ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜುಲೈಗೆ ಮೈಸೂರಲ್ಲಿ ಜಯದೇವ ಆಸ್ಪತ್ರೆ

By Mahesh
|
Google Oneindia Kannada News

Jayadeva Hospital Mysore likely to open in july
ಬೆಂಗಳೂರು ಮೇ.7: ಮೈಸೂರಿನ ಕೆ.ಆರ್.ಆಸ್ಪತ್ರೆ ಆವರಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಘಟಕವು ಮುಂದಿನ ಜುಲೈನಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಮತ್ತು ನಗರಾಭಿವೃದ್ಧಿ, ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಸ್.ಸುರೇಶ್‌ಕುಮಾರ್ ಹೇಳಿದ್ದಾರೆ.

ಅವರು ಗುರುವಾರ ಈ ಸಂಬಂಧ ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರಗೌಡ ಹಾಗೂ ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ಸಿ.ಎನ್.ಮಂಜುನಾಥ್ ಮತ್ತು ಉನ್ನತ ಅಧಿಕಾರಿಗಳೊಂದಿಗೆ ನಡೆದ ಸಭೆಯ ಬಳಿಕ ಈ ವಿಚಾರವನ್ನು ತಿಳಿಸಿದರು. ಮೊದಲ ಹಂತದಲ್ಲಿ 70 ಹಾಸಿಗೆಗಳ ಆಸ್ಪತ್ರೆ ಆರಂಭವಾಗಲಿದ್ದು ಸುಮಾರು 9,780 ಚ.ಅಡಿ ಸ್ಥಳಾವಕಾಶದಲ್ಲಿ ನೆಲಮಹಡಿ ಕಾರ್ಯನಿರ್ವಹಿಸಲಿದೆ ಎಂದಿದ್ದಾರೆ. ಇದರಲ್ಲಿ ಇ.ಸಿ.ಜಿ., ಎಕೊ, ತ್ರೆಡ್ ಮಿಲ್ ಟೆಸ್ಟ್, ಎಕ್ಸರೆ, ಪ್ರಯೋಗಾಲಯ, ತುರ್ತು ಚಿಕಿತ್ಸಾ ಘಟಕ, 5 ಹಾಸಿಗೆಗಳ ತುರ್ತು ನಿಗಾ ಘಟಕಗಳು ಕಾರ್ಯನಿರ್ವಹಿಸಲಿವೆ.

ಪುರುಷರಿಗಾಗಿ 24 ಹಾಸಿಗೆಗಳು, ಮಹಿಳೆಯರಿಗೆ 14 ಮತ್ತು ವಿಶೇಷ ವಾರ್ಡಿನಲ್ಲಿ 5 ಹಾಸಿಗೆ ಹಾಗೂ ಅರೆ ವಿಶೇಷ ವಾರ್ಡುಗಳಲ್ಲಿ 6 ಹಾಸಿಗೆಗಳ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದು ಅವರು ಹೇಳಿದರು. ಆಸ್ಪತ್ರೆ ಕಾರ್ಯಾರಂಭ ಕುರಿತಂತೆ ಸಭೆಯಲ್ಲಿ ವಿವರ ನೀಡಿದ ಡಾ: ಮಂಜುನಾಥ್ ಅವರು ಆಸ್ಪತ್ರೆಗೆ ಅಗತ್ಯವಾದ ಲಿಫ್ಟ್, ಜನರೇಟರ್ ಹಾಗೂ ಇತರ ಅತ್ಯಾವಶ್ಯಕ ಸೌಲಭ್ಯಗಳನ್ನು ಜಯದೇವ ಆಸ್ಪತ್ರೆಯ ವತಿಯಿಂದಲೇ ಅಳವಡಿಸಲಾಗುವುದು ಎಂದು ತಿಳಿಸಿದರು.

ಲಿಫ್ಟ್ ಅಳವಡಿಸಲು ಈಗಾಗಲೇ ಟೆಂಡರ್ ಕರೆಯಲಾಗಿದ್ದು ಇದಕ್ಕಾಗಿ 60 ಲಕ್ಷ ವೆಚ್ಚ ಮಾಡಲಾಗುತ್ತಿದೆ. ಇದಲ್ಲದೇ ಆಸ್ಪತ್ರೆಗೆ ಅಗತ್ಯವಾದ ತಜ್ಞ ವೈದ್ಯರು ಹಾಗೂ ಶುಶ್ರೂಷಕಿಯರನ್ನು ಈಗಾಗಲೇ ನೇಮಕ ಮಾಡಿಕೊಳ್ಳಲಾಗಿದ್ದು ಅವರಿಗೆ ಜಯದೇವ ಆಸ್ಪತ್ರೆಯಲ್ಲಿ ತರಬೇತಿಯನ್ನೂ ಸಹ ನೀಡಲಾಗಿದೆ ಎಂದು ತಿಳಿಸಿದರು. ಪಿ.ಕೆ.ಸ್ಯಾನಿಟೋರಿಯಂ ಆವರಣದಲ್ಲಿ 15 ಎಕರೆ ಪ್ರದೇಶವನ್ನು ಜಯದೇವ ಆಸ್ಪತ್ರೆಗೆ ಮಂಜೂರು ಮಾಡಲಾಗಿದ್ದು, ಅಲ್ಲಿ ಪೂರ್ಣ ಪ್ರಮಾಣದ ಹೃದ್ರೋಗ ಆಸ್ಪತ್ರೆಯನ್ನು ತೆರೆಯಲಾಗುವುದು ಎಂದು ಅವರು ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X