ರಂಜಿತಾ ಅಷ್ಟೆಅಲ್ಲ ಐವರೊಂದಿಗೆ ನಿತ್ಯಾ ಆನಂದ

ನಿತ್ಯಾನಂದ ಸ್ವಾಮಿಯ ವಿಚಾರಣೆ ನಡೆಸಿದ ರಾಮನಗರ ಜಿಲ್ಲಾ ಸೆಷನ್ಸ್ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ನಾರಾಯಣ ಪ್ರಸಾದ್, ಸ್ವಾಮಿ ಬಂಧನ ಅವಧಿಯನ್ನು ಏಕೆ ವಿಸ್ತರಿಸಬೇಕು ಎಂದು ಪ್ರಶ್ನಿಸಿದ್ದಕ್ಕೆ ಸಿಐಡಿ ಪೊಲೀಸರು ವಿಚಾರಣೆಗಾಗಿ ಬಂಧನ ಅವಧಿಯನ್ನು ವಿಸ್ತರಿಸಬೇಕು ಎಂದು ನ್ಯಾಯಾಲಯಕ್ಕೆ ಕೇಳಿಕೊಂಡಿದ್ದಾರೆ.
ಹತ್ತಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳಲ್ಲಿ 32 ಕೋಟಿ ರೂಪಾಯಿ ಪತ್ತೆಯಾಗುವ ಮೂಲಕ ಕೋಟ್ಯಾಧೀಶ ಸ್ವಾಮಿ ಎಂಬುದನ್ನು ಸಾಬೀತುಪಡಿಸಿದ್ದಾನೆ.
ಸ್ವಯಂಘೋಷಿತ ದೇವಮಾನವ ಎಂದೇ ಬಿಂಬಿಸಿಕೊಂಡಿರುವ ನಿತ್ಯಾನಂದ ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಖಾಸಗಿ ಬ್ಯಾಂಕ್‌ಗಳಲ್ಲಿನ ಖಾತೆಗಳಲ್ಲಿ 32 ಕೋಟಿ ರೂಪಾಯಿ ಠೇವಣಿ ಹೊಂದಿರುವುದನ್ನು ಸಿಐಡಿ ಆರ್ಥಿಕ ಅಪರಾಧ ವಿಭಾಗದ ಅಧಿಕಾರಿಗಳು ತನಿಖೆಯಿಂದ ತಿಳಿದು ಬಂದಿದೆ.
ಆ ನಿಟ್ಟಿನಲ್ಲಿ ನಿತ್ಯಾನಂದನ ಎಲ್ಲಾ ಆರ್ಥಿಕ ವ್ಯವಹಾರಗಳ ಮೂಲಗಳ ಬಗ್ಗೆ ತೀವ್ರ ತನಿಖೆ ನಡೆಸುತ್ತಿದ್ದಾರೆ. ಆತನ ಕೆಲವು ಬ್ಯಾಂಕ್ ಖಾತೆಗಳಲ್ಲಿ ಎರಡು ಟ್ರಸ್ಟ್ ಹೆಸರಲ್ಲಿ ವ್ಯವಹಾರ ನಡೆಸುತ್ತಿದ್ದ. ಹಾಗಾಗಿ ಈ ಖಾತೆಗಳಿಗೆ ಯಾವ ಮೂಲಗಳಿಂದ ಹಣ ಹರಿದು ಬರುತ್ತಿದೆ ಎಂಬುದರ ಶೋಧದಲ್ಲಿದ್ದಾರೆ. 2003ರಲ್ಲಿ ರಿಜಿಸ್ಟರ್ಡ್ ಆದ ಧ್ಯಾನಪೀಠ ಚಾರಿಟೇಬಲ್ ಟ್ರಸ್ಟ್ (ಡಿಪಿಸಿಟಿ) ಹಾಗೂ 2005ರಲ್ಲಿ ರಿಜಿಸ್ಟರ್ಡ್ ಆದ ನಿತ್ಯಾನಂದ ಧ್ಯಾನಪೀಠಂ ಟ್ರಸ್ಟ್ (ಎನ್‌ಡಿಟಿ) ಹೆಸರಿನ ಎರಡು ಬ್ಯಾಂಕ್ ಖಾತೆಗೆ ವಿವಿಧ ಮೂಲಗಳಿಂದ ಅಪಾರ ಪ್ರಮಾಣದಲ್ಲಿ ಹಣ ಜಮಾವಣೆಗೊಂಡಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಸಿಐಡಿ ಅಧಿಕಾರಿಗಳು ವಿವರಿಸಿದ್ದಾರೆ.












Click it and Unblock the Notifications