ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಬಿಎಂಪಿ ಫಲಿತಾಂಶ: ಓದುಗರ ಗಿಣಿಶಾಸ್ತ್ರ

By Rajendra
|
Google Oneindia Kannada News

BBMP voters hanging parrot astrology
ಬೆಂಗಳೂರು, ಏ. 3 : ಮಾರ್ಚ್ 28 ರಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ನಡೆದ ಚುನಾವಣೆಗಳ ಮತ ಎಣಿಕೆ ಕಾರ್ಯ ಏಪ್ರಿಲ್ 5 ರ ಸೋಮವಾರ ನಡೆಯಲಿದೆ. ಅಂದು ಬೆಳಗ್ಗೆ 8 ಗಂಟೆಯಿಂದ ಆರಂಭವಾಗುವ ಮತ ಎಣಿಕೆ ಬಹುತೇಕ ಸಂಜೆವೇಳೆಗೆ ಮುಕ್ತಾಯವಾಗಲಿದ್ದು ಮಧ್ಯಾನ್ಹದ ವೇಳೆಗೇ ಪಕ್ಷಗಳ ಬಲಾಬಲದ ಚಿತ್ರ ಲಭ್ಯವಾಗಲಿದೆ.

ಭಾರತೀಯ ಜನತಾಪಕ್ಷ, ಜಾತ್ಯತೀತ ಜನತಾದಳ, ಕಾಂಗ್ರೆಸ್ ಮತ್ತು ಪಕ್ಷೇತರರು ಮಹಾನಗರ ಪಾಲಿಕೆಯ ಚುಕ್ಕಾಣಿ ಹಿಡಿಯಲು ಲಗೋರಿ ಹೂಡಿದ್ದಾರೆ. ಅಂತಿಮವಾಗಿ ಯಾರ ಕೈಗೆ ಅಧಿಕಾರ ಹೋಗಲಿದೆ ಎನ್ನುವುದು ಅತ್ಯಂತ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಬೆಂಗಳೂರು ಮತದಾರನ ಒಲವು ಯಾರ ಕಡೆಗೆ ಹೆಚ್ಚಿದೆ ಎನ್ನುವುದನ್ನು ಅರಿಯುವುದಕ್ಕೆ ಕೆಲವು ಖಾಸಗಿ ಸಂಸ್ಥೆಗಳು ಒಟ್ಟಾಗಿ ಚುನಾವಣಾ ಪೂರ್ವ ಸಮೀಕ್ಷೆ ಕೈಗೊಂಡಿದ್ದವು. ಆ ಸಮೀಕ್ಷೆಗಳು ಪ್ರಕಟಿಸಿದ ಫಲಿತಾಂಶ ಹೇಗೂ ಇರಲಿ. ಬೆಂಗಳೂರಿನ ಪ್ರಜೆಗಳಾದ ತಮ್ಮ ಊಹೆ ಮತ್ತು ಕರ್ನಾಟಕ ರಾಜಧಾನಿಯ ಆಗುಹೋಗುಗಳಲ್ಲಿ ಸದಾ ಆಸಕ್ತಿ ತಾಳುವ ಕನ್ನಡಿಗರ ರಾಜಕೀಯ ಲೆಕ್ಕಾಚಾರಗಳೂ ಪಣಕ್ಕೆ ಒಡ್ಡಿಕೊಂಡಿವೆ.

ಒಟ್ಟು 198 ವಾರ್ಡುಗಳಲ್ಲಿ ಅತಿ ಹೆಚ್ಚು ಸ್ಥಾನ ಗಳಿಸುವ ಪಕ್ಷ ಯಾವುದು ಎಂದು ಊಹಿಸುವುದಕ್ಕೆ ದಟ್ಸ್ ಕನ್ನಡ ನಿಮ್ಮನ್ನು ಆಹ್ವಾನಿಸುತ್ತದೆ ಮತ್ತು ವೇದಿಕೆ ಕಲ್ಪಿಸುತ್ತದೆ. ಆಸಕ್ತ ಚಾರಣಿಗರು ಪ್ರಮುಖ ಮೂರು ಪಕ್ಷಗಳಾದ ಬಿಜೆಪಿ, ಕಾಂಗೈ, ಜೆಡಿಎಸ್ ಅಲ್ಲದೆ ಪಕ್ಷೇತರ ಅಭ್ಯರ್ಥಿಗಳು ಅಂಕೆಸಂಖ್ಯೆಗಳ ರಾಜಕೀಯ ಚದುರಂಗದಾಟದಲ್ಲಿ ಎಲ್ಲಿ ನಿಲ್ಲುತ್ತಾರೆ ಎಂಬ ಒಳನೋಟಗಳನ್ನು ಪಕ್ಷಗಳ ಬಲಾಬಲ ಸೂಚಿಸುವ ಮೂಲಕ ಕಾಮೆಂಟ್ ವಿಭಾಗದಲ್ಲಿ ದಾಖಲಿಸುವುದಕ್ಕೆ ಸ್ವಾಗತ ಕೋರುತ್ತಿದ್ದೇವೆ.

ನಿಮ್ಮ ಸಮೀಕ್ಷೆಯ ಫಲಿತಾಂಶಗಳು ಹೀಗೆ ಹೊಮ್ಮಲಿ:ಒಂದು ಉದಾಹರಣೆ : ಭಾಜಪ xxx ಕಾಂಗ್ರೆಸ್ xxx ಜೆಡಿ ಎಸ್ xxx ಪಕ್ಷೇತರರು xx. ನಿಮ್ಮ ಲೆಕ್ಕಾಚಾರಗಳು ನಿಜವೇ ಆಗಿಬರಲಿ. ಸೋಮವಾರ ದಟ್ಸ್ ಕನ್ನಡ ದಾಖಲಿಸುವ ಅಧಿಕೃತ ಫಲಿತಾಂಶ ಪಟ್ಟಿಯೊಂದಿಗೆ ನಿಮ್ಮ ಊಹೆಗಳನ್ನು ತಾಳೆಹಾಕಿ ನೋಡಿಕೊಳ್ಳಿರಿ. ಗುಡ್ ಲಕ್.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X