ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುರುಘಾ ಮಠಾಧೀಶರಿಂದ ಬೆಕ್ಕಿನ ಕಲ್ಮಠ ಪ್ರವೇಶ

By Mahesh
|
Google Oneindia Kannada News

Murugha Mutt Seer Visits Bekkina Kalmatha
ಶಿವಮೊಗ್ಗ,ಮೇ.18: ಜೀವನ ಅನ್ನುವ ಬೇಸಾಯದಲ್ಲಿ ನಿರೀಕ್ಷಿತ ಫಲ ಪಡೆಯಲು ಸೂಕ್ತ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡರೆ ನಿರೀಕ್ಷಿತ ಫಲ ಪಡೆಯಬಹುದೆಂದು ಚಿತ್ರದುರ್ಗ ಬೃಹನ್ಮಠದ ಡಾ: ಶಿವಮೂರ್ತಿ ಮುರುಘಾ ರಾಜೇಂದ್ರ ಸ್ವಾಮಿಗಳು ತಿಳಿಸಿದರು.

ಬೆಕ್ಕಿನ ಕಲ್ಮಠ ಪ್ರವೇಶೋತ್ಸವ ಸಮಾರಂಭದ ಪ್ರಯುಕ್ತ ಏರ್ಪಡಿಸಿದ್ದ ಮಕ್ಕಳ ಕವಿ ಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೇಸಾಯ ಮಾಡುವಾಗ ಯಾವ ರೀತಿಯ ಸಿದ್ಧತೆ, ಮುಂಜಾಗ್ರತೆ ವಹಿಸುತ್ತೇವೆಯೋ, ಅದೇ ರೀತಿ ಜೀವನ ಎಂಬ ಬೇಸಾಯದಲ್ಲಿ ಉತ್ತಮ ಪಡೆಯಲು ಸೂಕ್ತ ಸಿದ್ಧತೆ, ತರಬೇತಿ ಪಡೆಯಬೇಕು. ಆಗ ಉಜ್ವಲವಾದ ಭವಿಷ್ಯ ನಮ್ಮದಾಗುತ್ತದೆ. ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು ಎಂದರು.

ಪೋಷಕರಾದವರು ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸಬೇಕು. ಮಕ್ಕಳಿಗೆ ಬೇಕಾಗುವಂತಹ ವಸ್ತುಗಳನ್ನು ಕೊಡಿಸಿದರೆ ಸಾಲದು, ಮಗುವಿನ ಹೃದಯ ಕುಸುಮದಂತೆ ಇದ್ದು, ಸೂಕ್ತ ಪರಿಸರದ ಪ್ರಭಾವದಿಂದ ಮಕ್ಕಳ ಹೃದಯ ಅರಳುತ್ತಾ ಹೋಗುತ್ತದೆ. ಹೀಗಾಗಿ ಮಕ್ಕಳ ಭಾವನೆಯನ್ನು ಅರ್ಥಮಾಡಿಕೊಂಡು ಪ್ರೋತ್ಸಾಹ ನೀಡಬೇಕು. ಭವಿಷ್ಯದಲ್ಲಿ ಮಗು ಏನಾಗಬೇಕು ಎಂದು ಆಸೆ ಪಡುತ್ತದೋ ಅದಕ್ಕೆ ಪ್ರೋತ್ಸಾಹ ನೀಡಬೇಕೆ ಹೊರತು, ಒತ್ತಡ ಹೇರಿ ಮಕ್ಕಳನ್ನು ಮೂಲೆಗೆ ತಳ್ಳುವ ಕೆಲಸ ಮಾಡಬಾರದು ಎಂದು ತಿಳಿಸಿದರು.

ಮಗುವನ್ನು ಹೆತ್ತು ಪೋಷಿಸಿದರೆ ಜವಾಬ್ದಾರಿ ಮುಗಿಯಿತ್ತೆಂದು ತಿಳಿದರೆ ತಪ್ಪಾದೀತು. ಅವರಲ್ಲಿ ನಮ್ಮ ನಿಮ್ಮಂತೆ ಆಗಲು ಬಿಡದೆ ಅವರಂತೆಯೇ ಬದುಕಲು ಬಿಟ್ಟರೆ ಉತ್ತಮವಾದ ಭವಿಷ್ಯವನ್ನು ರೂಪಿಸಿಕೊಳ್ಳುತ್ತದೆ. ಹೀಗಾಗಿ ಮಗುವಿನ ಅಂತರಂಗ, ಬಹಿರಂಗ ವಿಕಸನದಲ್ಲಿ ಪೋಷಕರು ಪಾತ್ರ ಅತ್ಯಂತ ಅವಶ್ಯಕವಾಗಿದೆ. ಪೋಷಕರು ತಮ್ಮ ಜವಾಬ್ದಾರಿಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಬೇಕು ಎಂದು ಅಭಿಪ್ರಾಯಪಟ್ಟರು.

ವೇದಿಕೆಯಲ್ಲಿ ಬಾಲೆಹೊಸೂರು ದಿಂಗಾಲೇಶ್ವರ ಮ.ನಿ.ಪ್ರ. ದಿಂಗಾಲೇಶ್ವರ ಸ್ವಾಮಿ, ವಿಧಾನ ಪರಿಷತ್ ಸದಸ್ಯ ಆರ್.ಕೆ.ಸಿದ್ದರಾಮಣ್ಣ, ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜುನ ಮುರುಘಾ ರಾಜೇಂದ್ರ ಸ್ವಾಮಿ, ಎಸ್.ಎಸ್.ಜ್ಯೋತಿ ಪ್ರಕಾಶ್, ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X