ಕರಾವಳಿಯ ಭೀಕರ ಮಳೆಗೆ 6 ಜನ ಬಲಿ
ಮಂಗಳೂರು,ಏ.9
: ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆ ಸೇರಿದಂತೆ ಕರಾವಳಿ ಭಾಗದಲ್ಲಿ ಗುರುವಾರ ಸಂಜೆ (ಏ. 8) ಸುರಿದ ಧಾರಾಕಾರ ಮಳೆಗೆ ಆರು ಜನ ಬಲಿಯಾಗಿದ್ದು ಇತರ 11 ಮಂದಿ ಗಾಯಗೊಂಡಿದ್ದಾರೆ. id="toptextpromo">ಈ
ಭಾಗದಲ್ಲಿ ಗಾಳಿ, ಸಿಡಿಲಿನ ಆರ್ಭಟ ಜೋರಾಗಿದ್ದು ಮೂಡಬಿದರೆ ತಾಲೂಕು ವ್ಯಾಪ್ತಿಯ ಕಡಂದಲೆ ಎನ್ನುವಲ್ಲಿ ಸಿಡಿಲು ಬಡಿದು ಇಬ್ಬರು ಕಾರ್ಮಿಕರು ಮೃತ ಪಟ್ಟಿದ್ದಾರೆ. ಕುಂದಾಪುರ ತಾಲೂಕು ವ್ಯಾಪ್ತಿಯ ಜನ್ನಾಡಿ ಎನ್ನುವಲ್ಲಿ ಭಾರಿ ಬಿರುಗಾಳಿಗೆ ದೈತ್ಯಾಕಾರ ಮರವೊಂದು ಚಲಿಸುತ್ತಿದ್ದ ಕಾರಿನ ಬಿದ್ದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಕುಂದಾಪುರ
ತಾಲೂಕಿನ ದೇವಳಕುಂದ್ ಪ್ರದೇಶದಲ್ಲಿ ಎರಡು ವರ್ಷದ ಬಾಲಕಿ ಮತ್ತು ಕಾರ್ಕಳ ತಾಲೂಕು ಅಜೆಕಾರಿನಲ್ಲಿ ಒಬ್ಬ ಬಾಲಕ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಕೊಡಗು ಜಿಲ್ಲೆಯ ಕೆಲವು ತಾಲೂಕುಗಳಲ್ಲಿ (ವಿರಾಜಪೇಟೆ, ಭಾಗಮಂಡಲ)ಭಾರಿ ಮಳೆಯಾಗಿದೆ.











Click it and Unblock the Notifications