ವಿಮೆ ಕಂಪೆನಿಗಳ ಬೆನ್ನಿಗೆ ನಿಂತ ಐಆರ್ ಡಿಎ

IRDA tells insurers to ignore SEBI ban on ULIPs
ನವದೆಹಲಿ, ಏ.12: ವಿಮೆ ನಿಯಂತ್ರಣ ಪ್ರಾಧಿಕಾರ ಐಆರ್‌ಡಿಎ ಹಾಗೂ ಭಾರತೀಯ ಷೇರು ವಿನಿಮಯ ಮಂಡಳಿ (ಸೆಬಿ) ನಡುವೆ ಈಗ ಸಮರ ತಾರಕಕ್ಕೇರಿದೆ. ಯೂನಿಟ್ ಆಧರಿತ ವಿಮೆಯನ್ನು (ಯುಲಿಪ್) ನಿಷೇಧಿಸಬೇಕೆಂದು ಸೆಬಿ ನೀಡಿದ್ದ ಆದೇಶವನ್ನು ತಿರಸ್ಕರಿಸಿ ಎಂದಿನ ವಹಿವಾಟು ಮುಂದುವರಿಸುವಂತೆ ಐಆರ್‌ಡಿಎ 14 ವಿಮೆ ಸಂಸ್ಥೆಗಳಿಗೆ ಸೂಚಿಸಿದೆ.

ಎಸ್‌ಬಿಐ, ಐಸಿಐಸಿಐ, ಎಚ್‌ಡಿಎಫ್‌ಸಿ ಮತ್ತು ರಿಲಯನ್ಸ್ ಅನಿಲ್ ಅಂಬಾನಿ ಗ್ರೂಪ್, ಟಾಟಾ ಗುಂಪಿಗೆ ಸೇರಿದ ಜೀವವಿಮಾ ಕಂಪೆನಿಗಳೂ ಸೇರಿದಂತೆ ಒಟ್ಟು 14 ವಿಮಾ ಕಂಪೆನಿಗಳ ಮೇಲೆ ಸೆಬಿ ನಿರ್ಬಂಧ ಹೇರಿತ್ತು.ಆದರೆ, ಯೂನಿಟ್ ಲಿಂಕ್ಡ್ ಯೋಜನೆಗಳ ಮೂಲಕ ಜೀವವಿಮೆ ಪಾಲಿಸಿಗೆ ಹಣ ಸಂಗ್ರಹಿಸುವುದನ್ನು ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎ) ಸಮರ್ಥಿಸಿದ್ದು ಈ ಕಂಪೆನಿಗಳು ಕಾನೂನು ನೆರವು ಪಡೆದುಕೊಳ್ಳುವಂತೆ ಸಲಹೆ ನೀಡಿತ್ತು.

ನಿರ್ಬಂಧಕ್ಕೊಳಗಾಗಿರುವ ಕಂಪೆನಿಗಳು ಸೆಬಿ ಮತ್ತು ಐಆರ್‌ಡಿಎ ಜೊತೆ ಈ ವಿಷಯವನ್ನು ಚರ್ಚಿಸುವುದಾಗಿ ಹೇಳಿವೆ. ಆದರೆ ಈ ವಿಷಯದ ಕುರಿತು ಪ್ರತಿಕ್ರಿಯಿಸಿರುವ ಐಅರ್‌ಡಿಎ ಅಧ್ಯಕ್ಷ ಜೆ. ಹರಿನಾರಾಯಣ್ ಸೆಬಿ ನಿರ್ಣಯ ಸಮರ್ಥನೀಯ ಎನಿಸುವುದಿಲ್ಲ ಎಂದಿದ್ದಾರೆ. ಯೂಲಿಪ್ ಯೋಜನೆಗಳೂ ಕೂಡ ವಿಮಾ ಉತ್ಪನ್ನಗಳೇ ಎಂಬ ವಿಮಾ ಕಂಪೆನಿಗಳ ವಾದವನ್ನು ತಳ್ಳಿ ಹಾಕಿರುವ ಸೆಬಿ ಈ ಆದೇಶ ಜಾರಿಗೊಳಿಸಿತ್ತು.

ಅಲ್ಲದೆ, ಎಸ್‌ಬಿಐ ಜೀವ ವಿಮಾ ಕಂಪೆನಿ, ಐಸಿಐಸಿಐ ಪ್ರುಡೆನ್ಷಿ ಯಲ್ ಲೈಫ್, ರಿಲಯನ್ಸ್ ಲೈಫ್, ಮೆಟ್ ಲೈಫ್ ಇಂಡಿಯಾ, ಅವಿವಾ ಲೈಫ್, ಟಾಟಾ ಎಐಜಿ ಮುಂತಾದ ಕಂಪೆನಿಗಳು ಜೀವ ವಿಮೆ ಗಾಗಿ ಹಣ ಸಂಗ್ರಹಿಸುವುದನ್ನು ನಿಷೇಧಿಸ ಲಾಗಿದೆ. ಒಂದು ವೇಳೆ ಈ ಕಂಪೆನಿಗಳು ಹಣ ಸಂಗ್ರಹಿಸಲು ಬಯಸುವುದೇ ಆದಲ್ಲಿ, ಸೆಬಿಯಿಂದ ಅಗತ್ಯ ನೋಂದಣಿ ಪ್ರಮಾಣ ಪತ್ರ ಪಡೆಯಬೇಕು ಎಂದು ಸೂಚಿಸಲಾಗಿತ್ತು. ಆದರೆ ಈ ಪಟ್ಟಿಯಲ್ಲಿ ಸರಕಾರಿ ಸ್ವಾಮ್ಯದ ಎಲ್‌ಐಸಿ ಹೆಸರನ್ನು ಉಲ್ಲೇಖಿಸಿರಲಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+