ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೀಫಾ ಫುಟ್ಬಾಲ್ ಸಮರ ಸಿಂಹಾವಲೋಕನ

By Mahesh
|
Google Oneindia Kannada News

A brief history of FIFA WC
ಜಗತ್ತಿನ ಎಲ್ಲಾ ಸ್ತರದ ಜನರು ಮೆಚ್ಚಿ ಆಡುವ ಸುಲಭ ಕ್ರೀಡೆ ಫುಟ್ಬಾಲ್. ಕ್ರಿಕೆಟ್ ವಿಶ್ವಕಪ್ ನಂತೆ, ಸಾಕರ್ ವಿಶ್ವಕಪ್ ಕೂಡ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಜರುಗುತ್ತದೆ. 1872ರಲ್ಲಿ ಗ್ಲಾಸ್ಗೋನಲ್ಲಿ ಸ್ಕಾಲೆಂಡ್ ಹಾಗೂ ಇಂಗ್ಲೆಂಡ್ ನಡುವೆ ನಡೆದ ಪಂದ್ಯ ವಿಶ್ವದ ಮೊಟ್ಟಮೊದಲ ಅಂತಾರಾಷ್ಟ್ರೀಯ ಪಂದ್ಯ ಎನಿಸಿತು. ನಂತರ 1900, 1904 ರ ಬೇಸಿಗೆ ಒಲಿಂಪಿಕ್ಸ್ ನಲ್ಲಿ ಫುಟ್ಬಾಲ್ ಸೇರ್ಪಡೆಯಾದರೂ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೀಡೆಯನ್ನು ಬೆಳೆಸಲು ಕ್ರಿಕೆಟ್ ಗೆ ಐಸಿಸಿ ಇರುವಂತೆ, ಜಾಗತಿಕ ಮಟ್ಟದಲ್ಲಿ ಫುಟ್ಬಾಲ್ ಕ್ರೀಡೆ ನಿಯಂತ್ರಣಕ್ಕೆ ಫೆಡರೇಷನ್ ಇಂಟರ್ ನ್ಯಾಷನಲ್ ಫುಟ್ಬಾಲ್ ಅಸೋಸಿಯೇಷನ್(ಫೀಫಾ) ಹುಟ್ಟಿಕೊಂಡಿತು.

1930 ರ ಮೊದಲ ಫುಟ್ಬಾಲ್ ವಿಶ್ವಕಪ್ ನಂತರದಿಂದ ಪ್ರತಿ ವಿಶ್ವಕಪ್ ಅನ್ನು ಫೀಫಾ ವಿಶ್ವಕಪ್ ಎಂದೇ ಸಂಬೋಧಿಸಲಾಗುತ್ತದೆ. 1942 ಹಾಗೂ 1946 ರಲ್ಲಿ ಎರಡನೇ ವಿಶ್ವ ಸಮರದ ಕಾರಣದಿಂದ ವಿಶ್ವಕಪ್ ಪಂದ್ಯಾವಳಿ ನಡೆಯಲಿಲ್ಲ. ಇದುವರೆವಿಗೂ 18 ವಿಶ್ವಕಪ್ ಟೂರ್ನಿಮೆಂಟ್ ನಡೆದಿದೆ. ಬ್ರೆಜಿಲ್ ತಂಡ ಎಲ್ಲಾ ಟೂರ್ನಿಮೆಂಟ್ ಗಳಲ್ಲಿ ಆಡಿದ ಕೀರ್ತಿ ಹೊಂದಿದೆ. ಬ್ರೆಜಿಲ್ 5, ಇಟಲಿ 4, ಜರ್ಮನಿ 3, ಉರುಗ್ವೆ, ಅರ್ಜೆಂಟೈನಾ ತಲಾ ಎರಡು ಬಾರಿ ಹಾಗೂ ಇಂಗ್ಲೆಂಡ್ ಮತ್ತು ಫ್ರಾನ್ಸ್ ಒಮ್ಮೆ ಮಾತ್ರ ವಿಶ್ವಕಪ್ ಗೆದ್ದಿದ್ದಾರೆ. ಈ ಬಾರಿಯ ವಿಶ್ವಕಪ್ ಟೂರ್ನಿ ದಕ್ಷಿಣ ಆಫ್ರಿಕಾದಲ್ಲಿ ಜೂನ್ 11 ರಿಂದ ಜುಲೈ11 ರವರೆಗೂ ನಡೆಯಲಿದೆ. 2014 ರ ವಿಶ್ವಕಪ್ ಆತಿಥ್ಯವನ್ನು ಬ್ರೆಜಿಲ್ ತನ್ನದಾಗಿಸಿಕೊಂಡಿದೆ. 1966 ರಲ್ಲಿ ಅತಿಥೇಯರಾಗಿ ಕಪ್ ಗೆದ್ದಿದ್ದ ಇಂಗ್ಲೆಂಡ್ 2018 ರ ವಿಶ್ವಕಪ್ ಟೂರ್ನಿ ಆತಿಥ್ಯವಹಿಸಲು ಉತ್ಸುಕವಾಗಿದೆ.

ವಿಶ್ವಕಪ್ ಗೆ ಅರ್ಹತೆ: ಪ್ರತಿ ವಿಶ್ವಕಪ್ ಮುಗಿದ ಆರು ತಿಂಗಳೊಳಗೆ ಮುಂದಿನ ವಿಶ್ವಕಪ್ ಗೆ ತಯಾರಿ ಆರಂಭವಾಗುತ್ತದೆ ಎಂದರೆ ತಪ್ಪಾಗಲಾರದು. ವಿಶ್ವಕಪ್ ನ ಅರ್ಹತಾ ಸುತ್ತಿನ ಪಂದ್ಯಗಳು 1934 ರ ವಿಶ್ವಕಪ್ ನಂತರ ಶುರುವಾದ ಅರ್ಹತಾ ಸುತ್ತಿನ ಪಂದ್ಯಗಳ ಪರ್ವಕಾಲ. ಇಂದಿನವರೆಗೂ ಅದೇ ಮಾದರಿಯಲ್ಲಿ ಮುಂದುವರೆದಿದೆ. ಅಫ್ರಿಕ, ಏಷ್ಯಾ, ಉತ್ತರ ಹಾಗೂ ಮಧ್ಯ ಅಮೆರಿಕ, ಕೆರೆಬಿಯನ್, ದಕ್ಷಿಣ ಅಮೆರಿಕ, ಓಷಾನಿಯ ಮತ್ತು ಯುರೋಪ್ ರಾಷ್ಟ್ರಗಳು ಹೀಗೆ ವಿವಿಧ ಗುಂಪಿನಡಿಯಲ್ಲಿ ಅರ್ಹತಾ ಸುತ್ತಿನ ಪಂದ್ಯಗಳು ನಡೆಯುತ್ತವೆ. ಅರ್ಹತಾ ಸುತ್ತಿನ ಪಂದ್ಯಗಳು ಮುಗಿಯಲು ಕನಿಷ್ಠವೆಂದರೂ ಮೂರು ವರ್ಷಗಳು ಬೇಕಾಗುತ್ತದೆ. ಈ ಬಾರಿಯ ವಿಶ್ವಕಪ್ ಗೆ ಅರ್ಹತೆ ಪಡೆಯಲು ಸುಮಾರು 204 ದೇಶಗಳು ಸ್ಪರ್ಧಿಸಿದ್ದವು. ಅಂತಿಮವಾಗಿ 32 ದೇಶಗಳು ಒಂದು ತಿಂಗಳು ಕಪ್ ಗಾಗಿ ಕಾದಾಟ ನಡೆಸಲಿವೆ.

ವಿಶ್ವಕಪ್ ನಡೆಯುವ ದೇಶಕ್ಕೆ ಮಾತ್ರ ಅರ್ಹತಾ ಸುತ್ತಿನ ರಗಳೆ ಇರುವುದಿಲ್ಲ. ನೇರವಾಗಿ ತಮ್ಮ ಗುಂಪಿನ ಎದುರಾಳಿಗಳೊಡನೆ ಕಾದಾಡಬಹುದು. ಇಲ್ಲಿ ಇನ್ನೊಂದು ವಿಶೇಷ ಎಂದರೆ ಈ ನಿಯಮ ವಿಶ್ವಕಪ್ ಆತಿಥ್ಯವಹಿಸುವ ತಂಡಕ್ಕೆ ಮಾತ್ರ ಮೀಸಲು. ಹಾಲಿ ವಿಶ್ವಕಪ್ ಚಾಂಪಿಯನ್ ತಂಡ ಕೂಡ ಅರ್ಹತಾ ಸುತ್ತಿನಲ್ಲಿ ಸೆಣಸಿ ಮುಂದಿನ ಹಂತ ತಲುಪಬೇಕು. ಹಾಲಿ ಚಾಂಪಿಯನ್ ಇಟಲಿ ಕೂಡ ಅರ್ಹತಾ ಸುತ್ತಿನಲ್ಲಿ ಪಾಸ್ ಆಗಿ ಮುಂದಿನ ಹಂತಕ್ಕೆ ಬಂದಿದೆ.

ಮೊದಲು ಗುಂಪಿನ ಸುತ್ತು ಆಮೇಲೆ ನಾಕೌಟ್ ಹಂತ ಇರುತ್ತದೆ. ನಾಕೌಟ್ ಹಂತದಲ್ಲಿ ತಂಡಗಳು ಸಮಬಲವಾದರೆ ಹೆಚ್ಚಿನ ಅವಧಿ ನೀಡಿಕೆ ಹಾಗೂ ಪೆನಾಲ್ಟಿ ಶೂಟೌಟ್ ನೀಡಿ ಪಂದ್ಯದ ನಿರ್ಣಯ ಪಡೆಯಲಾಗುತ್ತದೆ. ನಂತರ 16 ರ ಹಂತ ಇದರಲ್ಲಿ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ತಂಡ, ವಿರುದ್ಧ ಗುಂಪಿನಲ್ಲಿ ದ್ವಿತೀಯ ಸ್ಥಾನ ಪಡೆದ ತಂಡದ ವಿರುದ್ಧ ಸೆಣೆಸಲಿದೆ. ನಂತರ ಕ್ವಾಟರ್ ಫೈನಲ್ಸ್ , ಉಪಾಂತ್ಯ, ಮೂರನೇ ಸ್ಥಾನಕ್ಕಾಗಿ ಕಾದಾಟ, ಕೊನೆಯಲ್ಲಿ ಅಂತಿಮ ಹಣಾಹಣಿ ಇರುತ್ತದೆ.

ಟೂರ್ನಿಯ ನೀಡಲಾಗುವ ಪ್ರಶಸ್ತಿ, ಬಿರುದು ಬಾವಲಿಗಳು;

ದ ಗೋಲ್ಡನ್ ಬಾಲ್ : ಶ್ರೇಷ್ಠ ಆಟಗಾರ ಪ್ರಶಸ್ತಿ ( ಮಾಧ್ಯಮ ಪ್ರತಿನಿಧಿಗಳ ಮತಗಳ ಮೇಲೆ ನಿರ್ಧಾರ) . ಇದೇ ರೀತಿ ಸಿಲ್ವರ್ ಹಾಗೂ ಬ್ರೌಂಜ್ ಬಾಲ್ ಕೂಡ ನೀಡಲಾಗುತ್ತದೆ.
ದ ಗೋಲ್ಡನ್ ಬಾಲ್ : ಶ್ರೇಷ್ಠ ಆಟಗಾರ ಪ್ರಶಸ್ತಿ ( ಮಾಧ್ಯಮ ಪ್ರತಿನಿಧಿಗಳ ಮತಗಳ ಮೇಲೆ ನಿರ್ಧಾರ). ಇದೇ ರೀತಿ ಸಿಲ್ವರ್ ಹಾಗೂ ಬ್ರೌಂಜ್ ಬಾಲ್ ಕೂಡ ನೀಡಲಾಗುತ್ತದೆ.
*ದ ಗೋಲ್ಡನ್ ಷೂ: ಟೂರ್ನಿಯಲ್ಲಿ ಅತಿ ಹೆಚ್ಚು ಗೋಲು ಹೊಡೆದ ಪಟುವಿಗೆ ಚಿನ್ನದ ಬೂಟು ಲಭಿಸುತ್ತದೆ.
ಶ್ರೇಷ್ಠ ಗೋಲ್ ಕೀಪರ್ ಗೆ ಯಾಷಿನ್ ಪ್ರಶಸ್ತಿ
ಶ್ರೇಷ್ಠ ಯುವ ಫುಟ್ಬಾಲ್ ಪಟು :21 ವರ್ಷ ವಯಸ್ಸಿನೊಳಗಿನ ಯುವ ಆಟಗಾರಿಗೆ ಪ್ರಶಸ್ತಿ ಮೀಸಲು
ಫೇರ್ ಪ್ಲೇ ಪ್ರಶಸ್ತಿ : ಜನ ಮೆಚ್ಚುಗೆ ಪಡೆವ ಸಭ್ಯ ತಂಡವನ್ನು ಆರಿಸಲಾಗುತ್ತದೆ.
ಅತಿ ಮನರಂಜನಾಯುಕ್ತ ತಂಡ ಹಾಗೂ ಎಲ್ಲಾ ತಾರೆಗಳ ತಂಡ ಕೂಡ ಸೇರಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X