ಐಪಿಎಲ್ : ಪ್ರಫುಲ್ಲ ಪಟೇಲ್ ತಲೆದಂಡ?
ನವದೆಹಲಿ,
ಏ. 22 : ಐಪಿಎಲ್ ಆಯುಕ್ತ ಲಲಿತ್ ಮೋದಿ ಅವರ ತಲೆದಂಡಕ್ಕೆ ಕ್ಷಣಗಣನೆ ಆರಂಭಗೊಂಡ ಬೆನ್ನಲ್ಲೇ ಕೇಂದ್ರದ ವಿಮಾನಯಾನ ಸಚಿವ ಪ್ರಫುಲ್ಲ ಪಟೇಲ್ ಅವರು ಐಪಿಎಲ್ ಅವ್ಯವಹಾರದಲ್ಲಿ ಪಾಲ್ಗೊಂಡಿದ್ದಾರೆ ಎಂಬ ಮಹತ್ವದ ಅಂಶ ಬೆಳಕಿಗೆ ಬಂದಿದೆ. ಶಶಿ ತರೂರ್ ವಿಕೆಟ್ ಉಳಿದ ನಂತರ ಯುಪಿಎ ಸರಕಾರದ ಎರಡನೇಯ ವಿಕೆಟ್ ಕೂಡ ಹಿಟ್ ಔಟ್ ಆಗುವ ಸಾಧ್ಯತೆಗಳು ದಟ್ಟವಾಗಿವೆ. id="toptextpromo">ಕೇಂದ್ರ
ವಿಮಾನಯಾನ ಖಾತೆ ಸಚಿವ ಪ್ರಫುಲ್ಲ ಪಟೇಲ್ ಅವರ ಮಗಳು ಪೂರ್ಣ ಪಟೇಲ್ ಅವರು ಐಪಿಎಲ್ ಕೊಚ್ಚ ತಂಡದಲ್ಲಿ ಮಾಜಿ ಕೇಂದ್ರ ಸಚಿವ ಶಶಿ ತರೂರ್ ಅವರೊಂದಿಗೆ ಪಾಲುದಾರಿಕೆ ಹೊಂದಿದ್ದಾಳೆ ಎಂಬ ಅಂಶ ಬೆಳಕಿಗೆ ಬಂದಿದೆ. ಹೀಗಾಗಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಕೊಚ್ಚಿ ತಂಡದ ಪಾಲುದಾರಿಕೆಯಲ್ಲಿ ಪ್ರಫುಲ್ಲ ಪಟೇಲ್ ಮತ್ತು ಅವರ ಮಗಳ ಪಾತ್ರಕ್ಕೆ ಸಂಬಂಧಿಸಿದಂತೆ ಸಮಗ್ರ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ. ಅಲ್ಲದೇ ಕೇಂದ್ರ ಹಣಕಾಸು ಸಚಿವ ಪ್ರಣಬ್ ಮುಖರ್ಜಿ, ಮನಮೋಹನ್ ಸಿಂಗ್ ಈ ಬಗ್ಗೆ ಚರ್ಚೆ ನಡೆಸಿರುವುದು ಭಾರಿ ಕುತೂಹಲಕ್ಕೆ ಕಾರಣವಾಗಿದೆ. id='are-slot-1' class='oiad oi-axt oiadv'> id='top-searched-articles'>ಅಲ್ಲದೇ
ಕೇಂದ್ರ ಕೃಷಿ ಸಚಿವ ಹಾಗೂ ಎನ್ ಸಿಪಿ ನಾಯಕ ಶರದ್ ಪವಾರ್ ಅವರ ಅಳಿಯ ಸದಾನಂದ ಸುಳೆ ಅವರು ಮಲ್ಟಿಸ್ಕ್ರೀನ್ ಮೀಡಿಯಾ ಸಂಸ್ಥೆಯನ್ನು ಹೊಂದಿದ್ದು, ಆ ಮೂಲಕ ಐಪಿಎಲ್ ನಲ್ಲಿ ಶೇ. 10ರಷ್ಟು ಷೇರುಗಳನ್ನು ಹೊಂದಿದ್ದಾರೆ ಹಾಗೂ ಐಪಿಎಲ್ ಪ್ರಸಾರದ ಹಕ್ಕಿನಲ್ಲಿ ಪಾಲುದಾರಿಕೆ ಹೊಂದಿದ್ದಾರೆ ಎಂಬ ಆರೋಪದ ಮೇಲೆ ಮುಂಬೈನಲ್ಲಿರುವ ಅವರ ಕಚೇರಿ ಮೇಲೆ ದಾಳಿ ನಡೆಸಿ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸಲಾಗಿದೆ. ಸದಾನಂದ ಸುಳೆ ಅವರು ಶರದ್ ಪವಾರ್ ಅವರ ಮಗಳಾದ ಸುಪ್ರಿಯಾ ಅವರ ಗಂಡ. ಆದರೆ ಸದಾನಂದ ಅವರು ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ಪ್ರಫುಲ್ಲ ಪಟೇಲ್ ಎನ್ ಸಿಪಿ ಪಕ್ಷದ ಸಂಸದರಾಗಿದ್ದಾರೆ.











Click it and Unblock the Notifications