ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವದೇಶಿ ತಂತ್ರಜ್ಞಾನದ ಉಪಗ್ರಹಕ್ಕೆ ಜೈಹೋ

By Mahesh
|
Google Oneindia Kannada News

K Radhakrishnan, ISRO
ಶ್ರೀಹರಿಕೋಟ, ಏ.15: ಮೊಟ್ಟಮೊದಲ ಬಾರಿಗೆ ಭಾರತದಲ್ಲೇ ಸಂಪೂರ್ಣವಾಗಿ ನಿರ್ಮಿಸಲಾಗಿರುವ ಕ್ರಯೋಜೆನಿಕ್ ಎಂಜಿನ್ ಯುಳ್ಳ ಭೂಸ್ಥಿರ ಉಪಗ್ರಹ(ಜಿಎಸ್ಎಲ್ ವಿ-ಡಿ3) ಉಡಾವಣೆಗೆ ಸಕಲ ಸಿದ್ಧತೆ ಪೂರ್ಣಗೊಂಡಿದ್ದು, ಶ್ರೀಹರಿಕೋಟದಿಂದ ಏಪ್ರಿಲ್ 15ರಂದು ಉಡಾವಣೆಯಾಗಲಿದೆ. ದೂರಸಂಪರ್ಕ ಕ್ಷೇತಕ್ಕೆ ಈ ಉಪಗ್ರಹದಿಂದ ಸಾಕಷ್ಟು ಲಾಭವಾಗಲಿದೆ.

ಏ.15ರಂದು ಸಂಜೆ 4.27ಕ್ಕೆ ಉಪಗ್ರಹವನ್ನು ಕಕ್ಷೆಗೆ ಹಾರಿಸಲು ನಿರ್ಧರಿಸಲಾಗಿದೆ. 150 ಕೋಟಿ ರು ವೆಚ್ಚದ ಅತ್ಯಾಧುನಿಕ ಜಿಸ್ಯಾಟ್ 4 ಅನ್ನು ಹೊತ್ತ 50ಎತ್ತರದ ಜಿಎಸ್ ಎಲ್ ವಿ ಡಿ3 ಸಂಜೆ ಇಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಗಗನಕ್ಕೆ ಚಿಮ್ಮಲಿದೆ. ಎಂಟು ಟನ್ ಗಳಿಗೂ ಹೆಚ್ಚು ತೂಕವಿರುವ ಸಂವಹನ ಉಪಗ್ರಹಗಳನ್ನು ಭೂಸ್ಥಿರ ಕಕ್ಷೆಗೆ ಚಿಮ್ಮಿಸಲು ಕ್ರಯೋಜನಿಕ್ ತಂತಜ್ಞಾನ ಅತ್ಯಗತ್ಯ. ಭೂಮಿಯಿಂದ 36,000 ಕಿ.ಮೀ ಮೇಲೆ ಭೂ ಸ್ಥಿರ ಕಕ್ಷೆಯಿದೆ.

ಕ್ರಯೋಜನಿಕ್ ಇಂಜಿನ್ ಕಥೆ:
ಭಾರತವು ಕ್ರಯೋಜನಿಕ್ ಇಂಜಿನ್ ತಂತ್ರಜ್ಞಾನವನ್ನು ರಷ್ಯಾದಿಂದ ಪಡೆದುಕೊಳ್ಳಲು ಬಯಸಿತ್ತು. ಆದರೆ, ರಷ್ಯಾ-ಅಮೆರಿಕಾ ಒಪ್ಪಂದದಲ್ಲಿ ಇದಕ್ಕೆ ಅವಕಾಶವಿಲ್ಲದೇ ಇದ್ದುದರಿಂದ ಭಾರತ ತೀವ್ರ ನಿರಾಸೆಗೊಳಗಾಗಿತ್ತು. ಧೃತಿಗೆಡದ ಭಾರತ ದ ವಿಜ್ಞಾನಿಗಳು 1999ರಿಂದ ಸ್ವಂತ ಕ್ರಯೋಜೆನಿಕ್ ತಂತ್ರಜ್ಞಾನ ಸಿದ್ಧಪಡಿಸಲು ಪಣತೊಟ್ಟರು. ಪ್ರಸಕ್ತ ಅಮೆರಿಕಾ, ರಷ್ಯಾ, ಯೂರೋಪ್, ಜಪಾನ್ ಮತ್ತು ಚೀನಾಗಳು ಮಾತ್ರ ಈ ತಂತ್ರಜ್ಞಾನ ಹೊಂದಿವೆ.

ಅತ್ಯಂತ ಶೀತಲಮಯವಾದ ದ್ರವೀಕೃತ ಜಡ ಹೀಲಿಯಂ ಸಾರಜನಕ , ಇಂಗಾಲದ ಡೈ ಆಕ್ಸೈಡ್ ಅನಿಲಗಳನ್ನು ಕ್ರಯೋಜನಿಕ್ ಇಂಧನ ಹೊಂದಿರುತ್ತದೆ. ಈ ಅನಿಲಗಳ ಉಷ್ಣಾಂಶ -270 ಡಿಗ್ರಿ ಯಷ್ಟಿರುತ್ತದೆ ( 1ಕೆಲ್ವಿನ್= -273.15 ಡಿಗ್ರಿ ಸೆಲ್ಸಿಯಸ್) ಈ ಇಂಧನ ಬಳಸಿದ ತಂತ್ರಜ್ಞಾನವನ್ನು ಈಗ ಭಾರತ ಸ್ವಂತವಾಗಿ ನಿರ್ಮಿಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X