ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ಹ್ಯಾಕರ್ ಗಳ ಕೈಲಿ ಭಾರತದ ರಹಸ್ಯ?

By Mahesh
|
Google Oneindia Kannada News

Chinese hackers crack India’s top defence secrets
ನವದೆಹಲಿ, ಏ.7: ಚೀನಾದ ಸೈಬರ್ ಕಳ್ಳರು ಭಾರತದ ರಕ್ಷಣಾ ವ್ಯವಸ್ಥೆ ಸೇರಿದಂತೆ ಅತ್ಯಂತ ಗೋಪ್ಯ ಹಾಗೂ ನಿಗೂಢ ದಾಖಲೆಗಳನ್ನು ಹ್ಯಾಕ್ ಮಾಡಿರುವುದು ಬಯಲಾಗಿದೆ. ಇತ್ತೀಚೆಗಷ್ಟೇ ಸೇನೆಗೆ ಪರಿಚಯಿಸಲಾಗಿದ್ದ ಫಿರಂಗಿ ಪಡೆ 'ಶಕ್ತಿ'ಯ ವಿವರಗಳು ಮತ್ತು ಭಾರತೀಯ ಸೇನೆಯ ನಿಯಂತ್ರಣಾ ವ್ಯವಸ್ಥೆ ಹಾಗೂ 'ಉಕ್ಕಿನ ಶಿಖರ' ಎಂದು ಕರೆಯಲಾಗುವ ದೇಶದ ನೂತನ ಚರ ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳ ಮಾಹಿತಿಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ಹೇಳಲಾಗಿದೆ.

'ಮೋಡದೊಳಗಿನ ನೆರಳು' (Shadow in the Clouds) ಎಂದು ಹೆಸರಿಸಲಾಗಿರುವ ಈ ವರದಿಯನ್ನು ಟೊರಂಟೋ ವಿಶ್ವವಿದ್ಯಾಲಯದ ಕೆನಡಾ ಮತ್ತು ಅಮೆರಿಕಾ ಅಧ್ಯಯನ ತಂಡ ಸಿದ್ಧಪಡಿಸಿದ್ದು, ಈ ರಹಸ್ಯ ಕಾರ್ಯಾಚರಣೆಯಲ್ಲಿ ಭಾರತೀಯ ಸರಕಾರದ ಉನ್ನತ ರಹಸ್ಯ ಮಾಹಿತಿಗಳನ್ನು ಚೀನಾ ಕಳ್ಳತನ ಮಾಡಿರುವುದು ಪತ್ತೆಯಾಗಿದೆ ಎಂದು ಹೇಳಲಾಗಿದೆ.

ವಿಡಿಯೋ: ಸೈಬರ್ ಬೇಹುಗಾರಿಕೆ ನಡೆಸಿಲ್ಲ:ಚೀನಾ

ಭಾರತ ಸರಕಾರಕ್ಕೆ ಸಂಬಂಧಪಟ್ಟ ಭಾರತ ಮತ್ತು ವಿಶ್ವದೆಲ್ಲೆಡೆಯಿರುವ ಕಚೇರಿಗಳಿಂದಲೂ ಮಾಹಿತಿ ಹ್ಯಾಕ್ ಮಾಡಲಾಗಿದ್ದು, ಭಾರತವು ತೀವ್ರ ನಿರ್ಲಕ್ಷ್ಯ ವಹಿಸಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ. ಬೆಲ್ಜಿಯಂ, ಸೆರ್ಬಿಯಾ, ಜರ್ಮನಿ, ಇಟಲಿ, ಕುವೈಟ್, ಅಮೆರಿಕಾ, ಜಿಂಬಾಬ್ವೆ, ಸಿಪ್ರಸ್ ಮತ್ತು ಇಂಗ್ಲೆಂಡ್‌ಗಳಲ್ಲಿರುವ ಭಾರತೀಯ ದೂತವಾಸ ಕಚೇರಿಗಳ ಕಂಪ್ಯೂಟರುಗಳಿಂದ ಮಾಹಿತಿಗಳನ್ನು ಸೈಬರ್ ಮೂಲಕ ಕಳ್ಳತನ ಮಾಡಲಾಗಿದೆ.

ದಲೈ ಲಾಮಾ ಅವರ ಕಚೇರಿಗಳು ಮತ್ತು ಭಾರತದ ರಾಷ್ಟ್ರೀಯ ಭದ್ರತಾ ಮಂಡಳಿಯ ದಾಖಲೆಗಳನ್ನು ಕೂಡ ಚೀನಾ ಹ್ಯಾಕ್ ಮಾಡಿದೆ ಎಂದು ಈ ವರದಿ ಹೇಳಿದೆ. ಸರ್ಕಾರ, ಉದ್ಯಮ, ಶೈಕ್ಷಣಿಕ ಮತ್ತು ಇತರ ಕಂಪ್ಯೂಟರ್ ವ್ಯವಸ್ಥೆಗಳಿಗೆ ಕನ್ನ ಹಾಕಲಾಗಿದ್ದು, ಚೀನಾದಲ್ಲಿನ ಸರ್ವರ್‌ಗಳಿಂದ ವ್ಯವಸ್ಥಿತವಾಗಿ ಸೈಬರ್ ಬೇಹುಗಾರಿಕೆ ನಡೆಸಲಾಗಿದೆ ಎಂದು ಸುಮಾರು ಎಂಟು ತಿಂಗಳುಗಳ ಕಾಲ ತನಿಖೆಗಳನ್ನು ನಡೆಸಿ ಸಿದ್ಧಪಡಿಸಿರುವ ವರದಿ ಹೇಳಿದೆ. ಇದೇ ವೇಳೆ, ಭಾರತದ ರಕ್ಷಣಾ ವ್ಯವಸ್ಥೆಯ ಬಗ್ಗೆ ತಾನು ಯಾವುದೇ ರಹಸ್ಯ ಕಾರ್ಯಾಚರಣೆ ನಡೆಸಿಲ್ಲ ಎಂದು ಚೀನಾ ಸ್ಪಷ್ಟಪಡಿಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X