ನೋ ಯೂಟ್ಯೂಬ್, ಟ್ವಿಟ್ಟರ್, ಫೇಸ್ ಬುಕ್
ಇಸ್ಲಾಮಾಬಾದ್
, ಮೇ. 21: ಪಾಕಿಸ್ತಾನದಲ್ಲಿ ಫೇಸ್‌ಬುಕ್‌ನ್ನು ಬ್ಲಾಕ್ ಮಾಡಿದ ಬೆನ್ನಲ್ಲೇ ಇದೀಗ ವಿಡಿಯೋ ದೃಶ್ಯಾವಳಿ ಹಂಚಿಕೆಯ ವೈಬ್‌ಸೈಟ್ ಯೂಟ್ಯೂಬ್ ನ್ನು ಮೇಲೆ ಸಹ ನಿಷೇಧ ಹೇರಲಾಗಿದೆ. ಯೂ ಟ್ಯೂಬ್‌ಲ್ಲಿ ಇಸ್ಲಾಂ ವಿರೋಧಿ ಆಕ್ಷೇಪಾರ್ಹ ಸಂಗತಿಗಳಿರುವುದರಿಂದ ಅದನ್ನು ಪಾಕ್‌ನಲ್ಲಿ ನಿಷೇಧಿಸಲಾಗಿದೆ ಎಂದು ಪಾಕಿಸ್ತಾನ ದೂರಸಂಪರ್ಕ ಪ್ರಾಧಿಕಾರ ಹೇಳಿದೆ. id="toptextpromo">ಸಾಮಾಜಿಕ
ಜಾಲತಾಣಗಳನ್ನು ಗುರಿಯಾಗಿರಿಕೊಂಡಿರುವ ಪಾಕಿಸ್ತಾನ ಸರ್ಕಾರದ ಮುಂದಿನ ಗುರಿ ಟ್ವಿಟ್ಟರ್.ಕಾಂ ಮೇಲಿದೆ. ಯೂಟ್ಯೂಬ್, ಫೇಸ್ ಬುಕ್ ಗೆ ಆದ ಗತಿ ಟ್ವಿಟ್ಟರ್, ಆರ್ಕುಟ್ ಮುಂತಾದ ತಾಣಗಳಿಗೂ ಆಗಲಿದೆ ಎನ್ನಲಾಗಿದೆ. id='are-slot-1' class='oiad oi-axt oiadv'> id='top-searched-articles'>ಆದರೆ,
ಯೂ ಟ್ಯೂಬ್‌ನಲ್ಲಿರುವ ಆಕ್ಷೇಪಾರ್ಹ ಸಂಗತಿಗಳು ಯಾವುದು ಎಂಬುದರ ಬಗ್ಗೆ ಯಾವ ವಿವರವನ್ನು ಪ್ರಾಧಿಕಾರ ನೀಡಿಲ್ಲ. ಇಂಟರ್‌ನೆಟ್ ಸೇವೆ ಒದಗಿಸುವವರಿಗೆ ಯೂ ಟ್ಯೂಬ್‌ನ್ನು ಬ್ಲಾಕ್ ಮಾಡುವಂತೆ ಪ್ರಾಧಿಕಾರ ಸೂಚಿಸಿದೆ. ಈ ಮೂಲಕ ಈಗ ಪಾಕಿಸ್ತಾನದ ಇಂಟರ್ ನೆಟ್ ಬಳಕೆದಾರರು ಯೂ ಟ್ಯೂಬ್ ಸೇವೆಯಿಂದ ವಂಚಿತರಾಗಿದ್ದಾರೆ. ಮುಸ್ಲಿಂ ವಕೀಲರು ಲಾಹೋರ್ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ವಯ ಕೋರ್ಟ್ ಸೋಷಿಯಲ್ ನೆಟ್‌ವರ್ಕಿಂಗ್ ವೆಬ್‌ಸೈಟ್ ಫೇಸ್ ಬುಕ್‌ನ್ನು ಬ್ಲಾಕ್ ಮಾಡಲು ಆದೇಶಿಸಿತ್ತು.











Click it and Unblock the Notifications