Get Updates
Get notified of breaking news, exclusive insights, and must-see stories!

ಟಾಟಾ ಸೌರಶಕ್ತಿ ಉತ್ಪಾದನೆ ಶೇ.62 ರಷ್ಟು ವಿಸ್ತರಣೆ

Tata BP Solar Ceo, Subramanya
ಬೆಂಗಳೂರು, ಏ. 28: ಬಿಪಿ ಸೋಲಾರ್ ಹಾಗೂ ಟಾಟಾ ಪವರ್ ಸಂಸ್ಥೆಗಳ ಜಾಯಿಂಟ್ ವೆಂಚರ್ ಆಗಿರುವ, ಟಾಟಾ ಬಿಪಿ ಸೋಲಾರ್, ಬೆಂಗಳೂರಿನ ತನ್ನ ಸ್ಥಾವರದಲ್ಲಿ 32 ಮೆಗಾವ್ಯಾಟ್ ಸೊಲಾರ್ ಫೋಟೊವೊಲ್ಟಾಯಿಕ್ (ಪಿವಿ) ಸೆಲ್‌ಗಳ ಹೊಸ ಉತ್ಪನ್ನ ಲೈನ್ ಸೇರಿಸಿದೆ.

ಪ್ರಸ್ತುತ 52 ಮೆಗಾವ್ಯಾಟ್ ಸೆಲ್ ಸಾಮರ್ಥ್ಯಕ್ಕೆ ಹೆಚ್ಚುವರಿಯಾಗಿ, ಇಂದಿನ ಅಭಿವೃದ್ಧಿಯು 125 ಮೆಗಾವ್ಯಾಟ್ ಮಾಡ್ಯೂಲ್ ಸಾಮರ್ಥ್ಯದೊಂದಿಗೆ ಒಟ್ಟು ಸೆಲ್ ಸಾಮರ್ಥ್ಯವನ್ನು 84 ಮೆಗಾವ್ಯಾಟ್‌ಗೆ ಕೊಂಡೊಯ್ದಿದೆ. ಈ ಮೂಲಕ ಸೌರಶಕ್ತಿ ಮಾರುಕಟ್ಟೆಯಲ್ಲಿ ಟಾಟಾ ಬಿಪಿ ಸೊಲಾರ್ ತನ್ನ ಸೊಲಾರ್ ಉತ್ಪಾದನಾ ಸಾಮರ್ಥ್ಯವನ್ನು 62% ನಷ್ಟು ವಿಸ್ತರಿಸಿದೆ.

ಸೂರ್ಯನ ಬೆಳಕಿನಿಂದ ವಿದ್ಯುತ್ ಉತ್ಪಾದಿಸಲು ಬಳಸಲೆಂದು, ಸಂಸ್ಥೆಯು ಉನ್ನತ ಗುಣಮಟ್ಟದ, ಕಡಿಮೆ-ದರದ ಕ್ರಿಸ್ಟಲೈನ್ ಸಿಲಿಕಾನ್ ಸೆಲ್‌ಗಳನ್ನು (ಮೊನೊ ಹಾಗೂ ಮಲ್ಟಿ-ಕ್ರಿಸ್ಟಲೈನ್‌ಗಳೆರಡೂ) ಮತ್ತು ಸೋಲಾರ್ ಮಾಡ್ಯೂಲ್‌ಗಳನ್ನು ತಯಾರಿಸುತ್ತದೆ. ಟಾಟಾ ಬಿಪಿ ಸೋಲಾರ್ ಸೆಲ್ ಮತ್ತು ಮಾಡ್ಯೂಲ್‌ಗಳನ್ನು ಗೃಹ ಬೆಳಕಿನ ವ್ಯವಸ್ಥೆಗಳು, ಬೀದಿ ದೀಪಗಳು ಮತ್ತು ಟೆಲಿ ಕಮ್ಯೂನಿಕೇಷನ್ ಟವರ್‌ಗಳು ಅಥವಾ ಮೇಲ್ಛಾವಣಿಗಳಲ್ಲಿ ಅಥವಾ ತೆರೆದ ಸ್ಥಳಗಳಲ್ಲಿ ಸೋಲಾರ್ ಸ್ಥಾವರಗಳಲ್ಲಿ ಉತ್ಪಾದಿಸಲಾದ ವಿದ್ಯುತ್ತನ್ನು ನೇರವಾಗಿ ವಿದ್ಯುತ್ ಗ್ರಿಡ್‌ಗೆ ಸಂಪರ್ಕಿಸುವಂತಹ ಉತ್ಪನ್ನಗಳಿಗೆ ಅವುಗಳನ್ನು ಅಳವಡಿಸಲಾಗುತ್ತದೆ.

ಟಾಟಾ ಬಿಪಿ ಸೊಲಾರ್‌ ನಿರ್ದೇಶಕ ಫೆಸಾನಿಯವರು ಮಾತನಾಡಿ: 'ಟಾಟಾ ಬಿಪಿ ಸೋಲಾರ್ ಕಳೆದ 20 ವರ್ಷಗಳಲ್ಲಿ ಸರಿಸಾಟಿಯಿಲ್ಲದ ಲಾಭದಾಯಕ ಬೆಳವಣಿಗೆಯನ್ನು ದಾಖಲಿಸಿದೆ. 2010 ರಲ್ಲಿ ಜಾಗತಿಕ ಸೋಲಾರ್ ಬೇಡಿಕೆಯು ಶೇ.80 ರಷ್ಟು ಬೆಳೆಯುವ ನಿರೀಕ್ಷೆಯಿದೆ ಮತ್ತು ಭಾರತದಲ್ಲಿ ಇದು ಐದು ಪಟ್ಟು ಹೆಚ್ಚಾಗಿ 150 ಮೆಗಾವ್ಯಾಟ್‌ನಷ್ಟು ಬೆಳೆಯುವ ಸಾಧ್ಯತೆಯಿದೆ. ದೀರ್ಘಾವಧಿಯಲ್ಲಿ ಭಾರತೀಯ ಮಾರುಕಟ್ಟೆಯು 2022 ರೊಳಗಾಗಿ ಜಾಗತಿಕ-ಮಟ್ಟದ ಮಾರುಕಟ್ಟೆಯಾಗಿ ಬೆಳೆಯಲಿದ್ದು, ಭಾರತ ಸರ್ಕಾರವು ಪ್ರಕಟಿಸುವ ಬೆಂಬಲ ನಿಯಮಗಳಿಂದ ಉತ್ತೇಜನ ಪಡೆಯಲಿದೆ' ಎಂದು ಹೇಳಿದರು.

ಮೆನನ್‌, ಎಂಡಿ, ಟಾಟಾ ಪವರ್, ಇವರು ಮಾತನಾಡಿ, 'ಭಾರತದ ವಿದ್ಯುತ್ ಕ್ಷೇತ್ರದಲ್ಲಿನ ಬೇಡಿಕೆ ಮತ್ತು ಸರಬರಾಜಿನ ನಡುವೆ ಬಹು ದೊಡ್ಡ ಅಂತರವಿರುವುದರಿಂದ, ವರ್ಷದಾದ್ಯಂತ ದೇಶದೆಲ್ಲೆಡೆ ಸಮೃದ್ಧವಾದ ಸೂರ್ಯನ ಬೆಳಕು ಲಭ್ಯವಿರುವುದನ್ನು ಪರಿಗಣಿಸಿದರೆ, ಸೋಲಾರ್ ಎನರ್ಜಿಯ ಬೃಹತ್ ಪ್ರಮಾಣದ ಬಳಕೆಯು ಪ್ರಾಮುಖ್ಯವಾಗಲಿದೆ. ಟಾಟಾ ಬಿಪಿ ಸೋಲಾರ್ ಭಾರತದ ಕೆಲವು ಬೃಹತ್ ಸೊಲಾರ್ ಸ್ಥಾವರಗಳನ್ನು ನಿರ್ಮಿಸುತ್ತಿದೆ 'ಎಂದು ಹೇಳಿದರು.

ಟಾಟಾಗೆ 20 ಸಾವಿರ ಮೆ.ವ್ಯಾ ಉತ್ಪಾದನೆ ಗುರಿ

ಟಾಟಾ ಬಿಪಿ ಸೊಲಾರ್‌ ಸಿಇಒ, ಸುಬ್ರಮಣ್ಯರವರು ಮಾತನಾಡಿ,'ಆಫ್-ಗ್ರಿಡ್ ವಿಧಾನದಲ್ಲಿ ಎರಡು ದಶಕಗಳಿಗೂ ಹೆಚ್ಚಿನ ಕಾಲ ಭಾರತೀಯ ಮಾರುಕಟ್ಟೆಯನ್ನು ಬೆಳೆಸಿದ ನಂತರ, ಜವಾಹರಲಾಲ್ ನೆಹರು ನ್ಯಾಶನಲ್ ಸೋಲಾರ್ ಮಿಶನ್ ಪರಿಗಣನೆಯಲ್ಲಿಟ್ಟುಕೊಂಡು ಭಾರತದಲ್ಲಿ ತೆರೆದುಕೊಳ್ಳುತ್ತಿರುವ ಹೊಸ ಮಾರುಕಟ್ಟೆಗೆ ಸೇವೆಯನ್ನು ಒದಗಿಸಲು, ಟಾಟಾ ಬಿಪಿ ಸೋಲಾರ್ ಈಗಾಗಲೇ ಹೆಚ್ಚುವರಿ ಸೆಲ್ ಸಾಮರ್ಥ್ಯದೊಂದಿಗೆ ಸನ್ನದ್ಧವಾಗಿದೆ'. 2020 ರ ಒಳಗಾಗಿ 20,000 ಮೆಗಾವ್ಯಾಟ್‌ ಸೌರಶಕ್ತಿಯನ್ನು ಉತ್ಪಾದಿಸುವ ಮತ್ತು ಹೆಚ್ಚುವರಿಯಾಗಿ ಆಫ್-ಗ್ರಿಡ್ ಸೊಲಾರ್ ಸ್ಥಾವರಗಳಲ್ಲಿ 2,000 ಮೆಗಾವ್ಯಾಟ್‌ ಉತ್ಪಾದಿಸುವ ಗುರಿಯನ್ನು ಈ ಮಿಶನ್ ಹೊಂದಿದೆ.

25 ವರ್ಷಗಳ ಅಂತ್ಯದಲ್ಲೂ ಸಹ ನಮ್ಮ ಸೊಲಾರ್ ಪ್ಯಾನಲ್‌ಗಳು ಶೇ.85 ರಷ್ಟು ವಿದ್ಯುತ್ ಉತ್ಪಾದಿಸುತ್ತದೆಂಬುವ ನಮ್ಮ ಮಾರುಕಟ್ಟೆಯ ಪ್ರಮುಖ ಖಚಿತತೆಯನ್ನೂ ಒಳಗೊಂಡಂತೆ, ನಮ್ಮ ಗುಣಮಟ್ಟದ ಉತ್ಪನ್ನಗಳು ಮತ್ತು ಪರಿಹಾರಗಳ ಮೂಲಕ ಭಾರತದ ಸೊಲಾರ್ ಮಿಶನ್‌ನ ಯಶಸ್ಸಿಗೆ ಕೊಡುಗೆ ನೀಡಲು ನಾವು ಬದ್ಧರಾಗಿದ್ದೇವೆ' ಎಂದರು.

ಟಾಟಾ ಬಿಪಿ ಸೋಲಾರ್ ನ ನಿರ್ದೇಶಕ ರಿಯಾದ್ ಫೆಸಾನಿ, ದ ಟಾಟಾ ಪವರ್ ಕಂಪನಿ ಎಂಡಿ ಪ್ರಸಾದ್ ಮೆನನ್, ಇಂದು ಬೆಳಗ್ಗೆ ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿರುವ ಟಾಟಾ ಬಿಪಿ ಸೋಲಾರ್ ಸ್ಥಾವರದಲ್ಲಿ ಹೊಸ ಸೆಲ್ ಲೈನ್ 3 ಉದ್ಘಾಟಿಸಿದರು. ಬಿಪಿ ಪಿಎಲ್‌ಸಿ ಛೇರ್‌ಮನ್, ಕಾರ್ಲ್ ಹೆನ್ರಿಕ್ ಸ್ವಾನ್ಬರ್ಗ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್, ರಾಬರ್ಟ್ ಡಡ್ಲಿ , ಬೋರ್ಡ್ ಸದಸ್ಯರು ಹಾಗೂ ಪ್ರಮುಖ ಗ್ರಾಹಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+