ಹೊಸಳ್ಳಿ ವಸತಿ ಶಾಲೆಯಿಂದ ಬಾಲಕ ನಾಪತ್ತೆ!

ಸವಣೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 7 ನೇ ವರ್ಗದ ವ್ಯಾಸಂಗ ಮಾಡುತ್ತಿದ್ದ ಗಿರೀಶ ಪ್ರವಾಸಕ್ಕೆಂದು ಹಣ ಪಡೆಯಲು ಹೊಸಳ್ಳಿ ಗ್ರಾಮಕ್ಕೆ ಬಂದಿದ್ದ. ಬಳಿಕ 1200 ರೂ ಹಣದೊಂದಿಗೆ ತೆರಳಿದ ಬಾಲಕ ಗಿರೀಶ ಕಾಣೆಯಾಗಿದ್ದಾನೆ. ಈ ಕುರಿತಂತೆ ಸವಣೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಲಕನ ತಂದೆ ಪರಮೇಶಪ್ಪ ಗಿರಿಯಪ್ಪನವರ ನೀಡಿರುವ ದೂರಿನನ್ವಯ ಪಿ.ಐ ಕೆ. ಚಂದ್ರಪ್ಪ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚಹರೆ : ಕಾಣೆಯಾಗಿರುವ ಬಾಲಕ ಗಿರೀಶ ೧೩ ವರ್ಷದವನಾಗಿದ್ದು, 4.5 ಅಡಿ ಎತ್ತವಾಗಿದ್ದಾನೆ. ತೆಳ್ಳಗಿನ ಮೈಕಟ್ಟು, ಗೋಧಿ ಕೆಂಪು ಮೈಬಣ್ಣ, ಕೋಲು ಮುಖ, ನೀಟಾದ ಮೂಗು, ಕಪ್ಪು ಕೂದಲನ್ನು ಹೊಂದಿದ್ದು, ಎಡಗೈಯಿಂದ ಬರೆಯುವ ಅಭ್ಯಾಸ ಹೊಂದಿದ್ದಾನೆ.ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ಚಕ್ಸ್ ಕೆಂಪು ಹಸಿರು ಬಣ್ಣದ ಅಂಗಿ, ಕೊರಳಲ್ಲಿ ರುದ್ರಾಕ್ಷಿ ದಾರ ಧರಿಸಿದ್ದು ಕನ್ನಡ ಭಾಷೆ ಮಾತನಾಡುತ್ತಾನೆ.
ಈ ಹುಡುಗನ ಬಗ್ಗೆ ಮಾಹಿತಿ ಲಭ್ಯವಾದಲ್ಲಿ ಶಿಗ್ಗಾಂವ ಡಿ.ವಾಯ್.ಎಸ್.ಪಿ (08378)255333 ಅಥವಾ ಸವಣೂರ ಠಾಣೆ (08378)241633 ಸಂಪರ್ಕಿಸಲು ಕೋರಲಾಗಿದೆ.












Click it and Unblock the Notifications