ಎಂಬತ್ತೆರಡರ ಸ್ವಾತಂತ್ರ್ಯ ಹೋರಾಟಗಾರ ದಾಂಪತ್ಯಕ್ಕೆ
ಮುಜಾಫರ್
ನಗರ, ಏ.10: ಜೀವನದ ಅಂತಿಮ ದಿನಗಳನ್ನು ಎಣಿಸುತ್ತಿರುವ ಸ್ವಾತಂತ್ರ್ಯ ಹೋರಾಟಗಾರರೊಬ್ಬರು 82ರ ಇಳಿವಯಸ್ಸಿನಲ್ಲಿ ದಾಂಪತ್ಯ ಜೀವನಕ್ಕೆ ಅಡಿಯಿಡಲು ನಿರ್ಧರಿಸಿದ್ದಾರೆ. ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದ ಕೆಲಸದಾಕೆಯನ್ನು ಈ ವಯೋವೃದ್ಧ ವರಿಸುವುದಾಗಿ ತಿಳಿಸಿದ್ದಾರೆ. id="toptextpromo">ಓಂಪ್ರಕಾಶ್
ಹಾಗೂ 50 ವರ್ಷದ ಗಾಸಿಯಾ ಬೇಗಂ ಮುದುವೆಯಾಗಲು ನಿರ್ಧರಿಸಿದ್ದು ಜೀವನದ ಉಳಿದ ಅವಧಿಯನ್ನು ಜತೆಯಾಗಿ ಬಾಳಲು ತೀರ್ಮಾನಿಸಿದ್ದಾರೆ. ಮದುವೆ ನೋಂದಣಿಗಾಗಿ ಕೆಲವು ದಿನಗಳ ಹಿಂದೆ ಇವರು ಅರ್ಜಿ ಸಲ್ಲಿಸಿದ್ದಾಗಿ ಉಪವಿಭಾಗೀಯ ಮೆಜಿಸ್ಟ್ರೇಟ್ ಘನಶ್ಯಾಂ ಸಿಂಗ್ ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಸೀತಾಪುರ
ಮೂಲದ ಗಾಸಿಯಾ ಅವರು ಘಾರಿಪುಕ್ತ ಗ್ರಾಮದ ಓಂಪ್ರಕಾಶ್ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದರು. ಒಬ್ಬರನ್ನೊಬ್ಬ್ಬರು ಇಷ್ಟಪಟ್ಟಿರುವ ಅವರು ಮದುವೆಯಾಗಲು ಬಯಸಿದ್ದಾರೆ. ಆದರೆ ಓಂಪ್ರಕಾಶ್ ಮಕ್ಕಳಿಗೆ ಈ ಮದುವೆ ಇಷ್ಟವಿಲ್ಲ. ತಮ್ಮ ಇಚ್ಛೆಗೆ ವಿರುದ್ಧವಾಗಿ ಮದುವೆ ನೋಂದಣಿಗೆ ಅರ್ಜಿ ಸಲ್ಲಿಸಿದ್ದಾಗಿ ಅವರು ದೂರಿದ್ದಾರೆ. ಓಂಪ್ರಕಾಶ್ ಮಕ್ಕಳು ಪೊಲೀಸ್ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.











Click it and Unblock the Notifications