ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂತ್ರಾಲಯದಲ್ಲಿ ತಂಬಾಕು, ಮದ್ಯ ನಿಷಿದ್ದ

By Mrutyunjaya Kalmat
|
Google Oneindia Kannada News

Raghavendra Swamiji
ರಾಯಚೂರು, ಏ. 15 : ರಾಯರ ಮೂಲ ಬೃಂದಾವನದ ದರ್ಶನ ಪಡೆಯಲು ಬರುತ್ತಿದ್ದ ಭಕ್ತರ ದಶಕದಷ್ಟು ಹಳೆಯ ಬಯಕೆ ಕೊನೆಗೂ ಕೈಗೂಡಿದೆ. ಆಂಧ್ರಪ್ರದೇಶದ ಧಾರ್ಮಿಕ ಮತ್ತು ದತ್ತಿ ಇಲಾಖೆ ಮಂತ್ರಾಲಯದಲ್ಲಿ ಬೀಡಿ, ಸಿಗರೇಟು, ಗುಟ್ಕಾ, ಮದ್ಯ ಸೇವನೆಯನ್ನು ನಿಷೇಧಿಸಿ ಆದೇಶ ಹೊರಡಿಸಿದೆ.

ಹೊಸದಾಗಿ ಜಾರಿಗೊಳಿಸಿರುವ ನಿಷೇಧಾಜ್ಞೆ ಬಗ್ಗೆ ತಿಳುವಳಿಕೆ ಮೂಡಿಸಲು ಸರಕಾರ ವ್ಯಾಪಕ ಪ್ರಚಾರ ನೀಡಿದೆ. ಪೋಲಿಸ್ ಇಲಾಖೆ ಮತ್ತು ಮಠದ ಸಿಬ್ಬಂದಿ ಅವಿರತವಾಗಿ ತಂಬಾಕು ಸೇವನೆ ಮತ್ತು ಮಧ್ಯಪಾನ ಮಾಡಬಾರದೆಂದು ಡಂಗುರ ಸಾರಿಸುತ್ತಿದೆ. ಇದರ ಫಲವಾಗಿ ಶ್ರೀಮಠದ ಆಸುಪಾಸು, ಮಂತ್ರಾಲಯದ ಮುಖ್ಯರಸ್ತೆಗಳಲ್ಲಿ ನಡೆಯುತ್ತಿದ್ದ ಬೀಡಿ, ಸಿಗರೇಟು, ಗುಟ್ಕಾ ಸೇವನೆ ತಹಬಂದಿಗೆ ಬಂದಿದೆ.

ನಿಷೇಧದ ದುರ್ಲಾಭ ಪಡೆಯಲು ಅವಕಾಶ ನೀಡುವುದಿಲ್ಲ. ನಿರಂತರ ಪ್ರಚಾರ ದಟ್ಟ ಜನಾಭಿಪ್ರಾಯ ರೂಪಿಸಲಿದ್ದು, ಪುಣ್ಯಕ್ಷೇತ್ರದಲ್ಲಿ ವಾಸವಿದ್ದಷ್ಟು ಅವಧಿ ಕೆಟ್ಟ ವ್ಯಸನ ಬಿಟ್ಟರೆ ಜೀವನದಲ್ಲಿ ಮಹತ್ತರ ಬದಲಾವಣೆ ತರಲಿದೆ. ರಾಯರ ಅನುಗ್ರಹ ನಿಮಗೆ ಸಿಗಲಿದೆ. ಆರೋಗ್ಯಪೂರ್ಣ ಚೈತನ್ಯಕ್ಕೂ ಮತ್ತು ಪರಿಸರ ಸ್ವಚ್ಚತೆಗೂ ಅನುಕೂಲವಾಗಲಿದೆ ಎಂದು ಶ್ರೀಮಠದ ಸುಯಮೀಂದ್ರಾಚಾರ್ಯ ಹೇಳಿಕೆ ನೀಡಿದ್ದಾರೆ.

ಆದರೆ, ಇಲ್ಲಿನ ವ್ಯಾಪಾರಸ್ಥರು ಹೊಸ ಕಾನೂನಿನ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವಹಿವಾಟಿನಿಂದ ಕೈತುಂಬುತ್ತಿದ್ದ ಸಂಪಾದನೆ ಕೈತಪ್ಪಿ ಹೋಗುತ್ತಿದೆ ಎಂದು ಪರಿತಪಿಸುತ್ತಿದ್ದಾರೆ. ಶ್ರೀಮಠದ ಕೆಲವು ಸಿಬ್ಬಂದಿ ಗುಟ್ಕಾ, ಸಿಗರೇಟು ಚಟ ಮೊದಲಿಗೆ ಬಿಡಲಿ ನಂತರ ಇದು ಬೇರೆಯವರಿಗೆ ಅನುಕರಣೆಯಾಗಲಿದೆ ಎಂದು ಸ್ಥಳೀಯ ವ್ಯಾಪಾರಸ್ಥರ ವಾದವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X