ಸಮರ್ಥ ನಾಯಕತ್ವದ ಕಿಡಿ ಹಾರಿಸಿದ ರಾಹುಲ್
ಕಾಸರಗೋಡು,
ಮೇ. 11 : ಸಮರ್ಥ ನಾಯಕತ್ವದಿಂದ ಮಾತ್ರ ಭಾರತದಂತಹ ಪ್ರಜಾಪ್ರಭುತ್ವ ದೇಶ ನಂಬರ್ ಸ್ಥಾನಕ್ಕೇರಲು ಸಾಧ್ಯ ಎಂದು ಕಾಂಗ್ರೆಸ್ ಯುವ ನಾಯಕ ಹಾಗೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅಭಿಪ್ರಾಯಪಟ್ಟರು. id="toptextpromo">ಕಾಸರಗೋಡು
ಸಮೀಪದ ವಿದ್ಯಾನಗರ ಚಿನ್ಮಯ ತೇಜಸ್ ಸಭಾಂಗಣದಲ್ಲಿ ನಡೆದ ಯುವಕಾಂಗ್ರೆಸ್ ಕಾರ್ಯಕರ್ತರ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಯುವಕಾಂಗ್ರೆಸ್ ಸಾಂಸ್ಥಿಕ ಚುನಾವಣೆ ರಾಜ್ಯದಲ್ಲಿ ಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮೊದಲು ಪೂರ್ಣಗೊಳ್ಳಲಿದೆ. ಸಂಘಟನಾ ಚುನಾವಣೆಯನ್ನು ಪಾರದರ್ಶಕ ಮತ್ತು ಪ್ರಾಮಾಣಿಕತೆಯಿಂದ ನಡೆಸಲಾಗುವುದು. ಯುವಕಾಂಗ್ರೆಸ್ ಪ್ರಜಾಪ್ರಸತ್ತಾತ್ಮಕ ಸಂಘಟನೆ, ಭಿನ್ನಾಭಿಪ್ರಾಯ ಇದ್ದರೂ ಚರ್ಚೆಗಳ ಮೂಲಕ ಪರಿಹರಿಸಬೇಕು ಎಂದು ರಾಹುಲ್ ಗಾಂಧಿ ಸಲಹೆ ನೀಡಿದರು. id='are-slot-1' class='oiad oi-axt oiadv'> id='top-searched-articles'>ಯುವಕಾಂಗ್ರೆಸ್
ನ ಗುಂಪುಗಾರಿಕೆ ಗಣನೀಯವಾಗಿ ಕುಸಿದಿದೆ. ತಮಿಳುನಾಡು, ಪಂಜಾಬ್ ರಾಜ್ಯಗಳು ಇದಕ್ಕೆ ಸಾಕ್ಷಿಯಾಗಿವೆ. ಆದರೆ, ಸಿಪಿಎಂ ಮತ್ತು ಅದರ ಸಂಘಟನೆಗಳು ಈ ರೀತಿಯ ಚುನಾವಣೆ ನಡೆಸಲು ಸಾಧ್ಯವೇ ಎಂದು ಗಾಂಧಿ ಪ್ರಶ್ನಿಸಿದರು. ಕೇರಳದಲ್ಲಿ ಸಿಪಿಎಂ ನೇತೃತ್ವದ ಸರಕಾರ ಅಸ್ತಿತ್ವದಲ್ಲಿದೆ.











Click it and Unblock the Notifications