್ಲಿ ತೈಲ ಕಂಪೆನಿಗಳು ಒಟ್ಟು 72,300 ಕೋಟಿ ರೂಪಾಯಿಗಳ ನಷ್ಟ ಅನುಭವಿಸಬೇಕಾಗುತ್ತದೆ.
ಈ ಹಿಂದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಅಧಿಕವಾಗಿದ್ದಾಗ ಸರ್ಕಾರ ತೈಲ ಬೆಲೆಗಳ ಮೇಲಿನ ನಿಯಂತ್ರಣವನ್ನು ರದ್ದುಗೊಳಿಸಿದರೆ ಪ್ರತೀ ಲೀಟರ್ ಡೀಸೆಲ್ ಬೆಲೆ ಲೀಟರಿಗೆ ರೂ 6 ದುಬಾರಿಯಾಗುತಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಬೆಲೆ ನಿಯಂತ್ರಣ ರದ್ದತಿಗೆ ಮುಂದಾಗುವ ಕುರಿತು ಅನುಮಾನಗಳಿದ್ದವು. ಈಗ ಮಾರುಕಟ್ಟೆಯಲ್ಲಿ ಬೆಲೆ ಇಳಿದಿರುವುರಿಂದ ಬೆಲೆ ನಿಯಂತ್ರಣ ರದ್ದುಗೊಳಿಸಲು ಮತ್ತು ಲೀಟರಿಗೆ ರೂ 3.50 ಹೆಚ್ಚಿಸುವ ಉತ್ತಮ ಅವಕಾಶ ಕೂಡಿಬಂದಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಪ್ರತೀ ಬ್ಯಾರೆಲ್ ಗೆ 80-82 ಡಾಲರ್ ಇದ್ದದ್ದು ಈಗ 72-74 ಡಾಲರ್ ಗಳಿಗೆ ಇಳಿದಿದೆ. ಕಚ್ಚಾ ತೈಲ ಬೆಲೆ ಕುಸಿತದ ಕಾರಣದಿಂದ ಸರ್ಕಾರೀ ಸ್ವಾಮ್ಯದ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್, ಭಾರತ್ ಮತ್ತು ಹಿಂದುಸ್ಥಾನ್ ಪೆಟ್ರೋಲಿಯಂಗಳ ಪ್ರತಿದಿನದ ನಷ್ಟ 255 ಕೋಟಿ ರೂಪಾಯಿಗಳಿಂದ 203 ಕೋಟಿ ರೂಪಾಯಿಗಳಿಗೆ ಇಳಿಯಲಿದೆ.












Click it and Unblock the Notifications