ಕೆಎಸ್ಆರ್ ಟಿಸಿ ದೈನಿಕ ಬಸ್ ಪಾಸ್ ಹೆಚ್ಚಳ

KSRTC bus
ಬೆಂಗಳೂರು, ಏ. 1 : ಪೆಟ್ರೋಲ್ ಡೀಸೆಲ್ ದರ ಮತ್ತೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ತನ್ನ ಸಂಯುಕ್ತ ದೈನಿಕ ಬಸ್ ಪಾಸ್ ದರವನ್ನು ಹೆಚ್ಚಿಸಿದೆ.

ಬೆಂಗಳೂರಿಗೆ ಸಮೀಪವಿರುವ ಪಟ್ಟಣ ಹಾಗೂ ನಗರಗಳಿಂದ ಸಾಕಷ್ಟು ಜನರು ಕೆಎಸ್ಆರ್ ಟಿಸಿ ಬಸ್ ಗಳ ಮೂಲಕ ನಿತ್ಯವೂ ಸಂಚರಿಸುತ್ತಾರೆ. ಅವರೆಲ್ಲರೂ ದೈನಿಕ ಪಾಸ್ ಗಳನ್ನು ಅವಲಂಬಿಸಿದ್ದಾರೆ. ಹೀಗಾಗಿ ಇಂತಹ ಪ್ರಯಾಣಿಕರ ಜೇಬಿಗೆ ಸರಕಾರ ಮತ್ತೆ ಕತ್ತರಿ ಹಾಕಿದ್ದು. ಕೆಎಸ್ ಆರ್ ಟಿಸಿ ದೈನಿಕ ಸಂಯುಕ್ತ ಪಾಸ್ ದರವನ್ನು ಗರಿಷ್ಟ 10 ರುಪಾಯಿ ಹೆಚ್ಚಳ ಮಾಡಲಾಗಿದೆ.

ಕನಕಪುರದಿಂದ ಬೆಂಗಳೂರಿಗೆ 70 ರಿಂದ 80 ರುಪಾಯಿಗೆ ಹೆಚ್ಚಿಸಲಾಗಿದೆ. ಹಾರೋಹಳ್ಳಿಯಿಂದ ಬೆಂಗಳೂರಿಗೆ 50 ರಿಂದ 60ರುಪಾಯಿ, ಚನ್ನಪಟ್ಟಣದಿಂದ ಬೆಂಗಳೂರಿಗೆ 70 ರಿಂದ 80 ರುಪಾಯಿ, ರಾಮನಗರದಿಂದ ಬೆಂಗಳೂರಿಗೆ 56 ರಿಂದ 65 ರುಪಾಯಿಗೆ ಹೆಚ್ಚಿಸಲಾಗಿದೆ.

ಮಾಗಡಿಯಿಂದ ಬೆಂಗಳೂರಿಗೆ 50 ರಿಂದ 60 ರುಪಾಯಿಗೆ, ಕುಣಿಗಲ್ ನಿಂದ ಬೆಂಗಳೂರಿಗೆ 80 ರಿಂದ 85 ರುಪಾಯಿಗೆ ಹೆಚ್ಚಿಸಲಾಗಿದೆ. ತುಮಕೂರಿನಿಂದ ಬೆಂಗಳೂರಿಗೆ 85 ರಿಂದ 90 ರುಪಾಯಿಗೆ, ಗೌರಿಬಿದನೂರಿನಿಂದ ಬೆಂಗಳೂರಿಗೆ 90 ರಿಂದ 100ರುಪಾಯಿಗೆ, ಶಿಢ್ಲಘಟ್ಟದಿಂದ ಬೆಂಗಳೂರಿಗೆ 60 ರಿಂದ 70 ರುಪಾಯಿ, ಚಿಂತಾಮಣಿಯಿಂದ ಬೆಂಗಳೂರಿಗೆ 90 ರಿಂದ 100 ದರವನ್ನು ನಿಗದಿಪಡಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+