ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಷರದ ಹುಟ್ಟು ಅರಿಯಲು ಬಾನ್ದನಿ ಕೇಳಿ

By Mahesh
|
Google Oneindia Kannada News

Akashvani AIR Bangalore program on Phonetics
ಬೆಂಗಳೂರು, ಏ.15 : ಪ್ರತಿ ಅಕ್ಷರದ ಹುಟ್ಟನ್ನು ಅರಿತಾಗ ಮಾತ್ರ ಅದರ ಉಚ್ಚಾರಣೆ ಸ್ಪಷ್ಟವಾಗಲು ಸಾಧ್ಯ. ಇದರ ಸ್ಥೂಲ ಪರಿಚಯ ಮೂಡಿಸಲು ಆಕಾಶವಾಣಿಯ ಶೈಕ್ಷಣಿಕ ಕಾರ್ಯಕ್ರಮ ಪ್ರಸಾರ ಮಾಡುತ್ತಿದೆ.

'ಬಾನ್ದನಿ' ಯಲ್ಲಿ Phonetics (ಧ್ವನಿಶಾಸ್ತ್ರ, ಸ್ವರಶಾಸ್ತ್ರ) ಗೆ ಸಂಬಂಧಿಸಿದಂತೆ ಈ ತಿಂಗಳ 20 ರಿಂದ ಪ್ರತಿ ಮಂಗಳವಾಗಿ ಮಧ್ಯಾಹ್ನ 2.35 ರಿಂದ 3.05 ಗಂಟೆಯವರಗೆ ವಿಶೇಷ ಸರಣಿ " Phonetic Englished on AIR" ಇಂಗ್ಲೀಷ್ ಸ್ವರಶಾಸ್ತ್ರ ಕಾರ್ಯಕ್ರಮ ಪ್ರಸಾರವಾಗಲಿದೆ.

ರಾಜ್ಯ ಪಠ್ಯ ಪುಸ್ತಕ ಸಮಿತಿ ಅಧ್ಯಕ್ಷರು ಹಾಗೂ ವಿದೇಶದ ವಿವಿಗಳಲ್ಲಿ ಅತಿಥಿ ಉಪನ್ಯಾಸಕ (Guest Lecturer) ರಾಗಿದ್ದ ಪ್ರೊ. ಜಿ.ಎಸ್. ಮುಡಂಬಡಿತ್ತಾಯ ಹಾಗೂ ಯು.ಕೆ.ಯಲ್ಲಿ ಫೋನೆಟಿಕ್ (Phonetic ) ತರಬೇತಿ ಪಡೆದಿರುವ ಡಾ. ಗಾಯತ್ರಿದೇವಿ ಈ ಕಾರ್ಯಕ್ರಮದಲ್ಲಿ ಇಂಗ್ಲೀಷ್ ಮಾತನಾಡುವ, ಕಲ್ಪನೆ, ಧ್ವನಿ, ಉಗಮ, ಉಚ್ಚರಣೆ ಬಗ್ಗೆ ಮಾಹಿತಿ ನೀಡಲಿದ್ದಾರೆ.

ಎಸ್.ಆರ್. ಭಟ್ ಅವರ ನಿರ್ದೇಶನ ಹಾಗೂ ನಿರ್ಮಾಣದಲ್ಲಿ ಪ್ರಸಾರವಾಗುವ ಈ ಸರಣಿ ಏ.20 ಮಂಗಳವಾರ ಮಧ್ಯಾಹ್ನ 2.35 ರಿಂದ 3.05 ರವರೆಗೆ ರಾಜ್ಯದ 19 ಬಾನುಲಿ ಕೇಂದ್ರದಿಂದ ಏಕಕಾಲದಲ್ಲಿ ಪ್ರಸಾರವಾಗಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X