ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಕ್ಸಲರು ದೇಶದ ಶತ್ರುಗಳು: ಚಿದಂಬರಂ

By Staff
|
Google Oneindia Kannada News

P Chidambaram
ಚೆನ್ನೈ, ಏ.6: ಮೇರೆಮೀರುತ್ತಿರುವ ನಕ್ಸಲ್ ಚಟುವಟಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಕೇಂದ್ರ ಗೃಹ ಸಚಿವ ಪಿ. ಚಿದಂಬರಂ, ಮಾವೋವಾದಿಗಳು ದೇಶದ ಮೊದಲ ಶತ್ರು ಎಂದು ಗುಡುಗಿದ್ದಾರೆ. ಮುಂದಿನ ಎರಡು ಅಥವಾ ಮೂರು ವರ್ಷಗಳಲ್ಲಿ ನಕ್ಸಲ್ ಚಟುವಟಿಕೆಯನ್ನು ಬುಡಸಮೇತ ಕಿತ್ತುಹಾಕುವುದಾಗಿ ಘೋಷಿಸಿದ್ದಾರೆ.

ನಕ್ಸಲ್ ಎಂಬುದು ದೇಶಕ್ಕೆ ಅಂಟಿರುವ ಮೊದಲ ಶತ್ರುವಾಗಿದೆ, ಕಳೆದ 12 ವರ್ಷಗಳಲ್ಲಿ ಇದನ್ನು ಮಟ್ಟಹಾಕುವಲ್ಲಿ ಸೂಕ್ತ ಕ್ರಮ ಕೈಗೊಂಡಿರಲಿಲ್ಲ ,ಹೀಗಾಗಿ ದೇಶದ ಪಾಲಿಗೆ ನಕ್ಸಲ್ ಸಮಸ್ಯೆ ದೊಡ್ಡ ಶಾಪವಾಗಿ ಪರಿಣಮಿಸಿದೆ ಎಂದು ದೂರಿದರು. ದೇಶದ ರಕ್ಷಣಾ ಇಲಾಖೆಗೆ ಬಜೆಟ್‌ನಲ್ಲಿ ಹೆಚ್ಚಿನ ಹಣ ನಿಗದಿ ಮಾಡಿದ ಕುರಿತು ಪ್ರತಿಕ್ರಿಯಿಸಿದ ಚಿದು, ಪಾಕಿಸ್ತಾನ ಹಾಗೂ ಚೀನಾ ಭಾರತವನ್ನು ಶತ್ರುರಾಷ್ಟ್ರವನ್ನಾಗಿ ಪರಿಗಣಿಸುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದೆ ಎಂದರು.

ಪಾಕ್ ಮೊದಲಿನಿಂದಲೂ ಭಯೋತ್ಪಾದಕರಿಗೆ ತರಬೇತಿ ನೀಡಿ, ನಂತರ ಅವರನ್ನು ಭಾರತಕ್ಕೆ ಕಳುಹಿಸುತ್ತಿದೆ, ಹೀಗೆ ಬಂದ ಭಯೋತ್ಪಾದಕರು ದೇಶದಲ್ಲಿನ ಹಿಂದೂ ಹಾಗೂ ಮುಸಲ್ಮಾನರ ಸಂಬಂಧ ಹಾಳು ಮಾಡುತ್ತಿದೆ ಎಂದು ದೂರಿದರು. ಪಾಕಿಸ್ತಾನ ಭಯೋತ್ಪಾದನೆಯನ್ನು ಕೈಬಿಟ್ಟು,
ಮಾತುಕತೆಗೆ ಮುಂದಾದಲ್ಲಿ ಭಾರತ ನೆರೆ ರಾಷ್ಟ್ರದ ಜತೆ ಸೌಹಾರ್ದ ಸಂಬಂಧ ಮುಂದುವರಿಸಲು ತಯಾರಿದೆ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X