18 ಹೈಕೋರ್ಟ್ ನ್ಯಾಯಮೂರ್ತಿಗಳ ಆಸ್ತಿ ಘೋಷಣೆ

ಇವರ ಆಸ್ತಿ ವಿವರ ಬಹಿರಂಗದಿಂದಾಗಿ ರಾಜ್ಯದಲ್ಲಿ ಆಸ್ತಿ ವಿವರ ನೀಡಿದ ನ್ಯಾಯಮೂರ್ತಿಗಳ ಸಂಖ್ಯೆ 19ಕ್ಕೇರಿದೆ. ಈಮೊದಲು ಆಸ್ತಿ ವಿವರ ನೀಡಿ ನ್ಯಾ.ಡಿವಿ ಶೈಲೇಂದ್ರ ಸಂಚಲನ ಉಂಟುಮಾಡಿದ್ದರು. ಎಲ್ಲ ನ್ಯಾಯಮೂರ್ತಿಗಳ ಆಸ್ತಿ ವಿವರಗಳು ಕರ್ನಾಟಕ ಉಚ್ಚ ನ್ಯಾಯಾಲಯದ ಅಂತರ್ಜಾಲ ತಾಣದಲ್ಲಿ ಲಭ್ಯವಿವೆ.
ನ್ಯಾಯಮೂರ್ತಿಗಳಾದ ಮಂಜುಳಾ ಚೆಲ್ಲೂರ್, ಕೆ. ಶ್ರೀಧರ ರಾವ್, ಎನ್ ಕುಮಾರ್, ಕೆ ಭಕ್ತವತ್ಸಲ, ಮೋಹನ್ ಶಾಂತನ ಗೌಡರ್, ಎಚ್ ಬಿಲ್ಲಪ್ಪ, ಎಸ್ ಅಬ್ದುಲ್ ನಜೀರ್, ಬಿಎಸ್ ಪಾಟೀಲ್, ವಿ ಜಗನ್ನಾಥನ್, ಸಿಆರ್ ಕುಮಾರಸ್ವಾಮಿ, ಅಶೋಕ್ ಬಿ ಹಿಂಚಿಗೇರಿ, ಎಎಸ್ ಬೋಪಣ್ಣ, ಎನ್ ಆನಂದ, ಎಎನ್ ವೇಣುಗೋಪಾಲ ಗೌಡ, ಅರಳಿ ನಾಗರಾಜ್, ಎಎಸ್ ಪಾಚಾಪುರೆ, ಕೆಎನ್ ಕೇಶವ್ ನಾರಾಯಣ ಮತ್ತು ಅರವಿಂದ್ ಕುಮಾರ್ ಇವರು ಆಸ್ತಿ ವಿವರ ಬಹಿರಂಗಪಡಿಸಿದ್ದಾರೆ.
ಕೆಲ ನ್ಯಾಯಮೂರ್ತಿಗಳು ತಮ್ಮ ಹೆಂಡತಿ ಮತ್ತು ಮಕ್ಕಳ ಹೆಸರಲ್ಲಿರುವ ಚರಾಸ್ತಿ, ಸ್ಥಿರಾಸ್ತಿ, ಶೇರು, ಮ್ಯೂಚುವಲ್ ಫಂಡುಗಳಲ್ಲಿನ ಹೂಡಿಕೆ ಮುಂತಾದವುಗಳ ವಿವರಗಳನ್ನು ಕೂಡ ನೀಡಿದ್ದಾರೆ. ಹೈಕೋರ್ಟಿನ ಇನ್ನೂ 19 ನ್ಯಾಯಮೂರ್ತಿಗಳು ತಮ್ಮ ಆಸ್ತಿ ಮತ್ತು ಹೊರೆಗಳ ವಿವರಗಳನ್ನು ಇನ್ನೂ ಪ್ರಕಟಿಸಬೇಕಾಗಿದೆ. ತಮಿಳುನಾಡಿನಲ್ಲಿ ಅಕ್ರಮವಾಗಿ ಸರಕಾರಿ ಜಮೀನನ್ನು ಕಬಳಿಸಿದ್ದಾರೆಂಬ ಆರೋಪಕ್ಕೆ ಗುರಿಯಾಗಿರುವ ನ್ಯಾ. ಪಿಡಿ ದಿನಕರನ್ ಆಸ್ತಿ ಬಹಿರಂಗಪಡಿಸದವರಲ್ಲಿ ಪ್ರಮುಖರು.












Click it and Unblock the Notifications