ಯುಎಸ್ ನಲ್ಲಿ ರವಿಶಂಕರ್ ಗೌರವಾರ್ಥ ದಿನ
ಬೆಂಗಳೂರು,
ಏ.25: ಅಮೆರಿಕದ ಮತ್ತೆರಡು ನಗರಗಳು ಶ್ರೀ ಶ್ರೀ ರವಿಶಂಕರ್ ಅವರ ಗೌರವಾರ್ಥದಿನವನ್ನು ಆಚರಿಸಲು ಮುಂದಾಗಿವೆ ಎಂದು ಕನಕಪುರದ ಆರ್ಟ್ ಆಫ್ ಲಿವಿಂಗ್ ಆಶ್ರಮದ ಮೂಲಗಳು ತಿಳಿಸಿವೆ. ಇದರಿಂದ ಅಮೆರಿಕದಲ್ಲಿ ಒಟ್ಟು 14 ನಗರಗಳು' ಶ್ರೀ ಶ್ರೀ ರವಿಶಂಕರ್ ದಿನ'ಅಚರಣೆ ಮಾಡುವುದು ಖಾತ್ರಿಯಾಗಿದೆ. id="toptextpromo">ಡೆನ್
ವರ್ ಹಾಗೂ ಮಿಲ್ವಾಕಿ ನಗರಗಳು ಕ್ರಮವಾಗಿ ಏ.20 ಹಾಗೂ ಏ.23 ದಿನಾಂಕವನ್ನು ' ಶ್ರೀ ಶ್ರೀ ರವಿಶಂಕರ್ ದಿನ' ಎಂದು ಘೋಷಣೆ ಮಾಡಿವೆ. ಮಾನವೀಯತೆ ಹಾಗೂ ಆಧ್ಯಾತ್ಮ ಕ್ಷೇತ್ರಕ್ಕೆ ರವಿಶಂಕರ್ ಗುರೂಜಿ ಅವರು ನೀಡಿರುವ ಕೊಡುಗೆಗೆ ಇದು ನಮ್ಮ ಅಲ್ಪ ಕಾಣಿಕೆ ಎಂದು ಅಲ್ಲಿನ ಆಡಳಿತಗಾರರು ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಡೆನ್
ವರ್ ನ ಮೇಯರ್ ಜಾನ್ ಹಿಕೆನ್ ಲೂಪರ್ ಹಾಗೂ ಮಿಲ್ವಾಕಿಯ ಮೇಯರ್ ಟಾಮ್ ಬರೆಟ್ ಘೋಷಣಾ ಪತ್ರಕ್ಕೆ ಸಹಿ ಹಾಕುತ್ತಾ, ಹರ್ಷದಿಂದ ಈ ದಿನ ಆಚರಿಸಿ ಎಂದು ನಾಗರೀಕರಿಗೆ ತಿಳಿಸಿದರು. ರವಿಶಂಕರ್ ಗುರೂಜಿ ಗೌರವಾರ್ಥ ಅಮೆರಿಕದ ಇನ್ನೂ 12 ನಗರಗಳು ಇಂತಹದ್ದೇ ಆಚರಣೆಯಲ್ಲಿ ತೊಡಗಿವೆ. ಸದ್ಯ ಶ್ರೀ ಶ್ರೀ ರವಿಶಂಕರ್ ಅವರು 21 ದಿನಗಳ ಅಮೆರಿಕ ಪ್ರವಾಸದಲ್ಲಿದ್ದಾರೆ.











Click it and Unblock the Notifications