ಹಸಿದವರಿಗೆ ಕಾನೂನು ಯಾವ ಲೆಕ್ಕ : ದೇವೇಗೌಡ
ಹಾಸನ,
ಏ. 20 : ಜನಸಾಮಾನ್ಯರ ಹಕ್ಕುಗಳಿಗಾಗಿ ಹೋರಾಡುತ್ತಿರುವ ನಕ್ಸಲೀಯರ ಸಮಸ್ಯೆ ಹಿಂದೆ ಹಲವಾರು ಆಶಯಗಳಿವೆ ಎಂದು ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡ ಹೇಳಿದ್ದಾರೆ. id="toptextpromo">ನಕ್ಸಲೀಯರ
ಸಮಸ್ಯೆ ಕುರಿತಂತೆ ಚರ್ಚಿಸಲು ಕೂಡಲೇ ಸರ್ವ ಪಕ್ಷಗಳ ಸಭೆ ಕರೆಯುವಂತೆ ಅವರು ಸರಕಾರವನ್ನು ಒತ್ತಾಯಿಸಿದ್ದಾರೆ. ಸೋಮವಾರ ಚಿಕ್ಕಬಸವನಹಳ್ಳಿಯಲ್ಲಿರುವ ನಕ್ಸಲೀಯರಿಂದ ಹತರಾದ ಯೋಧ ಶಿವಪ್ಪನವರ ಮನೆಗೆ ಭೇಟಿ ನೀಡಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದರು. ನಕ್ಸಲೀಯರು ಎತ್ತಿರುವ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಕೇಂದ್ರ ಸರ್ಕಾರ ಮುಂದಾಗಬೇಕೆ ವಿನಃ, ಅವರನ್ನು ಗುಂಡಿಕ್ಕಿ ಕೊಲ್ಲುವ ಮೂಲಕ ಪರಿಹಾರ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'> ಗಿರಿಜನರು ಇತ್ತೀಚಿನ ದಿನಗಳಲ್ಲಿ ಸರ್ಕಾರದ ಆರ್ಥಿಕ ಸುಧಾರಣೆ ನೀತಿಯಿಂದಾಗಿ ತಮ್ಮ ಜಮೀನು, ಆಸ್ತಿ ಮತ್ತು ಬದುಕಿಗೆ ಆಧಾರವಾಗಿರುವ ಕಾಡುಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಹಸಿದ ಹೊಟ್ಟೆಗಳಿಗೆ ಕಾನೂನಿನ ಚೌಕಟ್ಟು ಅರ್ಥವಾಗುವುದಿಲ್ಲ ಎಂಬುದನ್ನು ಆಡಳಿತ ನಡೆಸುವವರು ತಿಳಿದುಕೊಳ್ಳಬೇಕಿದೆ ಎಂದರು.











Click it and Unblock the Notifications