ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ನ ಮಗ ಮೇಯರ್ ಹುದ್ದೆ ರೇಸ್ ನಲ್ಲಿಲ್ಲ

By Mahesh
|
Google Oneindia Kannada News

Katta Subramanya Naidu
ಬೆಂಗಳೂರು, ಏ.7: ಬಿಬಿಎಂಪಿ ಚುನಾವಣೆ ನಂತರ ಸೂಕ್ತ ಮೇಯರ್ ಆಯ್ಕೆ ಪ್ರಕ್ರಿಯೆ ಬಿರುಸುಗೊಂಡಿದೆ. ಮೇಯರ್ ಹುದ್ದೆ ಪಟ್ಟಿಯಲ್ಲಿ ವಸಂತನಗರ ವಾರ್ಡ್ ನ ಕಾರ್ಪೊರೇಟರ್ ಕಟ್ಟಾ ಜಗದೀಶ್ ನಾಯ್ಡು ಅವರ ಹೆಸರು ಮುಂಚೂಣಿಯಲ್ಲಿದೆ. ಆದರೆ, ನನ್ನ ಮಗನಿಗೆ ಮೇಯರ್ ಗದ್ದುಗೆ ಏರುವ ಆಸೆಯಿಲ್ಲ. ಎಂದು ವಸತಿ ಹಾಗೂ ಐಟಿ, ಬಿಟಿ ಖಾತೆ ಸಚಿವ ಕಟ್ಟಾ ಸುಬ್ರಮಣ್ಯನಾಯ್ಡು ಮಂಗಳವಾರ ಸ್ಪಷ್ಟಪಡಿಸಿದರು.

ಕಟ್ಟಾ ಜಗದೀಶ್ ಅವರು ಮೇಯರ್ ಆಗುವ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಕಟ್ಟಾ ಸುಬ್ರಮಣ್ಯ ನಾಯ್ಡು ಅವರು, ತಮ್ಮ ಮಗ ಮೇಯರ್ ಆಕಾಂಕ್ಷಿಯಲ್ಲ ಎಂದರು.ಆದರೆ, ಯಾವ ಕಾರಣಕ್ಕೆ ಮೇಯರ್ ಹುದ್ದೆ ನಿರಾಕರಿಸುತ್ತಿರುವುದು ಎಂಬುದನ್ನು ಕಟ್ಟಾ ಸ್ಪಷ್ಟಪಡಿಸಲಿಲ್ಲ.

ಈ ಮಧ್ಯೆ ಬಿಬಿಎಂಪಿಯಲ್ಲಿ ಹಿರಿಯ ಸದಸ್ಯರಿಗೆ ಮಣೆ ಹಾಕಲಾಗುವುದು ಎಂದು ಸಾರಿಗೆ ಸಚಿವ ಅಶೋಕ್ ಹೇಳಿಕೆಗೆ ಸಹಮತ ನೀಡಿದ ಸಿಎಂ, ಬಗ್ಗೆ ಪಕ್ಷದ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಇನ್ನೊಂದು ವಾರದಲ್ಲಿ ಮೇಯರ್ ಹಾಗೂ ಉಪ ಮೇಯರ್ ಸ್ಥಾನದ ಅಭ್ಯರ್ಥಿಗಳನ್ನು ಘೋಷಿಸಲಾಗುವುದು ಎಂದರು.

ಬಿಬಿಎಂಪಿ ಮೇಯರ್‌ಗಿರಿಗಾಗಿ ಸಾಕಷ್ಟು ಕಸರತ್ತು ನಡೆದಿದೆ. ಸತತ ಮೂರು ಬಾರಿ ಗೆಲುವು ಸಾಧಿಸಿದ್ದ ನಟರಾಜ್, ನಾಲ್ಕು ಬಾರಿ ಜಯಭೇರಿ ಗಳಿಸಿದ್ದ ಮೂರ್ತಿ ಸೇರಿದಂತೆ ಹಲವರ ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತಿದೆ. ಈ ಮಧ್ಯೆ ಕಟ್ಟಾ ಜಗದೀಶ್ ಅವರನ್ನು ಮೇಯರ್ ಸ್ಥಾನದಲ್ಲಿ ಕೂರಿಸಲು ತೆರೆಮರೆಯಲ್ಲಿ ಕಸರತ್ತು ನಡೆಯುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X