ಒಟ್ಟಿನಲ್ಲಿ ನಾನು ಸೋತಿರುವೆ : ಡಿ ಕೆ ಶಿವಕುಮಾರ್
ಬೆಂಗಳೂರು,
ಮೇ. 14 : ಇತ್ತೀಚಿನ ಚುನಾವಣೆಗಳಲ್ಲಿ ಪಕ್ಷಕ್ಕೆ ಉತ್ತಮ ಫಲಿತಾಂಶ ತಂದು ಕೊಡಲಾಗಲಿಲ್ಲ ಎನ್ನುವ ಬೇಸರ ನನ್ನನ್ನು ಕಾಡುತ್ತಿದೆ. ನಾನು ಮಾಡಿರುವ ತಪ್ಪುಗಳೇ ಇದಕ್ಕೆ ಕಾರಣವಿರಬಹುದು. ಎಲ್ಲಾ ತಪ್ಪು ನನ್ನಿಂದಲೇ ಆಗಿದೆ. ಆ ಬಗ್ಗೆ ನನಗೆ ತೀವ್ರ ನೋವು ಮತ್ತು ಬೇಸರವಿದೆ. ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷನಾಗಿ ವರಿಷ್ಠರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲು ನನ್ನಿಂದ ಸಾಧ್ಯವಾಗಲಿಲ್ಲ ಎಂದು ಡಿ ಕೆ ಶಿವಕುಮಾರ್ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ. id="toptextpromo">ಮಾಧ್ಯಮ
ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾರ್ಯಾಧ್ಯಕ್ಷನಾಗಿ ಯಾವ ರೀತಿ ಕೆಲಸ ಮಾಡಬೇಕೆಂದು ಮತ್ತು ಪಕ್ಷದ ಸಂಘಟನೆ ಹೇಗೆ ನಡೆಸಬೇಕೆಂದು ಮೊದಲೇ ಯೋಜನೆ ಸಿದ್ದಪಡಿಸಿಕೊಂಡಿದ್ದೆ. ಆದರೆ ಆ ಯೋಜನೆ ಕಾರ್ಯರೂಪಕ್ಕೆ ಬರಲಿಲ್ಲ ಎಂದರು. ನನ್ನ ಶಕ್ತಿಯನ್ನು ಸಂಪೂರ್ಣವಾಗಿ ಧಾರೆ ಎರೆಯಲು ಆಗಲಿಲ್ಲ. ಫಲಿತಾಂಶ ಆಧಾರಿತ ನಾಯಕ ನಾನಾಗಲಿಲ್ಲ, ಒಟ್ಟಿನಲ್ಲಿ ನಾನು ವಿಫಲನಾದೆ ಎಂದು ಡಿಕೆಶಿ ಆತ್ಮಾವಲೋಕನ ಮಾಡಿಕೊಂಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ನನ್ನ
ಮತ್ತು ಅಧ್ಯಕ್ಷರ ನಡುವೆ ಹೊಂದಾಣಿಕೆ ಇರಲಿಲ್ಲ ಎನ್ನುವ ಮಾತು ನಿರಾಧಾರಿತ. ದೇಶಪಾಂಡೆ ವಹಿಸಿದ ಕೆಲಸವನ್ನು ಮಾಡಿದ್ದೇನೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಯುವ ಚುನಾವಣೆಯಲ್ಲಿ ಸ್ಪರ್ಧಿಸಬೇಕೆನ್ನುವ ಇಚ್ಛೆ ನನಗಿಲ್ಲ. ನನ್ನನ್ನು ಈ ಸ್ಥಾನಕ್ಕೆ ನೇಮಕ ಮಾಡಿದವರು ಸೋನಿಯಾ ಮೇಡಂ. ಅವರು ಎಲ್ಲಿಯವರೆಗೆ ಇಟ್ಟಿರುವವರೋ ಅಲ್ಲಿಯವರೆಗೆ ಈ ಹುದ್ದೆಯಲ್ಲಿ ಇರುತ್ತೇನೆ ಎಂದು ಶಿವಕುಮಾರ್ ಹೇಳಿದರು. ಆದರೆ ತಾನಾಗಿ ಹುದ್ದೆಯಿಂದ ನಿರ್ಗಮಿಸುವುದಿಲ್ಲ ಎನ್ನುವ ಸುಳಿವನ್ನು ಅವರು ನೀಡಿದ್ದಾರೆ.











Click it and Unblock the Notifications