ಹೊಗೇನಕಲ್ ವಿವಾದ : ರಕ್ತಕ್ರಾಂತಿಗೂ ಸಿದ್ಧ
ಬೆಂಗಳೂರು,
ಏ. 29 : ವಿವಾದಿತ ಹೊಗೇನಕಲ್ ಕುಡಿಯುವ ನೀರಿನ ಯೋಜನೆಯನ್ನು ತಮಿಳುನಾಡು ಸರಕಾರ ಕೂಡಲೇ ಕೈಬಿಡಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು. ರಾಜ್ಯದ ಒಂದಿಂಚು ಭೂಮಿ ಕಬಳಿಕೆಯಾದರೂ ರಕ್ತಕ್ರಾಂತಿಗೆ ಹಿಂಜರಿಯುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ ಎ ನಾರಾಯಣಗೌಡ ಎಚ್ಚರಿಕೆ ನೀಡಿದ್ದಾರೆ. id="toptextpromo">ನಗರದ
ಖಾಸಗಿ ಹೋಟೆಲ್ ನಲ್ಲಿ ನಡೆದ ಸಭೆಯಲ್ಲಿ, ಈ ಯೋಜನೆ ಮುಂದುವರಿದಲ್ಲಿ ತಮಿಳುನಾಡಿನೊಂದಿಗಿನ ಸಂಪರ್ಕವನ್ನು ಕಡಿತಗೊಳಿಸಲಾಗುವುದು. ರಾಜ್ಯದಲ್ಲಿ ತಮಿಳು ಸಿನಿಮಾ ಮತ್ತು ಕೇಬಲ್ ಗಳನ್ನು ನಿಷೇಧಗೊಳಿಸಲಾಗುವುದು ಎಂದರು. ನಾಡು ನುಡಿಗೆ ಹೋರಾಟ ಮಾಡುತ್ತಿರುವವರ ವಿರುದ್ಧ ಸರಕಾರ, ಡಕಾಯಿತಿ, ಕೊಲೆ, ಬೆದರಿಕೆ ಇತ್ಯಾದಿ ಪ್ರಕರಣ ದಾಖಲಿಸಿಕೊಂಡು ಕಿರುಕುಳ ನೀಡುತ್ತಿದೆ. id='are-slot-1' class='oiad oi-axt oiadv'> id='top-searched-articles'>ತಿರುವಳ್ಳುವರ್
ಪ್ರತಿಮೆ ಅನಾವರಣ ಸಂದರ್ಭದಲ್ಲಿ ನಮ್ಮನ್ನು ಜೈಲಿಗೆ ತಳ್ಳಲಾಯಿತು. ಜೈಲಿಂದ ಹೊರಬರಬೇಕಾದರೆ 24 ರುಪಾಯಿ ಖರ್ಚಾಯಿತು. ಕನ್ನಡ ಕೆಲಸಕ್ಕೆ ಸರಕಾರ ನೀಡಿದ ಗೌರವವಿದೆ ಎಂದು ನಾರಾಯಣಗೌಡ ನೊಂದು ನುಡಿದರು. ಧರ್ಮಪುರಿ ಮತ್ತು ಕೃಷ್ಣಗಿರಿ ಮಾತ್ರ ಇದ್ದು ನೀರು ಸರಬರಾಜು ಯೋಜನೆಯನ್ನ ತಮಿಳುನಾಡು ಸರಕಾರ ಇದೀಗ ಹೊಸೂರಿಗೂ ವಿಸ್ತರಿಸಿದೆ. ಯೋಜನೆ ನಡೆಯುತ್ತಿರುವ ಸ್ಥಳ ಯಾವ ರಾಜ್ಯದ್ದು ಎಂದು ನಿರ್ಧಾರವಾಗದ ತನಕ ಯೋಜನೆಯನ್ನು ಕೈಬಿಡಬೇಕು ಎಂದು ಅವರು ಆಗ್ರಹಿಸಿದರು.











Click it and Unblock the Notifications