ಬಳ್ಳಾರಿ : ಅಭಿವೃದ್ಧಿ ಕಾಮಗಾರಿಗೆ ಶ್ರೀರಾಮುಲು ಚಾಲನೆ

ಶನಿವಾರ ಸಂಗನಕಲ್ಲು, ಸಿರವಾರ, ಅಶೋಕನಗರ ಕ್ಯಾಂಪ್, ಶಿವಪುರಗ್ರಾಮ, ಮೊಕಾ ಮತ್ತು ಪಿ.ಡಿ.ಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ, ಸಂಗನಕಲ್ಲು ಗ್ರಾಮದಲ್ಲಿ ಸೋಲಾರ್ ಬೀದಿದೀಪಗಳನ್ನು ಉದ್ಘಾಟಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು. ಫಲಾನುಭವಿಗಳಿಗೆ ಅಟಲ್ ಆರೋಗ್ಯ ಶ್ರೀ' ಕಾರ್ಡುಗಳನ್ನು ವಿತರಿಸಿದರು. ಸರ್ಕಾರದ ವಿವಿಧ ಯೋಜನೆಗಳ ಸದುಪಯೋಗ ಪಡೆದುಕೊಳ್ಳುವಂತೆ ಸಚಿವರು ತಿಳಿಸಿದರು.
ಸಂಗನಕಲ್ಲು ಗ್ರಾಮದಲ್ಲಿ 192 ಕಾಮಗಾರಿಗಳು ನಡೆಯುತ್ತಿದ್ದು, 2.78 ಕೋಟಿ ರು. ವೆಚ್ಚ ಆಗುತ್ತಿದೆ. ಸಿರವಾರ ಗ್ರಾಮದಲ್ಲಿ 1.26 ಕೋಟಿ ರು. ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ 73 ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು, ಹೈಸ್ಕೂಲ್ ಕಾಂಪೌಂಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ಅಶೋಕನಗರ ಕ್ಯಾಂಪ್, ಶಿವಪುರ ಗ್ರಾಮಗಳಿಗೆ ಭೇಟಿನೀಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಸಿಲಿಸಿದರು.
ಶಾಲಾ ಕಟ್ಟಡದ ಉದ್ಘಾಟನೆ: ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡವನ್ನು ಸಚಿವ ಬಿ. ಶ್ರೀರಾಮುಲು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಹೈಸ್ಕೂಲ್‌ನ 125 ಮಕ್ಕಳಿಗೆ ಸೈಕಲ್‌ಗಳನ್ನು ವಿತರಿಸಿದರು. ಈ ಗ್ರಾಮದಲ್ಲಿ 390 ಕಾಮಗಾರಿಗಳು ನಡೆಯುತ್ತಿದ್ದು, 130.23 ಕೋಟಿ ರು. ವೆಚ್ಚ ಮಾಡಲಾಗುತ್ತಿದೆ.
ಪರಮದೇವನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಸಚಿವ, ಈ ಗ್ರಾಮದಲ್ಲಿ 68 ಕಾಮಗಾರಿಗಳು ನಡೆಯುತ್ತಿದ್ದು, 54 ಲಕ್ಷ ರು.ಗಳನ್ನು ವೆಚ್ಚ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎನ್. ರುದ್ರಗೌಡ, ಉಪಾಧ್ಯಕ್ಷೆ ಮಂಜಮ್ಮ, ಜಿಪಂ ಸದಸ್ಯೆ ಗಾಯಿತ್ರಿ ಶಿವಾರೆಡ್ಡಿ, ಬುಡಾ' ಅಧ್ಯಕ್ಷ ಗುರುಲಿಂಗನ ಗೌಡ ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications