ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರಿ ರೈಲು ಅಪಘಾತ ಜಸ್ಟ್ ಮಿಸ್

By Mahesh
|
Google Oneindia Kannada News

File photo : Tirupati-Mysore Fast Passenger misses fatal accident
ಮಂಡ್ಯ, ಮೆ.31: ಇಲ್ಲಿನ ಹನಕೆರೆಯಲ್ಲಿ ಎರಡು ರೈಲುಗಳು ಒಂದೇ ಹಳಿಗಳ ಮೇಲೆ ಚಲಿಸಿದ್ದು, ಚಾಲಕನ ಸಮಯಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ.

ಬೆಂಗಳೂರಿನಿಂದ ಮೈಸೂರು ಕಡೆಗೆ ಹೋಗುತ್ತಿದ್ದ ತಿರುಪತಿ ಫಾಸ್ಟ್ ಪ್ಯಾಸೆಂಜರ್ ರೈಲು ಹಾಗೂ ಮೈಸೂರಿನಿಂದ ಬೆಂಗಳೂರಿನ ಕಡೆಗೆ ಬರುತ್ತಿದ್ದ ಗೂಡ್ಸ್ ರೈಲುಗಳು ಒಂದೇ ಹಳಿಯ ಮೇಲೆ ಚಲಿಸುತ್ತಿದ್ದವು. ಬೆಳಗ್ಗೆ 8:50 ಗಂಟೆಗೆ ಮೈಸೂರು ನಿಲ್ದಾಣ ಬಿಟ್ಟ ಗೂಡ್ಸ್ ಗಾಡಿ ಸುಮಾರು 9.15 ಕ್ಕೆ ಮಂಡ್ಯ ತಲುಪಿತ್ತು. ಬೆಂಗಳೂರಿನಿಂದ ಹೊರಟ್ಟಿದ್ದ ತಿರುಪತಿ ಪ್ಯಾಸೆಂಜರ್ ಹನಕೆರೆ ಬಿಟ್ಟು ಸ್ವಲ್ಪ ಮುಂದೆ ಬಂದಿತ್ತು.

ಎರಡು ರೈಲು ಗಾಡಿಗಳಿಗೆ ಸಿಗ್ನಲ್ ಸಿಕ್ಕಿದ್ದರಿಂದ ಮಾಮೂಲಿಯಾಗಿ ಬರುತ್ತಿದ್ದವು. ಆದರೆ, ಎದುರಿಗೆ ಇನ್ನೊಂದು ರೈಲು ಬರುತ್ತಿರುವುದನ್ನು ಕಂಡ ತಿರುಪತಿ ಪ್ಯಾಸೆಂಜರ್ ರೈಲಿನ ಚಾಲಕ ತಕ್ಷಣ ರೈಲನ್ನು ನಿಲ್ಲಿಸಿದ್ದಾನೆ. ಇದನ್ನು ನೋಡಿ ಗೂಡ್ಸ್ ಗಾಡಿ ಕೂಡ ನಿಂತಿದೆ. ಎರಡು ರೈಲುಗಳು ಪರಸ್ಪರ ಎದುರಾದಾಗ ಕೇವಲ 100 ಮೀ ಅಂತರ ಮಾತ್ರ ಇತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಸಿಗ್ನಲ್ ದೋಷ ಕಾರಣ:
ಸಿಗ್ನಲ್ ನಲ್ಲಿ ತಾಂತ್ರಿಕ ದೋಷ ಉಂಟಾಗಿದ್ದು ಎಂದು ತಿಳಿದು ಬಂದ ಕೂಡಲೇ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ದೋಷವನ್ನು ಸರಿಪಡಿಸಿ ರೈಲುಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಆದರೆ, ರೈಲು ಸಂಚಾರದಲ್ಲಿ ಉಂಟಾದ ವ್ಯತ್ಯಯದಿಂದ ನಿಗದಿತ ಸಮಯಕ್ಕೆ ಸರ್ಕಾರಿ ಕಚೇರಿ, ಕಾಲೇಜುಗಳಿಗೆ ತಲುಪಲಾಗದೆ ಸಾರ್ವಜನಿಕರು ಪರದಾಡಬೇಕಾಗಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X