ತೋಟದ ಮನೆ ಕಾಮಕೇಳಿಗೆ ಅಡ್ಡಾ ಆಯ್ತು

ಜಯಕರ್ನಾಟಕ ನಗರ ಘಟಕದ ಸಂಚಾಲಕ ಮಹೇಶ್ ಗೌಡ, ಕಾರ್ತಿಕ್, ಅನಿಲ್, ಚಂದ್ರು, ಹರ್ಷ, ರವಿ, ಅಬ್ದುಲ್ ವಾಹೀದ್, ಮೊಹೀದ್ದೀನ್, ಅಮೀನಾ ಬೇಗಂ, ಅಫೀಜಾ ಉರುಫ್ ನಜೀರಾ ಬಂಧಿತ ಆರೋಪಿಗಳು.
ವೇಶ್ಯೆ, ವಿಟರು ಸಿಕ್ಕಿದ್ದು ಹೀಗೆ: ಕುವೆಂಪು ನಗರದ ಹಂಸ ಬಡಾವಣೆಯ ಬೋರಯ್ಯ ಎಂಬುವವರಿಗೆ ಸೇರಿದ ತೋಟದ ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಸಿಕ್ಕಿದೆ. ಎಸಿಪಿ ವಿಷ್ಣುವರ್ಧನ್ ನೇತೃತ್ವದಲ್ಲಿ ಕುವೆಂಪು ನಗರದ ಇನ್ಸ್ ಪೆಕ್ಟರ್ ಧನಂಜಯ, ಪೇದೆ ಪ್ರಸನ್ನ ಅವರು ಮುಂಜಾನೆ 2.30 ರ ಸುಮಾರಿಗೆ ತೋಟದ ಮನೆಯ ಮೇಲೆ ಹಠಾತ್ ದಾಳಿ ನಡೆಸಿದ್ದಾರೆ.
ತೋಟದ ಮನೆಯಲ್ಲಿ ಬಂಧಿತರಿಂದ 18 ಮೊಬೈಲ್ ಗಳು, 1 ಕಾರು , 1 ಆಟೋ, 1 ಕೈನೆಟಿಕ್ ಹೋಂಡಾ, ಅಶ್ಲೀಲ ಸಿಡಿಗಳು, ಡಿವಿಡಿ ಪ್ಲೇಯರ್ ಅಲ್ಲದೆ 23,600 ನಗದು ಹಣ ಸಿಕ್ಕಿದೆ. ಬಂಧಿತರನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ.
ಅವ ನಮ್ಮವನಲ್ಲ :ಜಯ ಕರ್ನಾಟಕ: ಮುತ್ತಪ್ಪ ರೈ ಸ್ಥಾಪಿತ ಜಯ ಕರ್ನಾಟಕ ಸಂಘಟನೆಯು ಈ ಘಟನೆಗೆ ಪ್ರತಿಕ್ರಿಯಿಸಿದ್ದು, ವೇಶ್ಯಾವಟಿಕೆ ದಂಧೆಯಲ್ಲಿ ತೊಡಗಿರುವ ಆರೋಪಿ ಮಹೆಶ್ ಗೌಡನಿಗೂ ನಮ್ಮ ಸಂಘಟನೆಗೂ ಯಾವುದೇ ಸಂಬಂಧವಿಲ್ಲ. ಆತನನ್ನು ವಾರದ ಹಿಂದೆಯೇ ಸಂಘಟನೆಯಿಂದ ಉಚ್ಚಾಟನೆ ಮಾಡಲಾಗಿದೆ. ಪೊಲೀಸರ ತನಿಖೆ ಜಯಕರ್ನಾಟಕ ಸಂಘಟನೆ ಪ್ರೋತ್ಸಾಹಿಸುತ್ತದೆ ಎಂದು ಹೇಳಿಕೆ ನೀಡಿದೆ.











Click it and Unblock the Notifications